ಪಕ್ಕಾ ಆಯ್ತ ವಿಜಯೇಂದ್ರ ಟಿಕೇಟ್ ? ವರುಣಾದಲ್ಲಿ ಗೃಹಪ್ರವೇಶ!

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಏಪ್ರಿಲ್ 13 : ವರುಣಾ ಕ್ಷೇತ್ರದಲ್ಲಿ ದಿನೇ ದಿನೇ ವಿಜಯೇಂದ್ರ ಬಿಜೆಪಿ ಅಭ್ಯರ್ಥಿ ಎಂದು ಖಾತ್ರಿಗೊಳಿಸುತ್ತಿರುವ ಘಟನೆ ಮರುಕಳಿಸುತ್ತಿದೆ. ಇನ್ನು ಇದಕ್ಕೆ ಪೂರಕವೆಂಬಂತೆ ವಿಜಯೇಂದ್ರ ಕುಟುಂಬ ಸಮೇತರಾಗಿ ಇದೇ ವರುಣ ಗ್ರಾಮದಲ್ಲಿ ನೂತನ ಗೃಹ ಪ್ರವೇಶ ಮಾಡಿದ್ದಾರೆ.

ಮೈಸೂರಿನಲ್ಲೇ ಠಿಕಾಣಿ ಹೂಡಿದ್ದಾರೆ ಬಿ.ವೈ ವಿಜಯೇಂದ್ರ!

ತಮ್ಮ ಪತ್ನಿ ಪ್ರೇಮ ಜತೆ ಹೋಮ-ಹವನ ಪೂಜೆ ನೆರವೇರಿಸಿದ ವಿಜಯೇಂದ್ರ ನೂತನ ಗೃಹ ಪ್ರವೇಶ ಮಾಡಿದ್ದಾರೆ. ಕುಲದೇವ ಯಡಿಯೂರು ಸಿದ್ದಲಿಂಗೇಶ್ವರ, ಉಮಾ ಮಹೇಶ್ವರಿ, ಕ್ಷೇತ್ರದ ಅಧಿದೇವ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಜೊತೆಗೆ ತಾಯಿ ಮೈತ್ರಿದೇವಿ ಭಾವಚಿತ್ರವಿಟ್ಟು ಮಾತೃಪೂಜೆಯನ್ನು ನೆರವೇರಿಸಿದರು. ಇನ್ನು ಇದನ್ನು ಬಿ.ವೈ ವಿಜಯೇಂದ್ರ ಒಂದು ತಿಂಗಳ ಮಟ್ಟಿಗೆ ಬಾಡಿಗೆ ಮನೆ ಪಡೆದಿದ್ದಾರೆ ಎನ್ನಲಾಗಿದೆ.

B Y Vijendra new home opening ceremony in Varuna constituency, Mysuru

ಗೃಹಪ್ರವೇಶದಲ್ಲಿ ಬಿಜೆಪಿ ಮುಖಂಡರು, ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಬಿ. ವೈ ವಿಜಯೇಂದ್ರ ಅವರು, ಇದು ನನ್ನ ಮನೆಯಲ್ಲ ಬಿಜೆಪಿ ಕಾರ್ಯಕರ್ತರ ಮನೆ. ಚುನಾವಣೆವರೆಗೂ ಇಲ್ಲಿಗೆ ಬರುತ್ತೇನೆ. ಚುನಾವಣೆ ಮುಗಿದ ಮೇಲೂ ಇಲ್ಲೆ ಇರುತ್ತೇನೆ ಎಂದರು.

B Y Vijendra new home opening ceremony in Varuna constituency, Mysuru

ತಮ್ಮ ಮನೆಯ ಬಾಗಿಲು ಸದಾ ಕಾಲ ಜನರ ಸೇವೆಗೆ ಸದಾ ಬಾಗಿಲು ತೆರೆದಿರುತ್ತೆ. ಯಾರು ಬೇಕಾದರು ಬರಬಹುದು ಹೋಗಬಹುದು. ದೈವಕೃಪೆ ಬೇಕು ಎನ್ನುವ ಕಾರಣಕ್ಕೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ್ದೇನೆ. ವಲಸಿಗ ಅನ್ನುವ ಆರೋಪ ಕಳೆದು ಕೊಳ್ಳಲು ಅಥವಾ ಇತರರ ತೃಪ್ತಿಗೆ ನಾನು ಇಲ್ಲಿ ಮನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದೆ ವರುಣಾ ಕ್ಷೇತ್ರದ ಪಕ್ಷದ ಕಚೇರಿಯೂ ಇದೆ ಆಗಲಿದೆ. ಸಿದ್ದರಾಮಯ್ಯನವರು ಇಲ್ಲಿನ ವಾತವರಣ ನೋಡಿಯೇ ಬದಾಮಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP leader B. S Yeddyurappa's son, B Y Vijayendra’s new house opening ceremony at Varuna today. He offered special pooja to God for win BJP in upcoming election.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ