ಬಿಜೆಪಿ ವೈಮನಸ್ಯ: ನೋ ಕಮೆಂಟ್ಸ್ ಎಂದ ಶೋಭಾ ಕರಂದ್ಲಾಜೆ

By: ಯಶಸ್ವಿನಿ ಎಂ.ಕೆ.
Subscribe to Oneindia Kannada

ಮೈಸೂರು, ಜನವರಿ 27 : ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮತ್ತು ಬಿಜೆಪಿ ಮುಖಂಡ ಈಶ್ವರಪ್ಪ ನಡುವೆ ನಡೆಯುತ್ತಿರು ತೀವ್ರ ಜಟಾಪಟಿಯ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆಯವರನ್ನು ಕೇಳಿದರೆ ಈ ಬಗ್ಗೆ ಮಾತನಾಡುವ ಹಕ್ಕು ನನಗಿಲ್ಲ ನೋ ಕಾಮಿಂಟ್ಸ್ ಪ್ಲೀಸ್ ಎಂದಿದ್ದಾರೆ.

ಬಿಜೆಪಿಯಲ್ಲಿ ತಲೆದೋರಿರುವ ಎಲ್ಲ ಸಮಸ್ಯೆಗಳಿಗೂ ಇಂದು(ಜ.27) ಸಂಜೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ತೆರೆ ಬೀಳಲಿದೆ. ಹಾಗು ಬಿಜೆಪಿಯಲ್ಲಿ ಶಾಂತಿ ಮತ್ತೆ ನೆಲೆಯೂರಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಡೆಯುತ್ತಿರುವ ಆದಾಯ ತೆರಿಗೆ ಅಧಿಕಾರಿಗಳ ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನೋಟು ಅಮಾನ್ಯಗೊಂಡ ನಂತರ ಲೆಕ್ಕವಿಲ್ಲದ ಹೊಸ ನೋಟುಗಳ ಸಂಗ್ರಹಿಸಿರುವ ಮಾಹಿತಿ ಬಂದೆಡೆ ಹಾಗೂ ಅನುಮಾನಸ್ಪದ ವ್ಯವಹಾರ ನಡೆಸುತ್ತಿರುವ ಕಡೆ ದಾಳಿ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.[ನಗದು ರಹಿತ ಎಲ್‌ಪಿಜಿ ಗ್ಯಾಸ್ ವಿತರಣೆಗೆ ಸಂಸದೆ ಶೋಭಾ ಚಾಲನೆ]

bjp crises: Shobha Karandlaje don't want to say anything

ಕಾಂಗ್ರೆಸ್ಸಿನಲ್ಲಿ ಭ್ರಷ್ಟಾಚಾರ
ನನ್ನ ರಾಜೀನಾಮೆ ತೆಗೆದುಕೊಳ್ಳುವ ಪರಿಸ್ಥಿತಿ ಸರ್ಕಾರಕ್ಕೆ ಎದುರಾದರೆ ಇಡೀ
ಮಂತ್ರಿಮಂಡಲದ ಎಲ್ಲಾ ಸಚಿವರು ರಾಜೀನಾಮೆ ನೀಡಬೇಕಾಗುವುದೆಂದು ಸಚಿವ ರಮೇಶ್ ಜಾರಕಿಹೊಳಿಯವರು ಬಹಿರಂಗ ಹೇಳಿಕೆ ನೀಡಿರುವುದು ಹಾಗೂ ಜಯಚಂದ್ರ, ಚಿಕ್ಕರಾಯಪ್ಪನವರ ಪ್ರಕರಣಗಳಿಂದ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಬರಿಗಣ್ಣಿಗೇ ಕಾಣುವಂತಿದೆ. ರಾಜಕಾರಣಿಗಳಿಗೆ ಬರುವ ಅನುದಾನ ನೇರವಾಗಿ ಭ್ರಷ್ಟಾಚಾರಿಗಳ ಕೈಸೇರುತ್ತಿದೆ
ಎಂದು ಕಾಂಗ್ರೆಸ್ ಸರ್ಕಾರವನ್ನು ದೂಷಿಸಿದರು.

bjp crises: Shobha Karandlaje don't want to say anything

ಅಧೋಗತಿಯತ್ತ ಆರೋಗ್ಯ ಇಲಾಖೆ :
ಆರೋಗ್ಯ ಇಲಾಖೆ ರಮೇಶ್ ಕುಮಾರ್ ಅವರು ಬಂದ ನಂತರ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಆರೋಗ್ಯ ಸುರಕ್ಷಾ ಟ್ರಸ್ಟ್, ಸಿಎಂ ಹರೀಶ್ ಸಾಂತ್ವನ, ರಾಜೀವ್ ಆರೋಗ್ಯ ಶ್ರೀ ಯೋಜನೆ ಸೇರಿ ಐದು ಯೋಜನೆಗಳನ್ನು ಸರ್ಕಾರ ರೂಪಿಸಿತ್ತು. ಅವು ಬಡವರಿಗೆ ದೊರೆಯದಂತಾಗಿದೆ. ಇನ್ನು ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ 150 ಕೋಟಿ ಹಣ ಬಿಡುಗಡೆ ಮಾಡಿ ಪರದಾಡುತ್ತಿರುವ ರೋಗಿಗಳ ಸಂಕಷ್ಟವನ್ನು ನಿವಾರಣೆ ಮಾಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

bjp crises: Shobha Karandlaje don't want to say anything

ತರಾತುರಿಯಲ್ಲಿ ಪಠ್ಯ ಬದಲಾವಣೆ :
ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 1 ರಿಂದ 8 ನೇ ತರಗತಿವರೆಗೆ ಪಠ್ಯ ಪುಸ್ತಕ
ಬದಲಾವಣೆಯನ್ನು ತರಾತುರಿಯಲ್ಲಿ ಮಾಡಲಾಗುತ್ತಿದೆ. ಈ ವಿಚಾರ ಪಠ್ಯಪುಸ್ತಕ ರಚನಾ ಸಮಿತಿಯ ಗಮನಕ್ಕೂ ಬಂದಿಲ್ಲ. ಪಠ್ಯದಲ್ಲಿ ಮಹಾನ್ ವ್ಯಕ್ತಿಗಳ ವಿಷಯಗಳನ್ನು ತೆಗೆದು ಹಾಕಲು ಮುಂದಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ರಾಷ್ಟ್ರೀಯ
ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಹೇಳಿದೆ. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದ ರಾಜ್ಯ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸಿಲು ಹೊರಟಿದೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shobha Karandlaje, BJP MP from Chikmagalur and Udupi Constituency, vent her anger against the state government and Minister for Primary and Secondary Education Tanveer Sait over his statements on changing the syllabus for Class 8, 9 and 10.
Please Wait while comments are loading...