ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗರಿಗೆ ಸಿಹಿ ಸುದ್ದಿ : ಬೆಂಗಳೂರಿಗೆ ಮತ್ತೆರಡು ರೈಲು ಸಂಚಾರ

|
Google Oneindia Kannada News

ಮೈಸೂರು, ಜನವರಿ 15 : ಮೈಸೂರಿನ ಜನರಿಗೆ ಸಂಕ್ರಾಂತಿ ಹಬ್ಬದ ದಿನ ಸಿಹಿ ಸುದ್ದಿ ಸಿಕ್ಕಿದೆ. ಬೆಂಗಳೂರು-ಮೈಸೂರು ನಡುವೆ ಮತ್ತೊಂದು ರೈಲು ಸೇವೆ ಆರಂಭವಾಗಿದೆ.

ಮೈಸೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ರೈಲು ಸೇವೆಗೆ ಚಾಲನೆ ನೀಡಿದರು. ಚೆನ್ನೈ-ಕೆ.ಎಸ್.ಆರ್ ಮತ್ತು ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಮೈಸೂರಿನ ತನಕ ವಿಸ್ತರಣೆ ಮಾಡಲಾಗಿದೆ.

ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ

Mysuru-Chennai and Chennai-KRS rail service extended to Mysururu

ಸಮಾರಂಭದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, 'ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಶತಾಬ್ದಿ ರೈಲಿಗಿಂತ ಕಡಿಮೆ ವೇಗದಲ್ಲಿ ಏನು ಸಂಚಾರ ನಡೆಸುವುದಿಲ್ಲ' ಎಂದು ಹೇಳಿದರು.

ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರ ಆರಂಭಬೆಂಗಳೂರು-ಮೈಸೂರು ಮೆಮು ರೈಲು ಸಂಚಾರ ಆರಂಭ

'ಮೈಸೂರಿನ ಹಲವು ಸಾಫ್ಟ್ ವೇರ್ ಇಂಜಿನಿಯರ್‌ಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ರೈಲು ಸೇವೆಗಳ ಮೂಲಕ ಅವರಿಗೆ ಪ್ರತಿನಿತ್ಯ ಸಂಚಾರ ನಡೆಸಲು ಅನುಕೂಲವಾಗಲಿದೆ' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ?IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ?

'ಎರಡು ರೈಲುಗಳು ಸಿಕ್ಕಿರುವುದರಿಂದ ಏನು ಉಪಯೋಗವಾಗಲಿದೆ ಎಂದು ಮೈಸೂರು-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರನ್ನು ಕೇಳಿದರೆ ಗೊತ್ತಾಗುತ್ತದೆ. ಸುಲಭವಾಗಿ ಜನರು ಉಭಯ ನಗರಗಳ ನಡುವೆ ಸಂಚರಿಸಲು ಇದು ಸಹಾಯಕವಾಗಲಿದೆ' ಎಂದು ಸಂಸದರು ತಿಳಿಸಿದರು.

'ಬೆಂಗಳೂರು-ಮೈಸೂರು ನಡುವೆ ಸಂಜೆ ರೈಲುಗಳ ಕೊರತೆ ಇತ್ತು. ಮೆಮೆ ರೈಲು, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಆರಂಭವಾದ ಬಳಿಕ ಈ ಕೊರತೆಯೂ ನೀಗಿದೆ. ಸಾವಿರಾರು ಜನರಿಗೆ ಇದು ಉಪಯೋಗವಾಗಿದೆ' ಎಂದರು.

'ಬೆಂಗಳೂರು-ಮೈಸೂರು, ಮೈಸೂರು-ಬೆಂಗಳೂರು ನಡುವೆ ಪ್ರತಿ ಗಂಟೆಗೊಂದು ರೈಲು ಸಂಚಾರ ನಡೆಸಬೇಕು ಎಂಬುದು ನನ್ನ ಗುರಿಯಾಗಿದೆ. ಇದನ್ನು ಕಾರ್ಯರೂಪಕ್ಕೆ ತರಲು ಸಕಲ ರೀತಿಯಲ್ಲಿ ಪ್ರಯತ್ನ ನಡೆಸಲಾಗುತ್ತದೆ' ಎಂದು ಭರವಸೆ ನೀಡಿದರು.

English summary
On January 15, 2019 Bengaluru-Chennai and Chennai-KRS rail service extended to Mysururu. Mysururens get additional two trains to travel Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X