ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿ 13ರಂದು ಮೈಸೂರು ವ್ಯಾಪ್ತಿಯಲ್ಲಿ ಪಕ್ಷಿ ಗಣತಿ

|
Google Oneindia Kannada News

ಮೈಸೂರು, ಡಿಸೆಂಬರ್ 05: ಮೈಸೂರು ನೇಚರ್ಸ್ ಸಂಸ್ಥೆಯ ವತಿಯಿಂದ ಜ .13 ರಂದು ಮೈಸೂರು ನಗರ ಮತ್ತು ಜಿಲ್ಲೆ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 24 ಮಾರ್ಗಗಳ, 204 ಪ್ರದೇಶಗಳಲ್ಲಿ ಪಕ್ಷಿ ಗಣತಿ ನಡೆಯಲಿದೆ ಎಂದು ಪಕ್ಷಿ ತಜ್ಞ ಎ.ಶಿವಪ್ರಕಾಶ್ ತಿಳಿಸಿದ್ದಾರೆ.

ಕೆರೆ, ಕುರುಚಲು, ಅರಣ್ಯ ಪ್ರದೇಶ, ವ್ಯವಸಾಯ ಭೂಮಿ, ಹಿನ್ನೀರಿನ ಪ್ರದೇಶ, ವಿಶಾಲ ಪ್ರದೇಶ ಮತ್ತು ಮರ ಗಿಡಗಳಿರುವ ತೋಪುಗಳಲ್ಲಿ ಪಕ್ಷಿ ವೀಕ್ಷಣೆ ಮಾಡಿ ಗಣತಿ ನಡೆಯಲಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಗಣತಿ ಕಾರ್ಯ ಮಾಡಲಿದ್ದಾರೆ. ಒಂದೊಂದು ರೂಟ್‌ಗೆ ಒಂದು ತಂಡವನ್ನು ನೇಮಿಸಲಾಗುತ್ತದೆ.

ಚಾಮರಾಜನಗರ ಜಿಲ್ಲೆಯಲ್ಲಿ ನೆಲೆಯೂರಿದ ರಷ್ಯಾ ಅತಿಥಿ!ಚಾಮರಾಜನಗರ ಜಿಲ್ಲೆಯಲ್ಲಿ ನೆಲೆಯೂರಿದ ರಷ್ಯಾ ಅತಿಥಿ!

ಈ ತಂಡದಲ್ಲಿ ಮೂವರಿಂದ ನಾಲ್ವರು ಪಕ್ಷಿ ವೀಕ್ಷಕರು ಇರುತ್ತಾರೆ. ದೂರದರ್ಶಕ ಮತ್ತು ಕ್ಯಾಮೆರಾ ಮೂಲಕ ಪಕ್ಷಿಗಳನ್ನು ಪತ್ತೆ ಹಚ್ಚಲಾಗುತ್ತದೆ. ಪಕ್ಷಿಗಳ ಹೆಸರು, ಗೂಡು, ಮರದ ಹೆಸರು, ಒಂದು ಮರದಲ್ಲಿ ಎಷ್ಟು ಗೂಡುಗಳಿವೆ, ಯಾವ ಮರದಲ್ಲಿ ಹೆಚ್ಚು ಕಟ್ಟಿವೆ ಎಂಬ ಮಾಹಿತಿಯನ್ನು ಗಣತಿದಾರರು ಕಲೆ ಹಾಕುತ್ತಾರೆ.

Bird census will begin in the Mysore range

ವಲಸೆ ಪಕ್ಷಿಗಳ ಗಣತಿಯೂ ನಡೆಯಲಿದ್ದು, ಯಾವ ಪ್ರದೇಶದಿಂದ ಮೈಸೂರಿನ ಭಾಗಕ್ಕೆ ವಲಸೆ ಬಂದಿವೆ. ಪಕ್ಷಿಯ ಲಕ್ಷಣ, ದೇಹ ರಚನೆ ಸೇರಿದಂತೆ ಎಲ್ಲವನ್ನು ದಾಖಲಿಸಿಕೊಳ್ಳಲಾಗುತ್ತದೆ. ಸ್ಥಳೀಯ ಹಾಗೂ ವಲಸೆ ಪಕ್ಷಿಗಳನ್ನು ಪ್ರತ್ಯೇಕವಾಗಿ ಗಣತಿ ಮಾಡಲಾಗುತ್ತದೆ.

ಜತೆಗೆ ಅವುಗಳನ್ನು ಛಾಯಾಗ್ರಹಣದ ಮೂಲಕ ಸೆರೆ ಹಿಡಿಯಲಾಗುತ್ತದೆ. ಹೊಸಬರಿಗೂ ಪಕ್ಷಿ ಗಣತಿ ಮಾಡಲು ಅವಕಾಶವಿದ್ದು, ಹಿರಿಯ ಪಕ್ಷಿ ವೀಕ್ಷಕರ ತಂಡದೊಂದಿಗೆ ಕಳುಹಿಸಿಕೊಡಲಾಗುವುದು. ಈ ಮೂಲಕ ಅವರಿಗೂ ಪಕ್ಷಿ ವೀಕ್ಷಣೆ ಮತ್ತು ಗಣತಿ ಮಾಡುವ ವಿಧಾನ ಕಲಿಸಲಾಗುತ್ತದೆ.

ಮೈಸೂರಿನಲ್ಲಿ ಇಳಿಮುಖವಾಗಿದೆ ಹೆಣ್ಣು ಮಕ್ಕಳ ಜನನ ಪ್ರಮಾಣಮೈಸೂರಿನಲ್ಲಿ ಇಳಿಮುಖವಾಗಿದೆ ಹೆಣ್ಣು ಮಕ್ಕಳ ಜನನ ಪ್ರಮಾಣ

2018ರ ಜನವರಿಯಲ್ಲಿ ನಡೆಸಿದ ಪಕ್ಷಿ ಗಣತಿಯಲ್ಲಿ 69 ಪ್ರದೇಶಗಳಲ್ಲಿ 12 ತಂಡಗಳಿಂದ 211 ಪಕ್ಷಿ ಪ್ರಭೇದಗಳ, 46 ಪಕ್ಷಿ ವೀಕ್ಷಕರಿಂದ 54,057 ಪಕ್ಷಿಗಳನ್ನು ಗಣತಿ ಮಾಡಲಾಗಿತ್ತು. 2017ರಲ್ಲಿ79 ಪ್ರದೇಶಗಳಲ್ಲಿ13 ತಂಡಗಳು 187 ಪಕ್ಷಿ ಪ್ರಭೇದಗಳನ್ನು ಗುರುತಿಸಲಾಗಿತ್ತು. 44 ಪಕ್ಷಿ ವೀಕ್ಷಕರು 20,679 ಪಕ್ಷಿಗಳನ್ನು ಗಣತಿ ಮಾಡಿದ್ದರು.

ಎಂಥ ಸುದ್ದಿ! ಮನುಷ್ಯನೊಂದಿಗೆ ನೀರುಕಾಗೆಯ ಕುಚುಕು ಸ್ನೇಹ!ಎಂಥ ಸುದ್ದಿ! ಮನುಷ್ಯನೊಂದಿಗೆ ನೀರುಕಾಗೆಯ ಕುಚುಕು ಸ್ನೇಹ!

"87ರ ದಶಕದಿಂದ ಮೈಸೂರು ಅಮೆಚೂರ್ ನ್ಯಾಚುರಲಿಸ್ಟ್ ಪಕ್ಷಿ ಗಣತಿ ಮಾಡುತ್ತಿತ್ತು. ನಾವು 1996-2000ರವರೆಗೆ ನೀರು ಹಕ್ಕಿಗಳನ್ನು ಗಣತಿ ಮಾಡುತ್ತಿದ್ದೇವೆ. 2000ದಿಂದ ಎಲ್ಲಾ ರೀತಿಯ ಪಕ್ಷಿಗಳನ್ನು ಗಣತಿ ಮಾಡಲು ಆರಂಭಿಸಿದ್ದಾಗಿ" ಎ. ಶಿವಪ್ರಕಾಶ್ ಹೇಳಿದ್ದಾರೆ.

English summary
Bird census will begin in the Mysore range on January 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X