ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಮೆರವಣಿಗೆ ಗಣನಾಯಕನಾಗಿ ಅರ್ಜುನ್ ಮರುನೇಮಕ

|
Google Oneindia Kannada News

ಮೈಸೂರು, ಜೂ.23 : ಈ ಬಾರಿಯ ಮೈಸೂರು ದಸರಾದಲ್ಲಿಯೂ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ಅರ್ಜುನನ ಹೆಗಲೇರಿದೆ. ಅಕ್ಟೋಬರ್‌ನಲ್ಲಿ ದಸರಾ ನಡೆಯಲಿದ್ದು, ಆಗಸ್ಟ್ ಕೊನೆಯವಾರದಲ್ಲಿ ಗಜಪಡೆ ಮೈಸೂರಿಗೆ ಆಗಮಿಸಲಿವೆ.

ಮೈಸೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯ ದಸರಾಕ್ಕೂ 14 ಆನೆಗಳನ್ನು ಕರೆತರಲು ನಿರ್ಧರಿಸಲಾಗಿದೆ. ಅರ್ಜುನ ಗಜಪಡೆಯ ನೇತೃತ್ವ ವಹಿಸಲಿದ್ದು, 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿದ್ದಾನೆ. [ಮೈಸೂರು ಜಂಬೂ ಸವಾರಿ ಆನೆಗಳ ಬಯೋಡೇಟಾ]

elephant

ಈ ಬಾರಿಯ ದಸರಾಗೆ ಬಲರಾಮ, ಅಭಿಮನ್ಯು, ಪ್ರಶಾಂತ, ಗೋಪಾಲಸ್ವಾಮಿ, ವಿಕ್ರಮ, ಕಾವೇರಿ, ದುರ್ಗಾ ಪರಮೇಶ್ವರಿ ಆನೆಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಜುಲೈನಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲಾ 14 ಆನೆಗಳ ಹೆಸರುಗಳನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ. [ಗಜಪಡೆಗಳ ಕಾಳಗಕ್ಕೆ ಸಾಕ್ಷಿಯಾದ ಪಿರಿಯಾಪಟ್ಟಣ]

'ಅಕ್ಟೋಬರ್ ತಿಂಗಳಿನಲ್ಲಿ ದಸರಾ ನಡೆಯಲಿದ್ದು, ಆಗಸ್ಟ್ ಕೊನೆ ವಾರ ಅಥವ ಸೆಪ್ಟೆಂಬರ್ ಮೊದಲ ವಾರದಲ್ಲಿ ಆನೆಗಳ ಮೊದಲ ತಂದ ಮೈಸೂರಿಗೆ ಆಗಮಿಸಲಿದೆ. ಮುಂದಿನ ತಿಂಗಳು ಇನ್ನೊಂದು ಸುತ್ತಿನ ಸಭೆ ನಡೆಸಿ ಆನೆಗಳ ಪಟ್ಟಿ ಅಂತಿಮಗೊಳಿಸುತ್ತೇವೆ' ಎಂದು ಬಿ.ಎಂ.ಪರಮೇಶ್ವರ್ ಹೇಳಿದ್ದಾರೆ. [ಜಂಬೂ ಸವಾರಿಯ ಆನೆ 'ಕಾಂತಿ' ಇನ್ನು ನೆನಪು ಮಾತ್ರ]

ಯಾರು ಅರ್ಜುನ? : ಅರ್ಜುನ (55) ಬಳ್ಳೆ ಆನೆ ಶಿಬಿರದ ಗಂಡು ಆನೆ. 1968 ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದ ಆನೆಗೆ ಅರ್ಜುನ ಎಂದು ನಾಮಕಾರಣ ಮಾಡಲಾಗಿದೆ. 2012ರಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

English summary
Arjuna the 54-year-old dasara elephant will carry the howdah during the jamboo savari in 2015 year. Carrying a howdah is not new for Arjuna. He successfully shouldered the responsibility after 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X