ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಚೆನ್ನೈ ನಡುವೆ ಮತ್ತೊಂದು ಹೊಸ ರೈಲು

|
Google Oneindia Kannada News

ಮೈಸೂರು, ಜನವರಿ 8 : ಮೈಸೂರಿಗರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ರಾತ್ರಿ ಸಂಚಾರದ ಜೊತೆಗೆ ಹಗಲಿನಲ್ಲಿ ಪ್ರಯಾಣಿಸುವವರಿಗಾಗಿ ಮತ್ತೊಂದು ರೈಲು ಸೇವೆ ಶೀಘ್ರವೇ ಆರಂಭವಾಗಲಿದೆ.

ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ರೈಲನ್ನು ಮೈಸೂರಿನವರೆಗೆ ವಿಸ್ತರಿಸಲು ಸೌತ್ ವೆಸ್ಟರ್ನ್ ರೈಲ್ವೆ ನಿರ್ಧರಿಸಿದ್ದು, ಇತ್ತೀಚೆಗೆ ಈ ಕುರಿತು ರೈಲ್ವೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ರೈಲು ಸಂಖ್ಯೆ 12609 ಚೆನ್ನೈನಿಂದ 1.35 ಗಂಟೆಗೆ ಹೊರಡಲಿದ್ದು, 8.5ಕ್ಕೆ ಬೆಂಗ ಳೂರಿಗೆ ತಲುಪಲಿದೆ. ಬಳಿಕ ಅಲ್ಲಿಂದ ರಾತ್ರಿ 11 ಗಂಟೆಗೆ ಮೈಸೂರು ತಲುಪಲಿದೆ.

ಅಂಕೋಲಾ ರೈಲಿಗೆ ಅರಣ್ಯ ಭೂಮಿ ಮಂಜೂರು: ಜ.9ಕ್ಕೆ ಅಂತಿಮ ಸಭೆಅಂಕೋಲಾ ರೈಲಿಗೆ ಅರಣ್ಯ ಭೂಮಿ ಮಂಜೂರು: ಜ.9ಕ್ಕೆ ಅಂತಿಮ ಸಭೆ

ಮೈಸೂರಿನಿಂದ ಮುಂಜಾನೆ 4.30ಕ್ಕೆ ಹೊರಟು ಚೆನ್ನೈಗೆ ಮಧ್ಯಾಹ್ನ 2.35ಕ್ಕೆ ತಲುಪಲಿದೆ. ಹಗಲು ಹೊತ್ತಿನಲ್ಲಿ ಈ ಭಾಗದಲ್ಲಿ ರೈಲು ಸೇವೆ ಆರಂಭಿಸಬೇಕು ಎಂಬುದು ಪ್ರಯಾಣಿಕರ ಹಲವು ವರ್ಷಗಳ ಬೇಡಿಕೆಯಾಗಿದ್ದು, ಈಗ ಈ ಬೇಡಿಕೆ ನೆರವೇರಿದೆ.

Another new train will run between Mysore and Chennai

ಹೆಚ್ಚಿನ ಪ್ರಯಾಣಿಕರು ಚೆನ್ನೈನಿಂದ ಬೆಂಗಳೂರಿಗೆ ರೈಲಿನ ಮೂಲಕ ಪ್ರಯಾಣಿಸುತ್ತಿದ್ದಾರೆ. ಬಳಿಕ ಅಲ್ಲಿಂದ ಮೈಸೂರಿಗೆ ಬಸ್ ನಲ್ಲಿ ಸಂಚರಿಸುತ್ತಾರೆ. ಆದರೆ, ಸಂಜೆ ವೇಳೆಯಲ್ಲಿ ಬಸ್ ನಲ್ಲಿ ಪ್ರಯಾಣಿಸೋದು ಪೀಕ್ ಅವರ್ ಟ್ರಾಫಿಕ್ ನಲ್ಲಿ ಸಿಲುಕುವುದರಿಂದ ಸಂಕಷ್ಟಪಡುವಂತಾಗುತ್ತದೆ.

ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದುಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು

ಈಗ ಚೆನ್ನೈ -ಬೆಂಗಳೂರು ಎಕ್ಸ್ ಪ್ರೆಸ್ ರೈಲು ಮೈಸೂರಿನವರೆಗೂ ವಿಸ್ತರಿಸುವುದರಿಂದ ಉಭಯ ರಾಜ್ಯಗಳ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

English summary
Another new train will run between Mysore and Chennai. South Western Railway has decided to extend the Chennai-Bangalore Express train to Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X