ಮೋಸಗಾರರು ನಿಮಗೂ ಈ ನಂಬರಿಂದ ಕರೆ ಮಾಡಬಹುದು!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 26: ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಿದಂತೆ ವಂಚಕರು ಅದನ್ನು ಬಳಸಿಕೊಂಡು, ಮೋಸ ಮಾಡುವುದು ಹೆಚ್ಚಾಗುತ್ತಿದೆ. ತಮ್ಮ ಬುದ್ಧಿ ಖರ್ಚು ಮಾಡಿ, ಸುಲಭವಾಗಿ ಹಣ ಸಂಪಾದಿಸುವ ಮಾರ್ಗದ ಅನ್ವೇಷಣೆಯಲ್ಲಿರುವ ಅವರು, ಸಾರ್ವಜನಿಕರಿಗೆ ಮೋಸ ಮಾಡುತ್ತಲೇ ಇದ್ದಾರೆ.

ಇತ್ತೀಚೆಗೆ ಆನ್ ಲೈನ್ ಅವ್ಯವಹಾರ ಹೆಚ್ಚಾಗಿದ್ದು, ಎಷ್ಟೇ ಭದ್ರತೆ ಅಂತ ಪ್ರಯತ್ನ ಮಾಡಿದರೂ ವಂಚಿಸುವವರು ಅದನ್ನು ಮೀರಿ ತಮ್ಮ ಕೈಚಳಕ ತೋರುತ್ತಿದ್ದಾರೆ. ಮೊಬೈಲ್ ಫೋನ್ ಗೆ ಕರೆ ಮಾಡಿ. ಬ್ಯಾಂಕ್ ನಿಂದ ಮಾತನಾಡುತ್ತಿದೀವಿ ಎಂದು ಗಿಲೀಟಿನ ಮಾತಾಡಿ, ಬ್ಯಾಂಕ್ ಖಾತೆ ಮಾಹಿತಿಗಳನ್ನು ಕಲೆ ಹಾಕಿ, ಹಣ ಎಗರಿಸುತ್ತಿದ್ದಾರೆ.[ಏರ್ ಫೋರ್ಸ್ ನಲ್ಲಿ ತರಬೇತಿ ಸೀಟು: ಯುವತಿಗೆ ವಂಚಿಸಿ ನಾಪತ್ತೆ]

ಇದು ಹೊಸತಲ್ಲ ಈಗಾಗಲೇ ಈ ಮೋಸದ ಜಾಲದಿಂದ ಹಲವರು ಹಣ ಕಳೆದುಕೊಂಡಿದ್ದಾರೆ. ಯಾರಿಗೂ ಬ್ಯಾಂಕ್ ನ ವಿವರ, ಎಟಿಎಂ ಕಾರ್ಡ್ ನ ಗೋಪ್ಯ ಸಂಖ್ಯೆಯನ್ನು ನೀಡದಂತೆ ಬ್ಯಾಂಕ್ ಅಧಿಕಾರಿಗಳೇ ಸೂಚನೆ ನೀಡಿದ್ದರೂ ಜನ ಮೋಸ ಹೋಗುತ್ತಿದ್ದಾರೆ. ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯೊಬ್ಬರ ಹಣ ವಂಚಕರ ಪಾಲಾಗಿದ್ದು, ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲೇ ಕಳೆದುಹೋಗುತ್ತಿದ್ದ ಹಣ ಸಿಕ್ಕಿದೆ.

Beware of cheaters calls, don't share personal details

ಇಷ್ಟಕ್ಕೂ ಆಗಿದ್ದೇನೆಂದರೆ ಅವರ ಮೊಬೈಲ್ ಗೆ ಅನಾಮಧೇಯ ಕರೆ ಮಾಡಿದ ವ್ಯಕ್ತಿ, ಬ್ಯಾಂಕ್ ನಿಂದ ಮಾತಾಡುತ್ತಿದ್ದು, ಎಟಿಎಂ ಕಾರ್ಡ್ ಗೆ ಸಂಬಂಧಿಸಿದಂತೆ ತೊಂದರೆಯಾಗಿದೆ. ಮಾಹಿತಿ ನೀಡಿ ಎಂದು ಹೇಳಿದ್ದಾನೆ. ಅಧಿಕಾರಿಗೆ ತಕ್ಷಣಕ್ಕೆ ಮೋಸದ ಕರೆ ಎಂಬುದು ಗೊತ್ತಾಗದೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ವಲ್ಪ ಹೊತ್ತಿನಲ್ಲೇ 35 ಸಾವಿರ ರುಪಾಯಿ ಡ್ರಾ ಆದ ಬಗ್ಗೆ ಅವರ ಮೊಬೈಲ್ ಗೆ ಮೆಸೇಜ್ ಬಂದಿದೆ.

ತಕ್ಷಣ ಎಚ್ಚೆತ್ತ ಅವರು, ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸೈಬರ್ ಪೊಲೀಸರನ್ನು ಸಂಪರ್ಕಿಸಿ ಹಣ ಕಳೆದುಕೊಂಡವರ ಖಾತೆಯಿಂದ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಪಡೆಯುವ ಮೂಲಕ ಹಣ ವಂಚಕರ ಪಾಲಾಗುವುದನ್ನು ತಪ್ಪಿಸಿದ್ದಾರೆ. ಆದರೆ ಇಂತಹ ಕರೆಗಳು ಬರುತ್ತಲೇ ಇವೆ.[7 ಗಂಡಂದಿರ ಮುದ್ದಿನ ಹೆಂಡತಿ ಮಾಡಿದ್ದೇನು ಗೊತ್ತಾ?]

ಬುಧವಾರ ಬೆಳಗ್ಗೆ 9.18ರ ಸಮಯದಲ್ಲಿ ಮೈಸೂರಿನ ಲೋಕೇಶ್ ಎಂಬುವರಿಗೆ 917635069492 ಎಂಬ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಮಾತಾಡಿದ್ದಾನೆ. ಬ್ಯಾಂಕ್ ನಿಂದ ಮಾತನಾಡುತ್ತಿರುವುದಾಗಿ ಹೇಳಿದ ಆತ, ನಿಮ್ಮ ಎಟಿಎಂ ಕಾರ್ಡ್ ರಿನೀವಲ್ ಮಾಡಬೇಕಿದೆ. ಇಲ್ಲಾಂದ್ರೆ ಬ್ಲಾಕ್ ಆಗುತ್ತದೆ. ಆದ್ದರಿಂದ ಎಟಿಎಂ ಪಿನ್ ನಂಬರ್ ಇನ್ನಿತರ ಮಾಹಿತಿಯನ್ನು ನೀಡಿ ಎಂದು ಕೇಳಿದ್ದಾನೆ.

ತಕ್ಷಣ ಎಚ್ಚೆತ್ತ ಲೋಕೇಶ್, ಮರು ಪ್ರಶ್ನೆಗಳನ್ನು ಕೇಳುತ್ತಿದ್ದಂತೆಯೇ ಕರೆಯನ್ನು ಡಿಸ್ ಕನೆಕ್ಟ್ ಮಾಡಿದ್ದಾನೆ. ಇಷ್ಟಕ್ಕೂ ಈ ಕರೆ ಮಾಡಿದವರು ಯಾರು, ಎಲ್ಲಿಯವರು ಎಂಬ ಮಾಹಿತಿ ಇಲ್ಲ. ಇದೇ ನಂಬರ್ ನಿಂದ ನಿಮಗೂ ಕರೆ ಬರಬಹುದು. ಆದ್ದರಿಂದ ಯಾವುದಕ್ಕೂ ಎಚ್ಚರವಾಗಿರುವುದು ಒಳಿತು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Don't share bank details with strangers. If anybody calls and asks for ATM card details, don't disclose. Many people cheated in such manner in Mysuru.
Please Wait while comments are loading...