ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಗೌರಿ ಹತ್ಯೆ ತನಿಖೆ ದಿಕ್ಕು ತಪ್ಪಿಸಲು ಬ್ರಾಹ್ಮಣಶಾಹಿ ಮಾಧ್ಯಮ ಯತ್ನ'

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 18 : ಬ್ರಾಹ್ಮಣಶಾಹಿ ಮಾಧ್ಯಮಗಳೇ ಸತ್ಯ ವಿಷಯಗಳನ್ನು ತಿರುಚುವ ಪ್ರಯತ್ನ ಮಾಡುತ್ತಿವೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಕೋಮುವಾದಿಗಳು ಕಾರಣ ಎನ್ನುವ ಅನುಮಾನವನ್ನು ನಕ್ಸಲರತ್ತ ತಿರುಗಿಸುವ ಯತ್ನ ಆ ಮಾಧ್ಯಮಗಳಿಂದ ನಡೆದಿದೆ ಎಂದು ಚಿಂತಕ ಯೋಗೇಶ್ ಮಾಸ್ಟರ್ ಕಿಡಿ ಕಾರಿದ್ದಾರೆ.

ಲೇಖಕ ಯೋಗೀಶ್ ಮಾಸ್ಟರ್ ಗೆ ಮಸಿ ಬಳಿದು, ಜೀವ ಬೆದರಿಕೆಲೇಖಕ ಯೋಗೀಶ್ ಮಾಸ್ಟರ್ ಗೆ ಮಸಿ ಬಳಿದು, ಜೀವ ಬೆದರಿಕೆ

ವೈಚಾರಿಕ ಚಳವಳಿಗಾರ ಪೆರಿಯಾರ್ ಈ.ವೆಂ.ರಾಮಸ್ವಾಮಿ 138ನೇ ಜನ್ಮದಿನದ ಅಂಗವಾಗಿ ವಿವಿಧ ಸಂಘ-ಸಂಸ್ಥೆ ಆಶ್ರಯದಲ್ಲಿ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಪೆರಿಯಾರ್ ಸಂಪುಟ ಬಿಡುಗಡೆ ಮತ್ತಿತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Brahmins will ruin the nation: Yogesh Master

ಗೌರಿ, ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಅವರನ್ನು ಕೊಂದ ಮನಸ್ಸುಗಳ ಪರಿಸ್ಥಿತಿಯೂ ಅದಕ್ಕೆ ಉದಾರಹಣೆಯಾಗಿದೆ. ಬ್ರಾಹ್ಮಣಶಾಹಿಯು ಕೇವಲ ಮಾಧ್ಯಮಗಳಲ್ಲದೆ, ಸಾಂಸ್ಕೃತಿಕತೆ, ರಾಜಕೀಯ ಕ್ಷೇತ್ರದಲ್ಲೂ ನಿಯಂತ್ರಣ ಹೊಂದಿವೆ. ಅಲ್ಪಪ್ರಾಣ, ಮಹಾಪ್ರಾಣ ಇತ್ಯಾದಿಗಳ ಮೂಲಕ ಕನ್ನಡವನ್ನು ಸಂಸ್ಕೃತವಾಗಿ ಪರಿವರ್ತನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಪೇಜಾವರ ಶ್ರೀಗಳ ಬಗ್ಗೆ ಯೋಗೇಶ್ ಮಾಸ್ಟರ್ ಹೀನಾಯ ವಿಡಂಬನೆಪೇಜಾವರ ಶ್ರೀಗಳ ಬಗ್ಗೆ ಯೋಗೇಶ್ ಮಾಸ್ಟರ್ ಹೀನಾಯ ವಿಡಂಬನೆ

ಅದರಲ್ಲಿ ಧರ್ಮ, ದೇವರು, ರಾಷ್ಟ್ರೀಯತೆ, ರಾಜಕೀಯ ಪ್ರಭುತ್ವ ಎಂಬ ಅನಗತ್ಯ ವಿಷಯಗಳನ್ನು ಎಳೆದು ತರುತ್ತಿದ್ದಾರೆ. ಹಾಗಾಗಿ ಕನ್ನಡವನ್ನು ಕೂಡ ಬ್ರಾಹ್ಮಣಶಾಹಿಯಿಂದ ಮುಕ್ತಗೊಳಿಸಿ, ಭಾಷೆಯಲ್ಲಿ ಕೂಡ ನಮ್ಮತನವನ್ನು ಉಳಿಸಿಕೊಳ್ಳುವ ಅಗತ್ಯ ಇದೆ ಎಂದರು.

ಗಂಜಲ ಗಿರಾಕಿಗಳು
ಪ್ರಗತಿಪರರಿಗೆ ಸ್ವಲ್ಪ ಅಂತರದಲ್ಲೇ ನಿಂತು ಗಂಜಿ ಗಿರಾಕಿಗಳು' ಎಂದು ಹೇಳುತ್ತಿರುವ ಮೂಲಭೂತವಾದಿಗಳನ್ನು ಗಂಜಲ ಗಿರಾಕಿಗಳು' ಎನ್ನಬಹುದು. ಕೊಲೆಯನ್ನು ಸಂಭ್ರಮಿಸುವುದು ಅವರ ಕ್ರೂರತೆಗೆ ಸಾಕ್ಷಿಯಾಗಿದೆ. ಡಾ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಅವರ ಹತ್ಯೆಗೆ ಒಂದೇ ಮಾದರಿಯ ಗನ್ ಗಳನ್ನು ಬಳಸಲಾಗಿದೆ ಎಂದರು.

ಮತ್ತೊಂದು ವಿವಾದ ಹುಟ್ಟುಹಾಕಿದ ಯೋಗೇಶ್‌ ಮಾಸ್ಟರ್‌ಮತ್ತೊಂದು ವಿವಾದ ಹುಟ್ಟುಹಾಕಿದ ಯೋಗೇಶ್‌ ಮಾಸ್ಟರ್‌

ಬಹುಶಃ ಆ ಆಯುಧಗಳನ್ನೂ ವೈದಿಕಶಾಹಿ, ಕೊಲೆಗಾರರಿಗೆ ದೀಕ್ಷೆ'ಯಲ್ಲಿ ನೀಡಿರಬಹುದು ಎಂದು ಮಾಸ್ಟರ್ ಮಾರ್ಮಿಕವಾಗಿ ನುಡಿದರು. ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಬ್ರಾಹ್ಮಣಶಾಹಿ ವಿರುದ್ಧ ಹಲವಾರು ಸಂಶೋಧನೆ, ಅಧ್ಯಯನಗಳು ನಡೆದಿವೆ. ಆದರೆ ಅವು ಜನಸಾಮಾನ್ಯರನ್ನು ತಲುಪಿಲ್ಲ ಎಂದು ಅವರು ಹೇಳಿದರು.

English summary
Brahmins will ruin the nation, said by Yogesh Master at Mysuru. He was speaking about journalist Gauri Lankesh murder. This brahmin mindset medias misleading the investigation, he further added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X