ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂಗಳಲ್ಲಿ 2,000 ರೂ. ನೋಟು ಡ್ರಾ ಮಾಡಲು ಹಿಂದೇಟು

2,000ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದ್ದರೂ ಚಿಲ್ಲರೆ ಮಾಡಿಸಲು ಕಷ್ಟವಾಗುವುದರಿಂದ ಹಲವು ಮಂದಿ ಎರಡು ಸಾವಿರ ರೂ. ನೋಟುಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

By ಅನುಷಾ ರವಿ
|
Google Oneindia Kannada News

ಮೈಸೂರು, ನವೆಂಬರ್, 20: ದೇಶದಾದ್ಯಂತ ಬಹುತೇಕ ಎಟಿಎಂ ಘಟಕಗಳಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಲಭ್ಯವಿವೆ. ಆದರೆ ಸಾರ್ವಜನಿಕರು ಮಾತ್ರ 2 ಸಾವಿರ ರೂ. ನೋಟನ್ನು ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಎಟಿಎಂ ಘಟಕಗಳಲ್ಲಿ ಹೊಸ ನೋಟುಗಳಿಗಾಗಿ ಕೈಯೊಡ್ಡುತ್ತಿರುವ ಗ್ರಾಹಕರಿಗೆ 2 ಸಾವಿರ ರೂ. ನೋಟು ಸಿಗುತ್ತಿದ್ದು, 2 ಸಾವಿರ ರೂ. ನೋಟು ನೀಡುತ್ತಿರುವ ಎಟಿಎಂಗಳ ಮುಂದೆ ಜನರ ಕ್ಯೂ ಕೂಡ ಕಡಿಮೆ ಇದೆ.[ನೋಟು ರದ್ದು ಮಾಡಿದ ಹೆಚ್ಚಿನ ದೇಶಗಳು ವಿಫಲ?]

ATMs dispense Rs 2000 notes, find no takers

"2 ಸಾವಿರ ರೂ. ನೋಟು ಡ್ರಾಮಾಡಿಕೊಳ್ಳಲು ಸಮಸ್ಯೆಯೇನೂ ಅಲ್ಲ. ಆದರೆ ಚಿಲ್ಲರೆಗಾಗಿ ಮತ್ತೆ ಪರಿತಪಿಸಬೇಕು. ಅದರು ಸರ್ಕಾರ ರೂ. 100 ಹಾಗೂ ರೂ. 500 ಮುಖಬೆಲೆಯ ನೋಟುಗಳನ್ನು ಪೂರೈಸಿದರೆ ಚೆನ್ನಾಗಿರುತ್ತೆ" ಎಂದು ಮೈಸೂರಿನ ಗ್ರಾಹರೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದರು.

2 ಸಾವಿರ ರೂ. ನೋಟು ಅಳವಡಿಸಲು ಹಲವು ಎಟಿಎಂಗಳಲ್ಲಿ ತಾಂತ್ರಿಕ ಸಮಸ್ಯೆ ಇತ್ತು. ಮೈಸೂರಿನ 200 ಎಟಿಎಂ ಘಟಕಗಳಲ್ಲಿ 2 ಸಾವಿರ ರೂ. ನೋಟುಗಳು ಸಿಗುತ್ತಿವೆ. ಆದರೆ ಜನರು ಮತ್ರ ಹೆಚ್ಚು ಆಸಕ್ತಿ ತೋರುತ್ತಿಲ್ಲ.

ರಾಜ್ಯದಾದ್ಯಂತ ಹಲವು ಎಟಿಎಂ ಗಳಲ್ಲಿ ಪ್ರಸ್ತುತ 2 ಸಾವರಿ ರೂ. ನೋಟುಗಳನ್ನು ಪೂರೈಸಲಾಗುತ್ತಿದೆ. ಆದರೆ ಜನರು ಮಾತ್ರ 100ರೂ. ನೋಟುಗಳ ಲಭ್ಯತೆ ಇರುವ ಎಟಿಎಂ ಕೇಂದ್ರಗಳ ಮುಂದೆ ಮಾತ್ರ ಕ್ಯೂಕಟ್ಟಿ ನಿಲ್ಲುತ್ತಿದ್ದಾರೆ.

English summary
Many ATMs across the country have been recalibrated to dispense Rs 2000 notes but have found very few takers. While people are queuing up outside ATMs and banks to lay their hands on new notes, ATMs dispensing Rs 2000 notes see no queues or crowding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X