ಯುವಕನ ಮೇಲೆ ಹಲ್ಲೆ ಮಾಡಿದ ಮಹಿಳೆ ಪೊಲೀಸರ ವಶಕ್ಕೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ನವೆಂಬರ್ 11: ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ವಕ್ತಿಯೊಬ್ಬನ ಮೇಲೆ ಮಹಿಳೆ ಥಳಿಸಿ, ಅಪಹರಣಕ್ಕೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಈ ಸಂಬಂಧ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ರಾಮಕೃಷ್ಣನಗರದ ನಿವಾಸಿ ಶಾಂತಿ ಎಂಬಾಕೆ ಬಂಧಿತ ಆರೋಪಿ.

ಈಕೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಸಂತೋಷ್ ಎಂಬಾತ ಪಾಲುದಾರನಾಗಿದ್ದ. ಕಳೆದ ಕೆಲ ಸಮಯದಿಂದ ಜೊತೆಯಾಗಿಯೇ ಇವರಿಬ್ಬರು ವ್ಯವಹಾರ ನಡೆಸುತ್ತಿದ್ದರು. ಶಾಂತಿ ಉದ್ಯಮದಲ್ಲಿ ಹಿಡಿತ ಸಾಧಿಸಿದ್ದಳು. ಇದೀಗ ಈಕೆ ತನ್ನ ಪಾಲುದಾರನ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದಾಳೆ.[ಸುಪಾರಿ ನೀಡಿದ್ದ ಮೈಸೂರು ಯುವತಿ ಪೊಲೀಸರ ಅತಿಥಿ]

Shanthi, Mysuru

ಪಾಲುದಾರ ಸಂತೋಷ ಮತ್ತು ಶಾಂತಿ ಇಲ್ಲಿ ತನಕ ಜೊತೆ ಜೊತೆಯಾಗಿ ವ್ಯವಹಾರ ನಡೆಸಿಕೊಂಡು ಬಂದಿದ್ದರಾದರೂ ಹಣಕಾಸಿನ ವಿಚಾರದಲ್ಲಿ ಇಬ್ಬರ ಮಧ್ಯೆ ವೈಮನಸ್ಸು ಬಂದಿತ್ತು. ಹೀಗಾಗಿ ಗಲಾಟೆ ಆರಂಭವಾಗಿತ್ತು. ಇದು ವಿಕೋಪಕ್ಕೆ ತೆರಳಿದ್ದರಿಂದ ಆಕ್ರೋಶಗೊಂಡ ಶಾಂತಿ, ಪಾಲುದಾರ ಸಂತೋಷನ ಮೇಲೆ ಹಲ್ಲೆ ಮಾಡಿ, ಇಬ್ಬರು ಯುವಕರ ಅವರ ಸಹಾಯದಿಂದ ಹಲ್ಲೆ ಮಾಡಿ, ಅಪಹರಣಕ್ಕೆ ಯತ್ನಿಸಿದ್ದಳು.[ಬಾಲಕನ ಮೇಲೆ ಅತ್ಯಾಚಾರ: ಮಹಿಳೆ ವಿರುದ್ಧ ಪೋಕ್ಸೋ ಕೇಸು]

ಆದರೆ, ಹಲ್ಲೆಗೊಳಗಾದ ಸಂತೋಷ್ ಅಸ್ವಸ್ಥನಾಗಿದ್ದು, ಮನೆಗೆ ತಲುಪಿ ವಿಷಯ ತಿಳಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಹಲ್ಲೆಗೊಳಗಾದ ಸಂತೋಷನ ತಾಯಿ ಮೇಟಗಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಶಾಂತಿಯನ್ನು ವಶಕ್ಕೆ ಪಡೆದು ಜೈಲಿಗೆ ತಳ್ಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shanthi, who arrested by Mysuru police in assault case. She beaten her business partner Santhosh with the help of others two. Complaint registered against her.
Please Wait while comments are loading...