ಪ್ಲಾಸ್ಟಿಕ್ ಬಳಕೆ ಹಾಗೂ ಅಶುಚಿತ್ವ: ಮೈಸೂರು ಹಿಟ್ಟಿನ ಗಿರಣಿ ಮೇಲೆ ದಾಳಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮೇ 16: ಅನಧಿಕೃತವಾಗಿ ಪ್ಲಾಸ್ಟಿಕ್ ಬಳಕೆ ಹಾಗೂ ಅಶುಚಿತ್ವದ ದೂರಿನನ್ವಯ ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧಿಕಾರಗಳು ಅಕ್ಕಿ ಹಿಟ್ಟು ಗಿರಣಿಗೆ ದಾಳಿ ನಡೆಸಿದರು.

ಟ್ರೇಡ್ ಲೈಸೆನ್ಸ್, ಉದ್ದಿಮೆ ರಹದಾರಿ ಹಾಗೂ ಪುಡ್ ಲೈಸೆನ್ಸ್ ಇಲ್ಲದೆ ಅಕ್ಕಿ ಹಿಟ್ಟು ತಯಾರಿ ಹಾಗೂ ಮಾರಾಟ, ಜೊತೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪಾಲಿಕೆ ಅಧಿಕಾರಿಗಳಾದ ಡಾ ರಾಮಚಂದ್ರ , ಪರಿಸರ ಅಭಿಯಂತರರು ಹಾಗೂ ಪುಡ್ ಇನ್ಸ್ ಪೆಕ್ಟರ್ ದಾಕ್ಷಾಯಿಣಿಯವರು ಹಿಟ್ಟಿನ ಗಿರಣಿ ಮೇಲೆ ದಾಳಿ ನಡೆಸಿದ್ದಾರೆ.[ಮೈಸೂರಿನಲ್ಲಿ ಚಿತ್ರೀಕರಣಕ್ಕಾಗಿ ನಿಷೇಧಿತ ಡ್ರೋನ್ ಕ್ಯಾಮೆರಾ ಬಳಕೆ]

Attack on flour mill in Mysuru

ಶಿವರಾಂಪೇಟೆ ರೋಡ್ ನಲ್ಲಿರುವ ಸದಾನಂದ ಟೈಕೂನ್ ಹಿಟ್ಟು, ರವೆ ಮತ್ತು ಮಸಾಲೆಗಳ ಮಾರಾಟ ಮಳಿಗೆ ಮೇಲೆ ದಾಳಿ ನಡೆದಿದೆ. ಅಂಗಡಿ ಪ್ರವೇಶಿಸಲು ನಿರಾಕರಿಸಿದ ಮಾಲೀಕರ ವಿರುದ್ಧ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಅಧಿಕಾರಿಳು ಧರಣಿ ನಡೆಸಿದರು. ದಾಳಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವಪ್ಪ , ಸದಸ್ಯರುಗಳಾದ ಪ್ರಶಾಂತ್ ಗೌಡ, ರಾಮು ಹಾಗೂ ಕಮಲ ಪಾಲ್ಗೊಂಡಿದ್ದರು.[ಮೈಸೂರು: ಚೆಸ್ಕಾಂ ಅಧಿಕಾರಿ ಸಿದ್ದಲಿಂಗಸ್ವಾಮಿ ಮನೆ ಮೇಲೆ ಎಸಿಬಿ ದಾಳಿ]

Attack on flour mill in Mysuru

ಇದೀಗ ಪಾಲಿಕೆ ಅಧಿಕಾರಿಗಳು ಹಿಟ್ಟಿನ ಗಿರಣಿಗೆ ಬೀಗ ಜಡಿದಿದ್ದಾರೆ. ಸ್ಥಳಕ್ಕೆ ದೇವರಾಜ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Health standing commission attacks a flour mill, in Mysuru, todahy, which was using banned plastics.
Please Wait while comments are loading...