ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರಭಾರತಕ್ಕೆ ಹೋದರೂ ಪ್ರಶ್ನೆಯಾಗಿಯೇ ಉಳಿದ ಬ್ರಾಹ್ಮಣರ ವಧು ಸಮಸ್ಯೆ

By Yashaswini
|
Google Oneindia Kannada News

ಮೈಸೂರು, ಜುಲೈ 3 : ಬ್ರಾಹ್ಮಣ ಸಮಾಜದಲ್ಲಿ ಎದುರಾಗಿರುವ ಬಹು ದೊಡ್ಡ ಸಮಸ್ಯೆಯಾದ ವಧುವಿನ ಕೊರತೆಯನ್ನು ನೀಗಿಸಲು ಕೆಲವು ಬ್ರಾಹ್ಮಣ ಸಭಾದವರು ಮಾಡಿದ್ದ ಪ್ರಯತ್ನ ಬೇಸರ ಮೂಡುವಷ್ಟು ಹೀನಾಯವಾಗಿ ವಿಫಲವಾಗಿದೆ. ವಾರಾಣಸಿಯಿಂದ ಕನ್ಯೆಯರನ್ನು ಮೈಸೂರಿಗೆ ಕರೆತಂದು ರಾಜ್ಯದ ಬ್ರಾಹ್ಮಣ ವರರಿಗೆ ಮದುವೆ ಮಾಡಲು ಕಳೆದ ವರ್ಷ ಮುಂದಾಗಿದ್ದ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ.

ಈ ಹಿಂದೆ ವಾರಾಣಸಿಯ ಕೇಂದ್ರೀಯ ಬ್ರಾಹ್ಮಣ ಮಹಾಸಭಾದ ಸಿಬ್ಬಂದಿ ಮೈಸೂರಿನ ವಿಪ್ರ ಪರಸ್ಪರ ಸಹಾಯ ಸಮಿತಿ ಜತೆಗೆ ವಧು -ವರರ ಬಗ್ಗೆ ಮಾತುಕತೆ ನಡೆಸಿದ್ದರು. ಉತ್ತರ ಪ್ರದೇಶದ ಕನ್ಯೆಯರನ್ನು ಮೈಸೂರಿಗೆ ಕರೆತರುವುದು ಅವರ ಉದ್ದೇಶವಾಗಿತ್ತು. ಆದರೆ ಹಲವು ಬಾರಿ ಪ್ರಯತ್ನ ಮಾಡಿದರೂ ಯಶಸ್ವಿಯಾಗಿಲ್ಲ.

ಮದುವೆಯಾಗಲು ಸಂಬಳ ಎಷ್ಟಿರಬೇಕು? ಪಾಠ ಒಂದು...ಮದುವೆಯಾಗಲು ಸಂಬಳ ಎಷ್ಟಿರಬೇಕು? ಪಾಠ ಒಂದು...

ಉತ್ತರ ಭಾರತದಲ್ಲಿನ ಕಡು ಬಡವ ಬ್ರಾಹ್ಮಣ ಕನ್ಯೆಯರನ್ನು ರಾಜ್ಯದ ಬ್ರಾಹ್ಮಣ ವರರಿಗೆ ತಂದುಕೊಳ್ಳುವ ಯೋಜನೆ ಹೂಡಿತ್ತು ಬ್ರಾಹ್ಮಣ ಮಹಾಸಭಾ. ಆದರೆ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ವರ ದೊಡ್ಡ ಹುದ್ದೆಯಲ್ಲಿದ್ದರೆ ಮಾತ್ರ ಉತ್ತರ ಭಾರತದ ಕನ್ಯೆಯ ಕುಟುಂಬದವರು ಉತ್ಸಾಹ ತೋರಿಸುತ್ತಿದ್ದಾರೆ ಎಂದು ವರನ ಕಡೆಯವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೃಷಿಕರು, ಪುರೋಹಿತರು ಹಾಗೂ ಅಡುಗೆಯವರು ಬೇಡ

ಕೃಷಿಕರು, ಪುರೋಹಿತರು ಹಾಗೂ ಅಡುಗೆಯವರು ಬೇಡ

ನಮ್ಮ ಮಗಳು ನೆಮ್ಮದಿಯ ಜೀವನ ಮಾಡಬೇಕು ಎಂಬ ಆಲೋಚನೆಯಲ್ಲಿರುವ ಹೆಣ್ಣುಮಕ್ಕಳ ಪೋಷಕರು, ಕೃಷಿ ಕುಟುಂಬದವರು, ಪುರೋಹಿತರು ಹಾಗೂ ಅಡುಗೆ ಕೆಲಸದಲ್ಲಿ ತೊಡಗಿರುವವರನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದಾರೆ. ಇದು ಉತ್ತಮ ಕೆಲಸವಲ್ಲ ಎನ್ನುವ ಮೂಲಕ ತಮ್ಮ ಅಳಿಯನೋ ಅಥವಾ ಗಂಡನೋ ಈ ಕೆಲಸ ನಿರ್ವಹಿಸುವುದು ಇಷ್ಟವಿಲ್ಲ ಎನ್ನುತ್ತಿದ್ದಾರೆ.

ಸದ್ಯಕ್ಕೆ ಒಂದು ಮಾತುಕತೆ ನಡೆಯುತ್ತಿದೆ

ಸದ್ಯಕ್ಕೆ ಒಂದು ಮಾತುಕತೆ ನಡೆಯುತ್ತಿದೆ

ವಧು ಅನ್ವೇಷಣೆ ವೈಫಲ್ಯಕ್ಕೆ ಬ್ರಾಹ್ಮಣ ಸಮುದಾಯದ ನಾಯಕರು ಹಲವಾರು ವ್ಯವಸ್ಥಾಪಕ ಮತ್ತು ಆರ್ಥಿಕ ಕಾರಣಗಳನ್ನು ನೀಡಿದ್ದಾರೆ. ಇನ್ನು ಉತ್ತರ ಪ್ರದೇಶದ ಕನ್ಯೆಯೊಬ್ಬರು ಹಾಗೂ ಮೈಸೂರಿನ ವರರೊಬ್ಬರ ನಡುವೆ ಮಾತುಕತೆ ನಡೆಯುತ್ತಿದ್ದು, ಇದು ಯಶಸ್ವಿಯಾದರೆ ಮುಂದೆ ಇಂಥ ಮದುವೆ ಹೆಚ್ಚು ಮಾಡಬಹುದು ಎನ್ನುತ್ತಿದ್ದಾರೆ.

ಬ್ರಾಹ್ಮಣರಿಗೆ ವಧುವಿನ ಕೊರತೆ : ಕಲ್ಯಾಣಕ್ಕೆ ಹೊಸ ಪ್ಲಾನ್!ಬ್ರಾಹ್ಮಣರಿಗೆ ವಧುವಿನ ಕೊರತೆ : ಕಲ್ಯಾಣಕ್ಕೆ ಹೊಸ ಪ್ಲಾನ್!

ಭಾಷೆ ಸಮಸ್ಯೆಯೊಂದಿದೆ

ಭಾಷೆ ಸಮಸ್ಯೆಯೊಂದಿದೆ

ಆದರೆ, ಸನ್ನಿವೇಶವೇ ಬೇರೆ ಇದೆ. ಈ ಹಿಂದೆ ಮಾತುಕತೆ ನಡೆಸಿದ್ದ ಅನೇಕ ವರನ ಕಡೆಯವರು ಅಲ್ಲಿನ ವಧುವಿನ ಕಡೆಯ ಬೇಡಿಕೆಗಳನ್ನು ಕೇಳಿ ದಂಗಾಗಿ ಹೋಗಿದ್ದನ್ನು ಮರೆಯುವಂತಿಲ್ಲ. ಮೈಸೂರಿನಿಂದ ಮಾತುಕತೆಗಾಗಿ ಉತ್ತರ ಪ್ರದೇಶಕ್ಕೆ ಹೋಗಬೇಕು. ಇದರ ಜತೆಗೆ ಅಲ್ಲಿನವರು ಹಿಂದಿಯಲ್ಲಿ ಮಾತನಾಡಿದರೆ, ಮೈಸೂರಿನ ಕಡೆಯವರು ಕನ್ನಡ ಹಾಗೂ ಇಂಗ್ಲಿಷ್‌ ನಲ್ಲಿ ಮಾತನಾಡುತ್ತಾರೆ. ಆದ್ದರಿಂದ ಭಾಷೆ ತೊಡಕಿದೆ.

ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...

ಬ್ರಾಹ್ಮಣ ಮಹಾಸಭಾದ ಮುಂದಿನ ದಾರಿ ಏನು?

ಬ್ರಾಹ್ಮಣ ಮಹಾಸಭಾದ ಮುಂದಿನ ದಾರಿ ಏನು?

ಹೀಗಾಗಿ ಒಂದು ಸಾಮಾನ್ಯ ವೇದಿಕೆ ಅಗತ್ಯವಿದೆ. ಇದರ ಜತೆಗೆ ಉತ್ತರ ಪ್ರದೇಶದ ಬ್ರಾಹ್ಮಣ ಕುಟುಂಬದವರ ಆರ್ಥಿಕ ಸ್ಥಿತಿ ಉತ್ತಮವಾಗುತ್ತಿರುವುದರಿಂದಲೂ ಸಂಬಂಧ ಬೆಳೆಸಲು ತೊಂದರೆಯಾಗುತ್ತಿದೆ. ಒಟ್ಟಾರೆ ಬ್ರಾಹ್ಮಣರಲ್ಲಿ ಎದುರಾಗಿದ್ದ ವಧುವಿನ ಕೊರತೆ ಸಮಸ್ಯೆಗೆ ಉತ್ತರ ಭಾರತದಿಂದ ಕನ್ಯೆಯನ್ನು ಕರೆತಂದು ವಿವಾಹ ನಡೆಸುವ ಮೂಲಕವಾದರೂ ಬಗೆಹರಿಯುತ್ತದೆ ಎಂದು ಭಾವಿಸಿದ್ದ ಯೋಜನೆಯೂ ಹಳ್ಳ ಹಿಡಿಯುವಂತಾಗಿದ್ದು, ಮುಂದೆ ಯಾವ ಪರಿಹಾರವನ್ನು ಬ್ರಾಹ್ಮಣ ಮಹಾಸಭಾ ಕಂಡುಕೊಳ್ಳುತ್ತದೆ ಎಂಬುದು ಕಾದುನೋಡಬೇಕಿದೆ.

ಬ್ರಾಹ್ಮಣರು ನಿತ್ಯ ಕರ್ಮ, ಸಂಧ್ಯಾವಂದನೆ ಮಾಡುವುದು ಪಾಪ ಕೃತ್ಯವೆ?ಬ್ರಾಹ್ಮಣರು ನಿತ್ಯ ಕರ್ಮ, ಸಂಧ್ಯಾವಂದನೆ ಮಾಡುವುದು ಪಾಪ ಕೃತ್ಯವೆ?

English summary
Brahmins community bride shortage not solved after visiting North India by Mysuru Brahmin Mahasabha. Demand of girls parents are same and their thinking, language problem make no difference. Here is the complete story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X