ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಸ್ತಾಭಿಷೇಕದಲ್ಲಿ ಮಿಂದ ನಂದಿ ಸೌಂದರ್ಯಕ್ಕೆ ಸರಿಸಾಟಿ ಯಾರು?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್, 30: ಚಾಮುಂಡಿ ಬೆಟ್ಟದ ನಂದಿ ಎಂದಾಕ್ಷಣ ಅಬ್ಬಾ! ಎಷ್ಟು ಚಂದ ಎಂಬ ಉದ್ಗಾರ ತಾನೇ ತಾನಾಗಿ ನಮ್ಮಿಂದ ಹೊರ ಬೀಳುತ್ತದೆ. ಅಲಂಕೃತಗೊಳ್ಳದ ನಂದಿ ನೋಡಿಯೇ ನಾವು ಭಾವಪರವಶರಾಗುವಾಗ ಕಾರ್ತಿಕ ಮಾಸದ 3ನೇ ಸೋಮವಾರದ ಅಂಗವಾಗಿ ಭಾನುವಾರ ನೆರವೇರಿದ ಮಸ್ತಾಭಿಷೇಕದಲ್ಲಿ ಮಿಂದ ನಂದಿಯನ್ನು ನೋಡಿದಾಗ ನಂದಿಯ ಸೌಂದರ್ಯಕ್ಕೆ ಮಾರುಹೋಗದ ಮಂದಿ ಇಲ್ಲವೇ ಇಲ್ಲ ಎನ್ನಬಹುದು.

ಹೌದು ಚಾಮುಂಡಿ ಬೆಟ್ಟದ ಕಪ್ಪುಶಿಲೆಯ ನಂದಿ ಭಾನುವಾರ ಹಾಲು, ಅರಿಶಿಣ, ಕುಂಕುಮ,ಚಂದನ ಗಂಧ, ತುಪ್ಪ ಇನ್ನಿತರ ವಸ್ತುಗಳಿಂದ ಮಜ್ಜನಗೊಂಡಾಗ ದೇವರು ನಮಗೆ ಇನ್ನೆರಡು ಕಣ್ಣು ಕೊಟ್ಟಿದ್ದರೆ, ಇನ್ನಷ್ಟು ಹೊತ್ತು ನಂದಿಯ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದಿತ್ತು ಎಂದು ಅನಿಸದಿರಲು ಸಾಧ್ಯವೇ ಇಲ್ಲ.

10ನೇ ವರ್ಷದ ಮಹಾಮಸ್ತಕಾಭಿಷೇಕದ ಈ ಪುಣ್ಯಕಾರ್ಯಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಆಗಮನದಲ್ಲಿ ನೆರವೇರಿದ್ದು, ನೂರಾರು ಭಕ್ತವೃಂದ, ವಿದೇಶಿಗರು, ಪ್ರವಾಸಿಗರು ಈ ಒಂದುವರೆ ಗಂಟೆಯ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು.[ಬೇಸಿಗೆ ದಾಹ ನೀಗಿಸುವ ಕೋಲ್ಡ್ ಪ್ರಿಯರ ಮಣ್ಣಿನ ಫ್ರಿಡ್ಜ್..!]

ಚಾಮುಂಡಿ ಬೆಟ್ಟದ ಶ್ರೀ ನಂದಿ ಪೂಜಾ ಮಹೋತ್ಸವ ಸಮಿತಿ ಹಾಗೂ ನಿತ್ಯ ಬೆಟ್ಟ ಹತ್ತುವ ಬೆಟ್ಟದ ಬಳಗದ ವತಿಯಿಂದ ನಡೆದ ಮಸ್ತಕಾಭಿಷೇಕದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ಅವಧೂತ ದತ್ತಪೀಠದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಸೋಮನಾಥಾನಂದ ಸ್ವಾಮೀಜಿ, ಜಮನಗಿರಿ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು 32 ವಿವಿಧ ಬಗೆಯ ಅಭಿಷೇಕ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಹೂವಿನಿಂದ ಅಲಂಕೃತಗೊಂಡ ಕಬ್ಬಿಣದ ಸರಳುಗಳ ಜೋಡಣೆಯ ಮೇಲೆ ನಿಂತವರಿಂದ ಹಲವಾರು ದ್ರವ್ಯಗಳಿಂದ ನಂದಿಗೆ ಮಜ್ಜನ ನಡೆಯುತ್ತಿದ್ದರೆ, ಮತ್ತೊಂದೆಡೆ ಭಕ್ತವೃಂದದಿಂದ ಉದ್ಘೋಷಗಳು ಕೇಳಿ ಬರುತ್ತಿರುವುದರ ಜೊತೆಗೆ ಕಹಳೆ, ಜಾಗಟೆ, ಗಂಟೆಯ ಸದ್ದು ನಂದಿಯ ಮಜ್ಜನಕ್ಕೆ ಸಾಥ್ ನೀಡಿದವು. ಬನ್ನಿ ನಂದಿಯ ಸೌಂದರ್ಯ, ಸೊಬಗನ್ನು ನಾವು ನೋಡೋಣ

ನಂದಿ ವಿಗ್ರಹದ ಬಗ್ಗೆ ಕೊಂಚ ತಿಳಿದುಕೊಳ್ಳಿ

ನಂದಿ ವಿಗ್ರಹದ ಬಗ್ಗೆ ಕೊಂಚ ತಿಳಿದುಕೊಳ್ಳಿ

ಚಾಮುಂಡಿಬೆಟ್ಟದಲ್ಲಿ ಇರುವ ನಂದಿಗೆ 300ವರ್ಷಗಳ ಇತಿಹಾಸವಿದೆ. ಈ ನಂದಿ ಸ್ಥಾಪನೆಯಾಗಿದ್ದು ಮೈಸೂರು ರಾಜವಂಶಸ್ಥರ ಕಾಲದಲ್ಲಿ ಅಂದರೆ ಸುಮಾರು 1664ರಲ್ಲಿ. ಒಟ್ಟಿನಲ್ಲಿ ಇದು 340 ವರ್ಷಗಳಷ್ಟು ಹಳೆಯದು. ಇದು ಒಂದೇ ಶಿಲೆಯಿಂದ ಎದ್ದ, ಅಪರೂಪದ ಸೌಂದರ್ಯವೆತ್ತ ವಿಗ್ರಹ. ಈ ನಂದಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಮಹಾಮಜ್ಜನ ನಡೆಯುತ್ತದೆ.

ನಂದಿಗೆ ಮಸ್ತಾಭಿಷೇಕ

ನಂದಿಗೆ ಮಸ್ತಾಭಿಷೇಕ

ಕಾರ್ತಿಕ ಮಾಸದ 3ನೇ ಸೋಮವಾರದ ಅಂಗವಾಗಿ ಭಾನುವಾರ ಚಾಮುಂಡಿ ಬೆಟ್ಟದ ನಂದಿ ವಿಗ್ರಹಕ್ಕೆ 10ನೇ ಮಸ್ತಾಭಿಷೇಕ ನಡೆಯಿತು.ಶ್ರೀ ಚಾಮುಂಡಿ ಬೆಟ್ಟದ ನಂದಿ ಪೂಜಾ ಮಹೋತ್ಸವ ಸಮಿತಿ ಬೆಟ್ಟದ ಬಳಗದ ವತಿಯಿಂದ ಈ ಮಜ್ಜನ ನೆರವೇರಿತು.[ಮೈಸೂರು ಕಲಾವಿದನ ಕೈಯಲ್ಲಿ ಅರಳುತ್ತಿವೆ ಸ್ವರ್ಣ ದೇವರ ಮೂರ್ತಿ]

ನಂದಿ ಮಜ್ಜನಕ್ಕೆ ಯಾರು ಸಾಕ್ಷಿಯಾದರು?

ನಂದಿ ಮಜ್ಜನಕ್ಕೆ ಯಾರು ಸಾಕ್ಷಿಯಾದರು?

10ನೇ ವರ್ಷದ ಮಹಾಮಸ್ತಕಾಭಿಷೇಕದ ಈ ಪುಣ್ಯಕಾರ್ಯಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ಅವಧೂತ ದತ್ತಪೀಠದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಸೋಮನಾಥಾನಂದ ಸ್ವಾಮೀಜಿ, ಜಮನಗಿರಿ ಸ್ವಾಮೀಜಿ ಸೇರಿದಂತೆ ದೇಶಿಗರು, ಗ್ರಾಮಸ್ಥರು, ವಿದೇಶಿಗರು ಸಾಕ್ಷಿಯಾದರು.

ನಂದಿ ಯಾವ ದ್ರವ್ಯ, ವಸ್ತುಗಳಿಂದ ಮಜ್ಜನಗೊಂಡ?

ನಂದಿ ಯಾವ ದ್ರವ್ಯ, ವಸ್ತುಗಳಿಂದ ಮಜ್ಜನಗೊಂಡ?

ಕುಂಕುಮ, ಅರಿಶಿನ, ಹಾಲು, ಮೊಸರು, ಪಾದ್ಯ, ಆಘ್ರ್ಯ, ಅಚಮನ, ಮಧುಪರ್ಕ, ಹಾಲು, ಬೇಲದ ಹಣ್ಣು, ಖರ್ಜೂರ, ಸೌತೆಕಾಯಿ, ಕಬ್ಬಿನ ಹಾಲು, ಎಳನೀರು, ಎಣ್ಣೆ, ಪರಮಾನ್ನ, ಪಾಯಸ, ನಿಂಬೆರಸ, ವಿವಿಧ ಬಗೆಯ ಹೂಗಳು, ದಾಳಿಂಬೆ, ಸೇಬು, ಅನಾನಸ್, ದ್ರಾಕ್ಷಿ, ದರ್ಬೆ, ನಾಣ್ಯಗಳು, ಅಷ್ಟಗಂಧ, ಪಂಚಾಮೃತ, ಹೆಸರಿಟ್ಟು, ಕಡಲೆಹಿಟ್ಟು, ತುಪ್ಪ, ಜೇನುತುಪ್ಪ, ಕಲ್ಲುಸಕ್ಕರೆ, ಬಾಳೆಹಣ್ಣು, ಭಸ್ಮ, ಚಂದನಗಂಧ, ದ್ರಾಕ್ಷಾರಸ, ಗೋಧಿ ಹಿಟ್ಟು, ಕೇಸರಿ, ಪಚ್ಚಕರ್ಪೂರ, ಪಂಚಕಳಶದ ಅಭಿಷೇಕ ಮಾಡಲಾಯಿತು.[ಚಾಮುಂಡಿ ಬೆಟ್ಟದಲ್ಲಿ ಇನ್ಮುಂದೆ ವಸ್ತ್ರಸಂಹಿತೆ ಜಾರಿ?]

ಸೋಮವಾರ ನೆರವೇರಬೇಕಾದ ಮಜ್ಜನ ಭಾನುವಾರ ನೆರವೇರಿದ್ದೇಕೆ?

ಸೋಮವಾರ ನೆರವೇರಬೇಕಾದ ಮಜ್ಜನ ಭಾನುವಾರ ನೆರವೇರಿದ್ದೇಕೆ?

ಮೈಸೂರು ಭಾನುವಾರ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಭಾನುವಾರ ಮಸ್ತಾಭಿಷೇಕ ನೆರವೇರಿಸಿದ್ದಲ್ಲಿ ನೂರಾರು ಭಕ್ತರು ಈ ಸೌಂದರ್ಯ ನೆಲೆಯಲ್ಲಿ ಮಿಂದೇಳಲಿದ್ದಾರೆ ಎಂಬ ಸದ್ದುದ್ದೇಶದಿಂದ ಈ ಕಾರ್ಯ ನೆರವೇರಿತು. ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಬೆಟ್ಟದ ನಂದಿಗೆ ನಮೋ ಎಂದರು.

English summary
Bettada balaga have organized anoitment to the statue of Nandi a top of Chamundi Hills, Mysuru, on Sunday, November 29th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X