ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ತೊರೆದು ಜೆಡಿಎಸ್ ಸೇರಲಿದ್ದಾರಾ ವಿ. ಶ್ರೀನಿವಾಸ್ ಪ್ರಸಾದ್?

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಏಪ್ರಿಲ್ 10 : ಕಳೆದ ವರುಷವಷ್ಟೇ ಸಿಎಂ ಸಿದ್ದರಾಮಯ್ಯನವರ ನಡೆಗೆ ಬೇಸತ್ತು, ಕೈ ತೊರೆದು ಕಮಲ ಮುಡಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಇದೀಗ ಬಿಜೆಪಿ ತೊರೆಯಲು ಮುಂದಾಗಿದ್ದಾರಾ ? ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ.

ಸಿಎಂ ಸಮಾಜವಾದಿಯಲ್ಲ, ಆತನ ಸೋಲಿಸಿಯೇ ಸಿದ್ದ:ಶ್ರೀನಿವಾಸ ಪ್ರಸಾದ್ಸಿಎಂ ಸಮಾಜವಾದಿಯಲ್ಲ, ಆತನ ಸೋಲಿಸಿಯೇ ಸಿದ್ದ:ಶ್ರೀನಿವಾಸ ಪ್ರಸಾದ್

ಇದಕ್ಕೆ ಪೂರಕವೆಂಬಂತೆ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರನ್ನು ಇಂದು ಭೇಟಿ ನೀಡಿ ಮಾತುಕತೆ ನಡೆಸಿದರು. ಇದೀಗ ಮಧು ಬಂಗಾರಪ್ಪ ಭೇಟಿ ಭಾರೀ ಕುತೂಹಲ ಮೂಡಿಸಿದ್ದು, ಮಧು ಬಂಗಾರಪ್ಪ ಶ್ರೀನಿವಾಸ್ ಪ್ರಸಾದ್ ಅವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪುಸ್ತಕದಲ್ಲಿ ಏನಿದೆ? ಮುಖ್ಯಾಂಶಗಳುಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪುಸ್ತಕದಲ್ಲಿ ಏನಿದೆ? ಮುಖ್ಯಾಂಶಗಳು

BJPs Srinivas Prasad meets JDS Madhu Bangarappa today

ಮಧು ಜೊತೆಗೆ ಸ್ಥಳೀಯ ಜೆಡಿಎಸ್ ನಾಯಕರಿದ್ದು, ಶ್ರೀನಿವಾಸ ಪ್ರಸಾದ್ ಬಿಜೆಪಿ ಬಿಡುತ್ತಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಅತ್ತ ಎಸ್. ಎಂ ಕೃಷ್ಣ ಬಿಜೆಪಿ ಬಿಡುವ ಬಗ್ಗೆ ಚರ್ಚೆ ಆರಂಭವಾದ ಬೆನ್ನಲ್ಲೇ, ಇತ್ತ ಶ್ರೀನಿವಾಸ ಪ್ರಸಾದ್ ಅವರು ಕೂಡ ಬಿಜೆಪಿ ಬಿಡುವ ಕುರಿತು ಚರ್ಚೆ ಆರಂಭಿಸಿದ್ದಾರೆ.

BJPs Srinivas Prasad meets JDS Madhu Bangarappa today

ಇನ್ನು ಶ್ರೀನಿವಾಸ್ ಪ್ರಸಾದ್ ಭೇಟಿ ಬಳಿಕ ಮಾತನಾಡಿದ ಮಧು ಬಂಗಾರಪ್ಪ, 'ಇದು ಕೇವಲ ಔಪಚಾರಿಕ ಭೇಟಿ ಅಷ್ಟೇ. ಅವರು ಹಿರಿಯರಿದ್ದಾರೆ ಚುನಾವಣೆಯಲ್ಲಿ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹೇಳಿದರು. ಮಧು ಬಂಗಾರಪ್ಪ ಭೇಟಿ ಕೇವಲ ಔಪಚಾರಿಕ ಭೇಟಿಯಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಕೂಡ ಸ್ಪಷ್ಟಪಡಿಸಿದ್ದಾರೆ. ಎಸ್.ಎಂ.ಕೃಷ್ಣ ಅವರು ಬಿಜೆಪಿ ತೊರೆಯುವುದಿಲ್ಲ. ಅವರ ಜೊತೆ ಮಾತನಾಡಲಾಗಿದೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

English summary
Karnataka Assembly elections 2018: BJP leader V Srinivas Prasad met JDS leader Madhu Bangarappa today. There is a rumour that Srinivas Prasad is unhappy with BJP and he is planning to join JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X