ಮೈಸೂರು: ಆತ್ಮಹತ್ಯೆ - ಬೈಕ್ ಅಪಘಾತ; ಪ್ರತ್ಯೇಕ ಪ್ರಕರಣಗಳಲ್ಲಿ 4 ಸಾವು

Posted By:
Subscribe to Oneindia Kannada

ಮೈಸೂರು, ನವೆಂಬರ್ 9: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗು ಸಮೇತ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ನಿನ್ನೆ(ನ.8) ಘಟನೆ ನಡೆದಿದೆ.

ಮೈಸೂರು: ಹೊತ್ತಿ ಉರಿದ ಶಾಲಾ ಬಸ್, ತಪ್ಪಿದ ಭಾರೀ ಅನಾಹುತ

ಮೃತರನ್ನು ಮುದಗನೂರು ಗ್ರಾಮದ ನಿವಾಸಿ ಪ್ರಶಾಂತ್ ಪತ್ನಿ ಮಹಾಲಕ್ಷ್ಮಿ (30), ತಮ್ಮ ಒಂದು ವರ್ಷದ ಹೆಣ್ಣು ಮಗು ಪಿಂಕು ಸಮೇತ ನೇಣಿಗೆ‌ ಕೊರಳೊಡ್ಡಿದ್ದಾರೆ. ಪಕ್ಕದ ಕೊಳವಿಗೆ ಗ್ರಾಮದ ಆಶ್ರಮ‌ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ಪ್ರಶಾಂತ್ ಜೊತೆ ಮದುವೆಯಾಗಿತ್ತು. ಗಂಡ ಹೆಂಡತಿ ಮಧ್ಯೆ ಸಾಮರಸ್ಯದ ಕೊರತೆಯುಂಟಾಗಿದ್ದು, ಇಬ್ಬರಿಗೂ ಜಗಳ ನಡೆದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bike accident, suicide by hanging: 4 die in Mysuru in seperate incidents

ಅಪಘಾತಕ್ಕೆ ಓರ್ವ ಸಾವು
ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಮೈಸೂರು‌ಜಿಲ್ಲೆ ಕೆ.ಆರ್‌.ನಗರ ತಾಲೂಕು ಮಾಯಿಗೌಡನಹಳ್ಳಿ ಬಳಿ ಗುರುವಾರ ನಡೆದಿದೆ. ಮೃತರನ್ನು ಮರದ ವ್ಯಾಪಾರಿ ನಾಗರಾಜ್ (48) ಎಂದು ಹೇಳಲಾಗಿದ್ದು, ಗಣೇಶ್ ಎಂಬವರಿಗೆ ಗಂಭೀರ ಗಾಯಗಳಾಗಿದೆ. ಮರದ ವ್ಯಾಪಾರಿ‌ ನಾಗರಾಜ್ ಚುಂಚನಕಟ್ಟೆಯಿಂದ ಕೆ.ಆರ್.ನಗರಕ್ಕೆ ಬರುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಗಣೇಶ್ ಬೈಕ್ ನಾಗರಾಜ ಬೈಕ್ ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ನಾಗರಾಜ್ ಮೃತಪಟ್ಟರೆ, ಗಣೇಶ್ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಕೆ.ಆರ್.ನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು: ಸೊಸೆ ಆತ್ಮಹತ್ಯೆ ಸುದ್ದಿ ತಿಳಿದು ಮಾವ ಸಾವು

Bike accident, suicide by hanging: 4 die in Mysuru in seperate incidents

ರೌಡಿಶೀಟರ್ ನೇಣಿಗೆ ಶರಣು
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ರೌಡಿಶೀಟರ್ ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತನನ್ನು ರೌಡಿಶೀಟರ್ ಗಿರಿ ಅಲಿಯಾಸ್ ಚಟ್ಟಿಗಿರಿ ಎಂದು ಹೇಳಲಾಗಿದೆ. ಈತ ಬಸವೇಶ್ವರ ರಸ್ತೆಯಲ್ಲಿ ವಾಸವಿದ್ದ, ಸಾಯಂಕಾಲ ಕಾಫಿ ಕುಡಿದು ಬರುತ್ತೇನೆಂದು ಹೇಳಿ ಹೋದವನು ಸ್ವಲ್ಪ ಹೊತ್ತು ಬಿಟ್ಟು ಹಿಂದಿರುಗಿದ್ದಾನೆ. ಬಳಿಕ ರೂಮು ಸೇರಿದವನು ಎಷ್ಟು ಹೊತ್ತಾದರೂ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡು ಹೋಗಿ ನೋಡಲಾಗಿ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bike accident, suicide by hanging : In separate incidents 4 breath last in Mysuru district. Crime news bulletin from K R Nagar, Hunsur and Mysuru City

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ