ಮೈಸೂರು: ಬೈಕ್ ಜಾಥಾ ಮೂಲಕ ಪರಿವರ್ತನಾ ಯಾತ್ರೆಗೆ ಬೆಂಬಲ

Posted By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ನವೆಂಬರ್ 2: ಭಾರತೀಯ ಜನತಾ ಪಕ್ಷದ ವತಿಯಿಂದ ನವಕರ್ನಾಟಕ ನಿರ್ಮಾಣಕ್ಕಾಗಿ ನಡೆಯುತ್ತಿರುವ ಯಾತ್ರೆ ಅಂಗವಾಗಿ ಮಾಜಿ ಸಚಿವ ರಾಮ್ ದಾಸ್ ನೇತೃತ್ವದಲ್ಲಿ ಮೈಸೂರಿನಲ್ಲಿ ಬೈಕ್ ಜಾಥಾ ನಡೆಯಿತು.

ಸಿದ್ದರಾಮಯ್ಯ ಸರ್ಕಾರ ತೊಲಗಿಸಲು ಕೈ ಜೋಡಿಸಿ : ಬಿಎಸ್‌ವೈ ಕರೆ

ಸುಮಾರು 500ಕ್ಕೂ ಹೆಚ್ಚು ಬೈಕ್ ಗಳಲ್ಲಿ ಸಾವಿರಾರು ಕಾರ್ಯಕರ್ತರನ್ನು ಒಳಗೊಂಡ ಯಾತ್ರೆಯೂ ವಿದ್ಯಾಶಂಕರ ಕಲ್ಯಾಣ ಮಂಟಪದ ಆವರಣದಿಂದ ಬೆಂಗಳೂರಿಗೆ ತೆರಳಿತು. ಹೊರಡುವ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳು ತಡೆಯಲು ಮುಂದಾದರೂ ಅದನ್ನು ಲೆಕ್ಕಿಸದೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮಾರಂಭಕ್ಕೆ ತೆರಳಿದರು.

Bike Rally in Mysuru to support Parivartana Rally of BJP Karntaka

ಈ ಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಎಸ್ ಎ ರಾಮದಾಸ್ ರವರೊಂದಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಹಾಗೂ ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As BJP Karnataka started Parivartana rally in Bengaluru today, the BJP workers and some leaders in Mysuru organised a bike rally in the city to show their support to Parivartana rally.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ