ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಗೆ ಮೊಬೈಲ್ ಸಂದೇಶ ಕಳಿಸಿದ ಯುವಕನಿಗೆ ಆಕೆ ಸೋದರರಿಂದ ಒದೆ

|
Google Oneindia Kannada News

ಮೈಸೂರು, ಡಿಸೆಂಬರ್ 10 : ಯುವಕನೊಬ್ಬ ಮಹಿಳೆಗೆ ಮೊಬೈಲ್ ಸಂದೇಶ ಕಳುಹಿಸಿದ್ದಕ್ಕೆ ಮಹಿಳೆ ಹಾಗೂ ಆಕೆಯ ಸಹೋದರ ಇಬ್ಬರು ಸೇರಿ ಹಲ್ಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೆಬ್ಬಾಳ್ ನ 2ನೇ ಹಂತದ ನಿವಾಸಿ ಹೇಮಂತ ಕುಮಾರ್ ಹಲ್ಲೆಗೊಳಗಾದವರು. ಈತ ಲತಾ ಎಂಬ ಮಹಿಳೆಯ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿದ್ದ. ಇದರಿಂದ ರೋಸಿ ಹೋದ ಮಹಿಳೆ, ತನ್ನ ತಮ್ಮನೊಂದಿಗೆ ಡಿಸೆಂಬರ್ 5ರಂದು ಹೇಮಂತಕುಮಾರ್ ಮನೆ ಮುಂದೆ ಗಲಾಟೆ ಮಾಡಿದ್ದರು. ಆ ವೇಳೆಯಲ್ಲಿ ಸಾರ್ವಜನಿಕರು ಸಮಾಧಾನ ಮಾಡಿ ಕಳುಹಿಸಿದ್ದರು.

ಮೊಬೈಲ್ ಚಾಟಿಂಗ್ ಪ್ರಶ್ನಿಸಿದ ಪತ್ನಿಗೆ ಬ್ಯಾಟ್ ನಿಂದ ಬಡಿದ ಎಎಸ್ ಐ ಮೊಬೈಲ್ ಚಾಟಿಂಗ್ ಪ್ರಶ್ನಿಸಿದ ಪತ್ನಿಗೆ ಬ್ಯಾಟ್ ನಿಂದ ಬಡಿದ ಎಎಸ್ ಐ

ಆ ಬಳಿಕ ಡಿಸೆಂಬರ್ 7ರ ರಾತ್ರಿ 12.30ರ ಸಮಯದಲ್ಲಿ ಲತಾ ಹಾಗೂ ಆಕೆಯ ಸಹೋದರ, ಮತ್ತೊಬ್ಬ ವ್ಯಕ್ತಿ ಹೇಮಂತ್ ಕುಮಾರ್ ಮನೆಗೆ ನುಗ್ಗಿ, ಆತನನ್ನು ಬಲವಂತವಾಗಿ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಕೂರಿಸಿಕೊಂಡು ಬಂದು, ರಾಜು ಅಪಾರ್ಟ್ ಮೆಂಟ್ ನ ಹಿಂಭಾಗದ ರಸ್ತೆಯಲ್ಲಿ ಹಲ್ಲೆ ನಡೆಸಿದ್ದಾರೆ. ಆಗ ಆತ ಪ್ರಜ್ಞಾಹೀನನಾಗಿದ್ದಾರೆ.

Attack on young man for sending mobile message to woman

ಹೇಮಂತ್ ಕುಮಾರ್ ಅವರ ಭಾವ ಹುಡುಕಿಕೊಂಡು ಹೋದಾಗ, ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಯ ಧರೆಪ್ಪನಿಗೆ ಹುಡುಗಿಯರ ಮೊಬೈಲ್ ನಂಬರ್ ಸಿಕ್ಕರೆ ಆಡಿದ್ದೇ ಆಟ ಬೆಳಗಾವಿಯ ಧರೆಪ್ಪನಿಗೆ ಹುಡುಗಿಯರ ಮೊಬೈಲ್ ನಂಬರ್ ಸಿಕ್ಕರೆ ಆಡಿದ್ದೇ ಆಟ

ಬಸ್ ಹತ್ತುವ ವೇಳೆ ಕೆಳಗೆ ಬಿದ್ದು ದಾರುಣ ಸಾವು

ಖಾಸಗಿ ಬಸ್ ಚಲಿಸಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಸಂಭವಿಸಿದೆ.

ತಿ.ನರಸೀಪುರ ಖಾಸಗಿ ಬಸ್ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಗಾಯತ್ರಿ (52) ಮೃತ ದುರ್ದೈವಿ. ಗಾಯತ್ರಿ ಅವರು ನಂಜನಗೂಡಿನ ನಿವಾಸಿಯಾಗಿದ್ದು, ತಿ.ನರಸೀಪುರದ ಯರಗನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ತಿ.ನರಸೀಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Woman and her brothers attack on young man Hemanth Kumar for sending mobile message in Mysuru. In other case took place in T Narasipura bus moved on woman and she died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X