ಬಾರ್‌ಗೆ ಕನ್ನ ಹಾಕಿ ಲಕ್ಷ ರು. ದೋಚಿದ ಕಳ್ಳರು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮೇ 12 : ಬಾರ್ ಮತ್ತು ವೈನ್ ಸ್ಟೋರ್‌ನ ಶಟರ್‌ನ್ನು ಹಾರೆಯಿಂದ ಮೀಟಿ ಒಳನುಗ್ಗಿದ ಕಳ್ಳರು ಒಂದು ಲಕ್ಷ ರು.ನಷ್ಟು ಹಣವನ್ನು ದೋಚಿರುವ ಘಟನೆ ಬುಧವಾರ ಮಧ್ಯರಾತ್ರಿ ನಂಜನಗೂಡಿನಲ್ಲಿ ನಡೆದಿದೆ. ಅಲ್ಲಿ ಹಣ ದೋಚಿದ್ದಾರೆಯೇ ಹೊರತು ಒಂದೇ ಒಂದು ಮದ್ಯದ ಬಾಟಲಿಯೂ ಅಲ್ಲಾಡಿಲ್ಲ.

ನಂಜನಗೂಡು ಪಟ್ಟಣದ ಹೃದಯಭಾಗದಲ್ಲಿರುವ ಹುಲ್ಲಹಳ್ಳಿ ರಸ್ತೆ ವೃತ್ತದಲ್ಲಿ ಘಟನೆ ನಡೆದಿರುವುದರಿಂದ ಜನ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಇದರಲ್ಲಿ ಕೆಲಸ ಮಾಡುವವರ ಕೈವಾಡವಿರಬಹುದೆ ಎಂಬ ಪ್ರಶ್ನೆಯೂ ಮೂಡಿದೆ. [ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!]

Bar and wine store robbed in Nanjangud

ಪಟ್ಟಣದಲ್ಲಿ ಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ಇದ್ದು ಇದರ ಪಕ್ಕವೇ ಶೀಕಂಠೇಶ್ವರ ವೈನ್ ಸ್ಟೋರ್ ಇದೆ. ಬುಧವಾರ ಮಧ್ಯರಾತ್ರಿ ಬಾರ್ ಶಟರ್ ಮೀಟಿ ನುಗ್ಗಿದ ಕಳ್ಳರು ಬಾರ್‌ನಲ್ಲಿದ್ದ 75 ಸಾವಿರ ರು. ದೋಚಿ ಬಳಿಕ ಪಕ್ಕದ ವೈನ್ ಸ್ಟೋರ್‌ಗೆ ನುಗ್ಗಿದ್ದಾರೆ. ಅಲ್ಲಿ ಹುಡುಕಾಡಿ ಅಲ್ಲಿದ್ದ 30 ಸಾವಿರ ರುಪಾಯಿಯನ್ನು ದೋಚಿಕೊಂಡು ಹೋಗಿದ್ದಾರೆ.

ಘಟನೆ ಮಧ್ಯರಾತ್ರಿ ನಡೆದಿದ್ದರೂ ಬೆಳಿಗ್ಗೆ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳಕ್ಕೆ ಡಿವೈಎಸ್‌ಪಿ ಕಲಾವತಿ, ಎಎಸ್‌ಪಿ ದಿವ್ಯಾ ಸಾರ ಥಾಮಸ್, ಎಎಸ್‌ಐ ವಿ.ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಯಿಸಲಾಗಿದ್ದು ಮಾಹಿತಿ ಸಂಗ್ರಹಿಸಲಾಗಿದೆ. [ಮಕ್ಕಳ ಕೈಯಲ್ಲಿ ಮದ್ಯ ಸಿಕ್ಕರೆ ಬಾರ್ ಮಾಲೀಕರಿಗೆ ಜೈಲೂಟ]

Bar and wine store robbed in Nanjangud

ಮಾಲೀಕರಾದ ಹನುಮಂತೇಗೌಡ ಹಾಗೂ ಗಜಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಬಾರ್ ಮತ್ತು ವೈನ್ ಸ್ಟೋರ್‌ನಲ್ಲಿ ರಾತ್ರಿ ಕೆಲಸ ಮಾಡುವ ಹುಡುಗರು ಅಲ್ಲಿಯೇ ಮಲಗುತ್ತಿದ್ದು ರಾತ್ರಿ ಮಲಗಿರಲಿಲ್ಲವೇ? ಇದರಲ್ಲಿ ಬಾರ್‌ನಲ್ಲಿ ಕೆಲಸ ಮಾಡುವವರ ಕೈವಾಡವಿದೆಯೇ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. [ಮಲ್ಯರಿಗೆ ಸ್ಕಾಚ್ ವ್ಹಿಸ್ಕಿ ಗಿಫ್ಟ್ ಆಗಿ ಕೊಟ್ಬಿಡಿ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A bar and wine story in Nanjangud has been robbed on Wednesday night. The thieves have taken away Rs 1 lakh from both the stores. Police suspect the it could be handy work of workers working in bar and wine shop.
Please Wait while comments are loading...