ಅಚ್ಚರಿ ಆದರೂ ನಿಜ.. ಇಲ್ಲಿ ನಾಲ್ಕು ತಿಂಗಳ ಮಗು ಮಾತನಾಡುತ್ತಿದೆ!

Posted By:
Subscribe to Oneindia Kannada

ಮೈಸೂರು, ಜುಲೈ 31: ಮೈಸೂರಿನಲ್ಲಿ ವೈದ್ಯಲೋಕವೇ ನಿಬ್ಬೆರಗಾಗುವ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಯಾವುದೇ ಮಗು ಜನಿಸಿದ ಹತ್ತು ಅಥವಾ ಹನ್ನೊಂದು ತಿಂಗಳ ನಂತರವಷ್ಟೇ ತನ್ನ ತೊದಲು ನುಡಿಗಳನ್ನಾಡುತ್ತೆ. ಆದರೆ ಇಲ್ಲೊಂದು ಮಗು ಕೇವಲ ನಾಲ್ಕು ತಿಂಗಳಿಗೇ ತೊದಲು ನುಡಿಗಳಾನ್ನಾಡುತ್ತಿದ್ದು ಅಚ್ಚರಿ ಮೂಡಿಸಿದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀರಾಂಪುರದ ಪರಸಯ್ಯನಹುಂಡಿಯ ರಮ್ಯ ಮತ್ತು ನಂದೀಶ್ ದಂಪತಿಗೆ ಜನಿಸಿರುವ ಈ ಗಂಡು ಮಗು ಇಂತಹ ವಿಸ್ಮಯಕ್ಕೆ ಕಾರಣವಾಗಿದೆ. ಈ ಮಗು ತನ್ನ ತಾಯಿಯೊಂದಿಗೆ ನಿರಂತರ ಸಂವಹನದಲ್ಲಿದ್ದು, ತಾಯಿ ಹೇಳುವ ಪ್ರತೀ ಶಬ್ದವನ್ನು ಗ್ರಹಿಸುತ್ತಿದೆ.

Believe it or not! four-month old infant speaks in Mysuru.

ತಾಯಿ ಯಾವುದಾದರೂ ಒಂದು ಪದವನ್ನು ಹತ್ತಾರು ಬಾರಿ ಹೇಳಿದರೆ ಸಾಕು ಮಗು ಅದನ್ನೇ ಅನುಕರಿಸುತ್ತದೆ. ತಾಯಿ ಬೇಕಾ...ಬೇಕಾ ಅಂದರೆ ಮಗು ತನ್ನ ಸಣ್ಣ ಧ್ವನಿಯಲ್ಲಿ ಬೇಕು ಎಂದು ಹೇಳುತ್ತದೆ.

ಇನ್ನು ತಾಯಿ ರಮ್ಯಳಿಗೆ ಮನೆಯಲ್ಲಿ ಬುಡ್ಕಿ ಎಂದು ಅಡ್ಡ ಹೆಸರು ಕರೆಯುತ್ತಾರೆ. ಮಗು ಕೆಲವು ಸಲ ಬುಡ್ಕಿ ಅಂತಾನೇ ತಾಯಿಯನ್ನು ಕರೆಯುತ್ತೆ. ಇನ್ನೂ ಅಕ್ಕ, ರಮ್ಯ, ನಾನು, ಗೊತ್ತಿಲ್ಲ ಹೀಗೆ ಅನೇಕ ಪದಗಳನ್ನು ನಾಲ್ಕು ತಿಂಗಳ ಕೂಸು ಹೇಳುತ್ತದೆ. ಇವೆಲ್ಲ ಮನೆಯವರ ಆಶ್ಚರ್ಯ ಕ್ಕೆ ಕಾರಣವಾಗಿದೆ.

Mysuru: Yaduveer Urs is angry on media | Oneindia Kannada

ಸಾಮಾನ್ಯವಾಗಿ ಮಗು ಹೊಟ್ಟೆಯಲ್ಲಿರುವಾಗಲೇ 5 ತಿಂಗಳ ನಂತರ ತಾಯಿಯ ಸಂವೇದನೆಗಳಿಗೆ ಸ್ಪಂದಿಸಲು ಆರಂಭಿಸುತ್ತದೆ. ಆದರೆ ಜನಿಸಿದ ನಂತರ 4 ತಿಂಗಳಲ್ಲಿ ತೊದಲು ನುಡಿಯುವುದು ತೀರಾ ತೀರಾ ಅಪರೂಪ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Usually children start speaking at the age of 10 months. Here is a baby, which started to speak at 4 months of age in Mysuru.
Please Wait while comments are loading...