ಮೈಸೂರು ವಿವಿ ಉಪಕುಲಪತಿ ನೇಮಕಕ್ಕೆ ಮತ್ತೆ ತಡೆ!

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ನವೆಂಬರ್ 3: ಮೈಸೂರು ವಿವಿಗೆ ನೂತನ ಉಪಕುಲಪತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಶಿಫಾರಸ್ಸನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.

ಮುಕ್ತ ವಿವಿಯಾಯ್ತು ಈಗ ಮೈಸೂರು ವಿವಿಯಲ್ಲಿ ಅಕ್ರಮದ ವಾಸನೆ!

ರಾಜ್ಯಪಾಲ ವಜುಭಾಯಿ ವಾಲ ಅವರು ಎರಡನೇ ಭಾರಿಗೆ ಶಿಫಾರಸನ್ನು ತಿರಸ್ಕರಿಸಿದ್ದಾರೆ. ಮೈಸೂರು ವಿವಿ ಉಪಕುಲಪತಿ ಸ್ಥಾನಕ್ಕೆ ಮೈಸೂರು ವಿವಿ ಕನ್ನಡ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ ಸಿದ್ದಾಶ್ರಮ ಹೆಸರನ್ನು ಸರ್ಕಾರ ಶಿಫಾರಸು ಮಾಡಿತ್ತು. ರಾಜ್ಯಪಾಲರು ಎರಡನೇ ಬಾರಿಗೂ ಮೈಸೂರು ವಿವಿ ಸ್ಥಾನಕ್ಕೆ ಅಂಕಿತ ಹಾಕಿಲ್ಲ. ರಾಜ್ಯ ಸರ್ಕಾರ, ರಾಜ್ಯಪಾಲರ ನಡುವೆ ಸಂಘರ್ಷ ಮುಂದುವರಿದಿದೆ.

Appointment of VC to Mysuru university: Governor rejects nominee

ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಕಲುಪತಿ ಹುದ್ದೆಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಹೆಸರುಗಳನ್ನು ರಾಜ್ಯಪಾಲರು ತಿರಸ್ಕರಿಸಿದ್ದು, ಹೊಸ ಶೋಧನಾ ಸಮಿತಿಗಳನ್ನು ರಚಿಸುವಂತೆ ಶಿಫಾರಸ್ಸು ಮಾಡಿದೆ. ರಾಜ್ಯಪಾಲರು ಈ ಹಿಂದೆಯೇ ಒಂದು ಬಾರಿ ಸರಕಾರದ ಶಿಫಾರಸ್ಸನ್ನು ತಿರಸ್ಕರಿಸಿದ್ದರು. ಸರ್ಕಾರ ಮತ್ತೆ ಅದೇ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿತ್ತು. ಈಗ ಪಟ್ಟಿಯನ್ನೂ ತಿರಸಕರಿಸುವುದರಿಂದ ಹೊಸ ಶೋಧನಾ ಸಮಿತಿಗಳನ್ನು ರಚಿಸುವುದು ಅನಿವಾರ್ಯವಾಗಿದೆ.

ಖಡಕ್ ಎಚ್ಚರಿಕೆ :
ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ರಾಜ್ಯಪಾಲರು ಒಂದು ಬಾರಿ ಕಳುಹಿಸಿಸಲಾದ ಪಟ್ಟಿಯನ್ನು ವಾಪಸ್ ಕಳುಹಿಸಿದೆರೆ, ಬೇರೆ ಶೋಧನಾ ಸಮಿತಿ ರಚಿಸಿ ಹೊಸ ಪಟ್ಟಿ ನೀಡಬೇಕು ಎಂದು ಕಾನೂನಿನಲ್ಲಿಯೇ ಇದೆ. ಆದರೆ, ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಹಳೆಯ ಹೆಸರುಗಳನ್ನೇ ಮತ್ತೆ ಕಳುಹಿಸಲಾಗಿದೆ. ನೀವು ಮೊದಲು ಕಾನೂನು ತಿಳಿದುಕೊಳ್ಳಿ ಎಂದು ಅದರಲ್ಲಿ ಖಡಕ್ ಸೂಚನೆ ನೀಡಲಾಗಿದೆ.

ಎರಡೂ ವಿವಿಗಳಿಗೆ ಸಂಬಂಧಿಸಿ ಹೊಸ ಶೋಧನಾ ಸಮಿತಿ ರಚಿಸಬೇಕು. ಇಲ್ಲಿ ಚರ್ಚಿಸಿ ಹೊಸದಾಗಿ ಹೆಸರುಗಳನ್ನು ಶಿಫಾರಸ್ಸು ಮಾಡಬೇಕೆಂದು ರಾಜ್ಯಪಾಲರು ಸೂಚಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Governor Vajubhai Rudhabhai Vala has rejected the state government’s recommendation on appointing new vice chancellor to the University of Mysore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ