ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಹಿತ್ಯ ಸಮ್ಮೇಳನದಲ್ಲಿ ನೀವೂ ಭಾಗವಹಿಸಬೇಕೇ? ಇಲ್ಲಿದೆ ಮಾಹಿತಿ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಅಕ್ಟೋಬರ್ 17 : ಮೈಸೂರಿನಲ್ಲಿ ನವೆಂಬರ್ 24 ರಿಂದ 26ರವರೆ ನಡೆಯಲಿರುವ 83ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಪುಸ್ತಕ ಮಳಿಗೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರು: ನ.24ರಿಂದ 26 ರವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಮೈಸೂರು: ನ.24ರಿಂದ 26 ರವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಮೂರು ದಿವಸಗಳಿಗೆ ಒಂದು ಪುಸ್ತಕ ಮಳಿಗೆ ಹಾಗೂ ಒಂದಕ್ಕಿಂತ ಹೆಚ್ಚು ಮಳಿಗೆ ಬೇಕಾದಲ್ಲಿ ತಲಾ 2500 ರೂಪಾಯಿ ಬಾಡಿಗೆ ನಿಗದಿಪಡಿಸಿದೆ. ವಾಣಿಜ್ಯ ಮಳಿಗೆಗಳಿಗೆ ತಲಾ 3000 ರೂಪಾಯಿ ಬಾಡಿಗೆ ನಿಗದಿಪಡಿಸಿದೆ. ನವೆಂಬರ್ 10ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ವಾಗತ ಸಮಿತಿ, ಮೈಸೂರು ಜಿಲ್ಲೆ ಇಲ್ಲಿ ನೋಂದಾಯಿಸಬಹುದು.

Application invited for Bookstores for Mysuru Kannda shitya sammelana

ಇಲ್ಲವಾದಲ್ಲಿ ಶುಲ್ಕ ನಿಗದಿ ಪಡಿಸಿದ ಮೊತ್ತಕ್ಕೆ ಆಸಕ್ತರು ಡಿಡಿ ಮೂಲಕ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಎ.ಜಿ.ದೇವರಾಜು 914837773, ತಾರಾ 814769219 ಗೆ ಸಂಪರ್ಕಿಸಬಹುದು.

83ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರ ವ್ಯಕ್ತಿಚಿತ್ರ 83ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರ ವ್ಯಕ್ತಿಚಿತ್ರ

ಪ್ರತಿನಿಧಿಗಳಿಗೂ ಮುಕ್ತ ಅವಕಾಶ:
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನುಡಿ ಜಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭಿಮಾನಿಗಳು ಪ್ರತಿನಿಧಿಯಾಗಿ ತಮ್ಮ ಹೆಸರುಗಳನ್ನು ಆಯಾಯಾ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರುಗಳ ಹತ್ತಿರ ಅಥವಾ ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನವೆಂಬರ್ 10ರೊಳಗಾಗಿ ನೋಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದೆ.

English summary
Application invited for Bookstores & Commercial Shops for 83rd Kannda shitya sammelana in Mysuru which will be taking place from November 24th to 26th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X