ಮೈಸೂರು: ಪ್ರತ್ಯೇಕ ಅಪಘಾತಗಳಲ್ಲಿ ಮೂವರ ಸಾವು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 27 : ಜಿಲ್ಲೆಯ ಕಲ್ಕುಂದ ಹಾಗೂ ಹುಣಸೂರಿನಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಕಲ್ಕುಂದ ಬಳಿ ನಡೆದ ಬೈಕ್ ಅಪಘಾತದಲ್ಲಿ ಜಯಪುರ ಹೋಬಳಿಯ ಅರಸನಕೆರೆ ಗ್ರಾಮದ ಮಹೇಶ್ ಹಾಗೂ ವಿಜಯಕುಮಾರ್ ಎಂಬುವರು ಮೃತಪಟ್ಟರೆ, ಹುಣಸೂರಿನಲ್ಲಿ ನಡೆದ ಬೈಕ್,ಲಾರಿ ಅಪಘಾತದಲ್ಲಿ ಹುಣಸೂರು ತಾಲೂಕಿನ ಗಾವಡಗೆರೆ ನಿವಾಸಿ ನವೀನ್ ಪವಾರ್ ಎಂಬುವರು ಸಾವಿಗೀಡಾಗಿದ್ದಾರೆ.

ಕಲ್ಕುಂದ ಬಳಿಯ ಅಪಘಾತದಲ್ಲಿ ಬೈಕ್ ಮೇಲೆ ಬಂದಿದ್ದ ಮಹೇಶ್, ವಿಜಯ ಕುಮಾರ್ ಹಾಗೂ ಗುರು ಎಂಬ ಮೂವರು ಯುವಕರು, ಸುತ್ತೂರು ಜಾತ್ರೆಗೆ ತೆರಳುತ್ತಿದ್ದರು. ಈ ಸಂದರ್ಭ ಕಲ್ಕುಂದ ಬಳಿ ಬೈಕ್ ನಿಯಂತ್ರಣ ಕಳೆದುಕೊಂಡ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ‌ ಹೊಡೆದಿದೆ. ಈ ಸಂದರ್ಭ ಮೂವರೂ ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಮಹೇಶ್ ಮತ್ತು ವಿಜಯಕುಮಾರ್ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗುರು ಸ್ಥಿತಿ ಚಿಂತಾಜನಕವಾಗಿದೆ‌. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bike collided with a power pole, two killed in mysore

ಹುಣಸೂರು ಅಪಘಾತ: ಇನ್ನು, ಹುಣಸೂರು ಬಳಿ ನಡೆದ ಅಪಘಾತದಲ್ಲಿ ನವೀನ್ (33) ತಮ್ಮ ಬೈಕಿನಲ್ಲಿ ಲಾರಿಗೆ ಹಿಂಬದಿಯಿಂದ ಗುದ್ದಿದ್ದರಿಂದ ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ.
ಗುರುವಾರ ರಾತ್ರಿ ಪಟ್ಟಣದ ವಿಜಯನಗರ ಬಡಾವಣೆಯಲ್ಲಿದ್ದ ತಮ್ಮ ಪತ್ನಿಯ ತವರು ಮನೆಗೆ ಬಂದಿದ್ದ ನವೀನ್, ಪತ್ನಿ ಹಾಗೂ ಮಗುವನ್ನು ಮಾತನಾಡಿಸಿಕೊಂಡು ವಾಪಸ್ಸು ಊರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Bike collided with a power pole, two killed in mysore

ಕೆ.ಆರ್.ನಗರ - ಹುಣಸೂರು ರಸ್ತೆಯಲ್ಲಿ ಆರ್.ಕೆ.ಎಫ್ ಸಾಮೀಲ್ ಬಳಿ ಮರ ತುಂಬಿಕೊಂಡು ಹುಣಸೂರಿಗೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ನವೀನ್ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two young men moving on the same bike died in an accident while their bike collided with an electric pole. Another person who was on the same bike is seriously injured. In another incident at Hunasur, a resident of vijayanagar, Mysore died on spot when his bike collided with a lorry.
Please Wait while comments are loading...