ಬಾಡಿಗೆ ಸೈಕಲ್ ಪಡೆದು ಮೈಸೂರಿನಲ್ಲಿ ಸುತ್ತಾಡಿ

Posted By:
Subscribe to Oneindia Kannada

ಮೈಸೂರು, ಜೂನ್ 30 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೈಕಲ್ ಬಾಡಿಗೆಗೆ ಪಡೆದು ನೀವು ನಗರದಲ್ಲಿ ಸುತ್ತಾಡಬಹುದು. ಮೈಸೂರು ಮಹಾನಗರ ಪಾಲಿಕೆ ನಗರದಲ್ಲಿ ಬಾಡಿಗೆ ಸೈಕಲ್ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಿದೆ. ಬಾಡಿಗೆ ಸೈಕಲ್ ವ್ಯವಸ್ಥೆ ಜಾರಿಗೆ ತಂದಿರುವ ಮೊದಲ ನಗರ ಎಂಬ ಹೆಗ್ಗಳಿಕೆಯೂ ಮೈಸೂರು ಪಾಲಾಗಲಿದೆ.

ವಿಶ್ವಬ್ಯಾಂಕ್‌ನ ಸುಮಾರು 20 ಕೋಟಿ ರೂ.ಗಳ ನೆರವಿನಿಂದ ಮಹಾನಗರ ಪಾಲಿಕೆ ಮೈಸೂರಿನಲ್ಲಿ ಬಾಡಿಗೆ ಸೈಕಲ್ ಸೇವೆಯನ್ನು ಆರಂಭಿಸುತ್ತಿದೆ. ಯೋಜನೆಯಡಿ 450 ಸೈಕಲ್‌ಗಳನ್ನು ಖರೀದಿ ಮಾಡಲಾಗಿದ್ದು, ನಗರದಲ್ಲಿ 45 ಮತ್ತು ನಗರದ ಹೊರಭಾಗದಲ್ಲಿ 10 ನಿಲ್ದಾಣಗಳನ್ನು ನಿರ್ಮಿಸಲಾಗಿದೆ. [ಮೈಸೂರಿನಲ್ಲಿ ಬಾಡಿಗೆ ಬೈಕ್ ಸೇವೆ ಆರಂಭ]

mysuru

ಬಸ್ ಮತ್ತು ರೈಲ್ವೆ ನಿಲ್ದಾಣ ಮತ್ತು ಪ್ರವಾಸಿ ಸ್ಥಳಗಳ ಅಕ್ಕಪಕ್ಕದಲ್ಲಿ ಬಾಡಿಗೆ ಸೈಕಲ್ ನಿಲ್ದಾಣಗಳು ಇರಲಿವೆ. ಮೃಗಾಲಯ, ಅಂಬಾವಿಲಾಸ ಅರಮನೆ, ಕಾರಂಜಿ ಕೆರೆ, ವಿಮಾನ ನಿಲ್ದಾಣ ಮುಂತಾದ ಕಡೆ ಬಾಡಿಗೆ ಬೈಸಿಕಲ್ ನಿಲ್ದಾಣಗಳು ಇರಲಿದ್ದು, ಅಲ್ಲಿಂದಲೇ ಸೈಕಲ್ ತೆಗೆದುಕೊಂಡು ನಗರದಲ್ಲಿ ಸುತ್ತಾಡಬಹುದು. [ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1]

ಸವಾರರಿಗೆ ಸ್ಮಾಟ್‌ ಕಾರ್ಡ್ : ಬಾಡಿಗೆ ಸೈಕಲ್ ಬಳಸುವವರಿಗಾಗಿ ಮಹಾನಗರ ಪಾಲಿಕೆ ಸ್ಮಾರ್ಟ್ ಕಾರ್ಡ್‌ ಜಾರಿಗೆ ತರಲಿದೆ. ಬಾಡಿಗೆ ಪಡೆಯುವ ಮೊದಲು ಕಾರ್ಡ್‌ ಸ್ಪೈಪ್‌ ಮಾಡಿ ಸೈಕಲ್ ತೆಗೆದುಕೊಂಡು ಹೋಗಬಹುದು. ನಂತರ ಮತ್ತೊಂದು ನಿಲ್ದಾಣದಲ್ಲಿ ಅದನ್ನು ನಿಲ್ಲಿಸಬಹುದಾಗಿದೆ. [ಈ ವಿದ್ಯಾರ್ಥಿಯ ಬೈಸಿಕಲ್ ಗಿದೆ ತ್ರಿಚಕ್ರ ವಾಹನದ ನಂಬರ್ ಪ್ಲೇಟ್]

ಸದ್ಯ, ಸಾಮಾನ್ಯ ಸೈಕಲ್‌ಗಳನ್ನು ಪ್ರಾಯೋಗಿಕವಾಗಿ ಬಾಡಿಗೆಗೆ ನೀಡಲಾಗುತ್ತದೆ. ಬಳಿಕ ಬ್ಯಾಟರಿ ಚಾಲಿತ ಸೈಕಲ್‌ಗಳನ್ನು ಬಾಡಿಗೆಗೆ ಕೊಡಲು ನಿರ್ಧರಿಸಲಾಗಿದೆ. ಈ ಸೇವೆಯನ್ನು ಉತ್ತೇಜಿಸಲು ಕೆಲವು ದಿನಗಳ ಕಾಲ ಮೊದಲ ಅರ್ಧಗಂಟೆಗೆ ಯಾವುದೇ ಬಾಡಿಗೆ ತೆಗೆದುಕೊಳ್ಳದಿರಲು ನಿರ್ಧರಿಸಲಾಗಿದೆ. 1 ಗಂಟೆಗೆ 5, 2 ಗಂಟೆಗೆ 10 ರೂ. ಬಾಡಿಗೆ ನಿಗದಿಪಡಿಸುವ ಸಾಧ್ಯತೆ ಇದೆ. [ಮಾಹಿತಿ : @KarnatakaGovernment.Updates]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru City Corporation (MCC) is all set to introduce public bicycle sharing service in city. The civic body will introduce the service by spending about Rs 20 crore. MCC will introduce a smart card system for cycle users.
Please Wait while comments are loading...