ಮೈಸೂರು : ವಾಜಪೇಯಿ ವಸತಿ ಯೋಜನೆಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಮೈಸೂರು, ಫೆಬ್ರವರಿ 15 : ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಬಡ ಜನರು, ನಗರದಲ್ಲಿ ಸ್ವಂತ ಖಾಲಿ ನಿವೇಶಗಳನ್ನು ಹೊಂದಿದ್ದರೆ 'ವಾಜಪೇಯಿ ನಗರ ವಸತಿ ಯೋಜನೆ' ಅನ್ವಯ ಸಹಾಯಧನ ಪಡೆದು ಮನೆ ನಿರ್ಮಿಸಿಕೊಳ್ಳಬಹುದಾಗಿದೆ.

ಈ ಯೋಜನೆಯಡಿ ನಗರದಲ್ಲಿ 600 ಮನೆಗಳನ್ನು ನಿರ್ಮಾಣ ಮಾಡಲು ಸಹಾಯಧನ ನೀಡಲಾಗುತ್ತಿದೆ. ಇವುಗಳಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 200, ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 200 ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ 200 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. [ಬಿಡಿಎ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?]

mysuru

'ವಾಜಪೇಯಿ ನಗರ ವಸತಿ ಯೋಜನೆ' ಅನ್ವಯ ಸಹಾಯಧನ ಪಡೆಯಲು ಇಚ್ಛಿಸುವ ಜನರು ಫೆಬ್ರವರಿ 25ರೊಳಗೆ ಮಹಾನಗರ ಪಾಲಿಕೆ ವಲಯ ಕಚೇರಿಗಳಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. [ವಿವರಗಳು ಇಲ್ಲಿವೆ]

ಯೋಜನೆಯ ವೆಚ್ಚ : 'ವಾಜಪೇಯಿ ನಗರ ವಸತಿ ಯೋಜನೆ'ಯ ಒಟ್ಟು ವೆಚ್ಚ 2 ಲಕ್ಷ ರೂ.ಗಳು. ಯೋಜನೆಯಡಿ 1,20,000 ರೂ. ಸಹಾಯಧನ ಸಿಗಲಿದೆ. ಬ್ಯಾಂಕುಗಳಿಂದ ಸಾಲ ಅಥವ ಹೆಚ್ಚುವರಿ ಫಲಾನುಭವಿಗಳ ವಂತಿಕೆ 50,000, ಫಲಾನುಭವಿಯ ವಂತಿಕೆ 30,000 ರೂ. ದೊರೆಯಲಿವೆ. [ಭೂತದ ಸಿನ್ಮಾಕ್ಕೆ ಸ್ಫೂರ್ತಿಯಾಗಿದ್ದ ಬಂಗಲೆ ನೆಲಸಮ!]

ಈ ಯೋಜನೆ ಅನ್ವಯ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಸ್ವಂತ ಖಾಲಿ ನಿವೇಶನ ಹೊಂದಿರಬೇಕು. ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಅರ್ಜಿದಾರರು ಫೆ.25ರೊಳಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಸಲ್ಲಿಸಬೇಕಾದ ದಾಖಲೆಗಳು : ಅರ್ಜಿದಾರರು ಅರ್ಜಿಯ ಜೊತೆ 2 ಭಾವಚಿತ್ರ, ಮತದಾರರರ ಗುರುತಿನ ಚೀಟಿ, ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ (ವಾರ್ಷಿಕ 32,000 ಮೀರದಂತೆ), ಜಾತಿ ಪ್ರಮಾಣ ಪತ್ರ, ಕಂದಾಯ ರಶೀದಿ, ನಿವೇಶನಕ್ಕೆ ಸಂಬಂಧಿಸಿದ ಹಕ್ಕು ಪತ್ರ ಮುಂತಾದವುಗಳನ್ನು ಸಲ್ಲಿಕೆ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ನಗರ ಬಡತನ ನಿರ್ಮೂಲನಾ ಕೋಶ, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru municipal corporation invited applications for Vajpayee Ashraya Yojane (Housing Scheme). Project will help financially backward people to construct their own houses. February 25, 2016 last date for submit application.
Please Wait while comments are loading...