ಈ ಬಾರಿ ಮೈಸೂರು ದಸರಾ ಅಂಬಾರಿ 'ಭೀಮ'ನ ಹೆಗಲಿಗೆ?

Posted By:
Subscribe to Oneindia Kannada

ಮೈಸೂರು, ಆಗಸ್ಟ್ 8 : ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಇದೇ ಮೊದಲ ಬಾರಿಗೆ ಆಗಮಿಸುತ್ತಿರುವ 17 ವರುಷದ ಆನೆ ಭೀಮನಿಗೆ ಅಂಬಾರಿ ತರಬೇತಿ ನೀಡಲು ತೀರ್ಮಾನಿಸಲಾಗಿದೆ.

ವಿದೇಶದಲ್ಲೂ ರಾರಾಜಿಸಲಿದೆ ಮೈಸೂರು ದಸರೆಯ ಜಾಹೀರಾತು ಫಲಕ!

ಮುಂದಿನ ವರುಷಗಳಲ್ಲಿ ಜಂಬೂ ಸವಾರಿಯಲ್ಲಿ 750 ಕೆ ಜಿ ತೂಕದ ಚಿನ್ನದ ಸಾಮರ್ಥ್ಯ ಭೀಮನಿಗೆ ಇರುವುದರಿಂದ ಅರಣ್ಯ ಲಾಖೆ ಈತನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ದಸರಾ ವೇಳೆ ಪ್ರತಿ ವರುಷ 12 ಆನೆಗಳನ್ನು ಮಾತ್ರ ವಿವಿಧ ಆನೆ ಶಿಬಿರಗಳಿಂದ ಕರೆತರಲಾಗುತ್ತಿತ್ತು. ಆದರೆ ಈ ಬಾರಿ ಹೆಚ್ಚುವರಿಯಾಗಿ 3 ಆನೆಗಳನ್ನುಕರೆತರಲಾಗುತ್ತಿದೆ. ಸೆಪ್ಟಂಬರ್ 21 ರಿಂದ 30ರವರಗೆ ನಡೆಯುವ ವಿಶ್ವ ವಿಖ್ಯಾತ ನಾಡಹಬ್ಬದಲ್ಲಿ ಈ ಅಂಬಾರಿಯೇ ಆಕರ್ಷಕವಾಗಿದ್ದಾಗಿದೆ.

Bheema will lift Ambari of Mysuru Dasara this year

ಮುಂದಿನ 10 ರಿಂದ 15 ವರುಷದ ಅವಧಿಯಲ್ಲಿ ಅಂಬಾರಿ ಹೊರುವ ಆನೆಯನ್ನು ಸಜ್ಜುಗೊಳಿಸುವ ಮುಂದಾಲೋಕಚೆಯಲ್ಲಿರುವ ಅರಣ್ಯ ಲಾಖೆ ಅಧಿಕಾರಿಗಳು ನಾಗರಹೊಳೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಮತ್ತಿಗೆ ಗೂಡು ಆನೆ ಶಿಬಿರಲ್ಲಿ ಪಳಗಿರುವ 17 ವರುಷದ ಭೀಮನಿಗೆ ತರಬೇತಿ ನೀಡಲು ಸಮ್ಮತಿಸಿದ್ದಾರೆ. ಆತನ ಸಾಮರ್ಥ್ಯವನ್ನು ಕಂಡು ಅರಣ್ಯಾಧಿಕಾರಿಗಳೇ ಮೂಕ ವಿಸ್ಮಿತರಾಗಿದ್ದಾರೆ.

ಸಾಂಪ್ರದಾಯಿಕ ಮೈಸೂರು ದಸರಾಕ್ಕೆ ಲೋಗೋ, ಭಿತ್ತಿಚಿತ್ರ ಸಿದ್ಧ!

ಯಾರಿದು ಭೀಮ..?
ನಾಗರಹೊಳೆ ಅಭಯಾರಣ್ಯದ ಮತ್ತಿಗೆ ಗೂಡು ವಲಯದ ಭೀಮನಕಟ್ಟೆ ಎಂಬಲ್ಲಿ 2002ರಲ್ಲಿ ತಾಯಿಯಿಂದ ಬೇರ್ಪಟ್ಟು ಎರಡು ವರುಷದ ಗಂಡಾನೆ ಮರಿ ಕಂಗೆಟ್ಟು ರೋದಿಸುತ್ತಿತ್ತು. ಮರಿಯನ್ನು ಅದರ ತಾಯಿ ಆನೆ ಕರೆದೊಯ್ಯಬಹುದೆಂದು ಅರಣ್ಯ ಸಿಬ್ಬಂದಿ ನಿರೀಕ್ಷಿಸಿದ್ದರು. ಆದರೆ, 2 ದಿನವಾದರೂ ತಾಯಿ ಆನೆ ಮರಿಯನ್ನು ಕರೆದೊಯ್ಯದ ಕಾರಣ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಗಂಡಾನೆ ಮರಿಯನ್ನು ಮತ್ತಿಗೆ ಗೂಡು ಕ್ಯಾಂಪ್ ಗೆ ಕರೆತಂದು ಬಾಟಲಿಯಲ್ಲಿ ಹಾಲುಣಿಸಿ ಪೋಷಿಸಿ ಭೀಮ ಎಂದು ಹೆಸರಿಟ್ಟು ಸಾಕಲಾಯಿತು.

Bheema will lift Ambari of Mysuru Dasara this year

ಈ ಆನೆಗೆ ಇದೀಗ 17 ವರುಷ. ಆನೆ ಶಿಬಿರದಲ್ಲಿದ್ದ ದಸರಾ ಆನೆಗಳು ಸೇರಿದಂತೆ ವಿವಿಧ ಸಾಕಾನೆಗಳ ಸಖ್ಯದಲ್ಲಿ ಬೆಳೆದ ಭೀಮ ಮಾವುತ ರಾಧಾಕೃಷ್ಣನ ಗರಡಿಯಲ್ಲಿ ಪರಿಪೂರ್ಣವಾಗಿ ಪಳಗಿದ್ದು, ಮಾವುತನ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಭರವಸೆ ಆನೆಯಾಗಿ ಹೊರಹೊಮ್ಮಿದ್ದಾನೆ.

Siddaramaiah Says, Mysuru Dasara Jamboo Savari Will Be Held On Sep 30th | Oneindia Kananda

ಭೀಮ 17 ವರುಷದಲ್ಲಿ ಹಲವು ಖೆಡ್ಡಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡಿದೆ. ಕಾಡಿನಿಂದ ನಾಡಿಗೆ ಬಂದು ಪುಂಡಾಟ ಮೆರೆಯುತ್ತಿದ್ದ ಕಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಅಭಿಮನ್ಯು, ಪ್ರಶಾಂತ, ಹರ್ಷ ಆನೆಯೊಂದಿಗೆ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದ ಭೀಮ ಅರಣ್ಯಇಲಾಖೆಗೆ ಆಸ್ತಿಯಂತಾಗಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bheema will lift Ambari of Mysuru Dasara this year. Bheema is an elephant of 17 years old. Dasara festival will be taken place from september 21st to 30th.
Please Wait while comments are loading...