ಮೈಸೂರು: ಮೃಗಾಲಯದ ಪ್ರಾಣಿಗಳಿಗೆ ಹೆಲ್ತ್ ಕಾರ್ಡ್ ಚಿಂತನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada


ಮೈಸೂರು, ಡಿಸೆಂಬರ್ 10: ಮೈಸೂರು ಮೃಗಾಲಯದಲ್ಲಿ ಕಳೆದ ತಿಂಗಳಿನಲ್ಲೇ 5 ಪ್ರಾಣಿಗಳು ಸಾವಿಗೀಡಾದ ಹಿನ್ನೆಲೆ ಎಚ್ಚೆತ್ತ ಪ್ರಾಧಿಕಾರದ ಸಿಬ್ಬಂದಿ ವರ್ಗ ಝೂನಲ್ಲಿರೋ ಪ್ರಾಣಿಗಳ ಆರೋಗ್ಯದ ಮಾಹಿತಿಗಾಗಿ ಹೆಲ್ತ್ ಕಾರ್ಡ್' ಪಾಲಿಸಿಯನ್ನು ತರೋಕೆ ಸಜ್ಜಾಗಿದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾವಿನ ಪ್ರಮಾಣ ಶೇ. 8ರಷ್ಟು ಮಾತ್ರ ಇದ್ದು, ಜನನ ಪ್ರಮಾಣ ಶೇ. 40ಕ್ಕೂ ಹೆಚ್ಚಿದೆ. ಹೀಗಿದ್ದರೂ ಯಾವುದೇ ಪ್ರಾಣಿಗಳು ಮೃತಪಟ್ಟರೆ ಮೃಗಾಲಯದ ಕಡೆ ಸಂಶಯದಿಂದ ನೋಡಲಾಗುತ್ತದೆ. ಹಾಗಾಗಿ ಮೃಗಾಲಯದ ಪ್ರಾಣಿಗಳ ಆರೋಗ್ಯ ಸ್ಥಿತಿಗತಿ ಕುರಿತ ಹೆಲ್ತ್ ಕಾರ್ಡ್' ಸದ್ಯದಲ್ಲೇ ಬಿಡುಗಡೆಯ ಮಾಸ್ಟರ್ ಪ್ಲಾನ್ ನೊಂದಿಗೆ ಹಿಂದೆಂದೂ ತರದಂತಹ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅಣಿಯಾಗಿದೆ.[ಮೈಸೂರು ಮೃಗಾಲಯದಲ್ಲಿ ಮತ್ತೆರಡು ಪ್ರಾಣಿಗಳು ಸಾವು]

mysuru zoo

ಮೃಗಾಲಯದಲ್ಲಿ ಕೆಲವು ಪ್ರಾಣಿಗಳಿಗೆ ವಯಸ್ಸಾಗಿದ್ದು, ಮತ್ತೆ ಕೆಲವು ಪ್ರಾಣಿಗಳಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಎಲ್ಲ ಪ್ರಾಣಿಗಳ ಮಾಹಿತಿಯನ್ನು ಸದ್ಯದಲ್ಲಿಯೇ ಜಾಲತಾಣದಲ್ಲಿ ಪ್ರಕಟಿಸುವ ಜತೆಗೆ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಕಮಲಾ ಕರಿಕಾಳನ್ ಒನ್ ಇಂಡಿಯಾಗೆ ತಿಳಿಸಿದರು.

meeting health card

ಮೃಗಾಲಯದಲ್ಲಿ ಪ್ರಾಣಿಗಳ ಸರಣಿ ಸಾವಿನ ಕುರಿತು ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿದೆ. ಪ್ರಾಣಿಗಳು ಅನಾರೋಗ್ಯದಿಂದ ಮರಣವನ್ನಪ್ಪುತ್ತಿದೆ. ಮೃಗಾಲಯದಲ್ಲಿ ಸಹಾಯಕ ನಿರ್ದೇಶಕರು ಸೇರಿ ಇಬ್ಬರು ಪಶು ವೈದ್ಯಾಧಿಕಾರಿಗಳು ಇದ್ದಾರೆ. ಅವರು ನಿತ್ಯ ಪ್ರಾಣಿಗಳ ತಪಾಸಣೆ ಮಾಡಿ ಪ್ರಾಣಿಗಳ ಆರೋಗ್ಯದ ಕುರಿತು ಮಾಹಿತಿ ನೀಡುತ್ತಿದ್ದಾರೆ. ವೈದ್ಯರ ವರದಿಯ ಆಧಾರದ ಮೇರೆಗೆ ಪ್ರಾಣಿಗಳ ಆರೋಗ್ಯ ಸುಧಾರಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.[ಬಿಸಿಲ ಧಗೆಯಲ್ಲೂ ಮೈಸೂರು ಮೃಗಾಲಯ ಪ್ರಾಣಿಗಳು ಕೂಲ್ ಕೂಲ್]

zoo entrence

ಪ್ರಾಣಿಗಳಿಗೆ ಸಾಂಕ್ರಾಮಿಕ ರೋಗ ತಗುಲದಂತೆ ಔಷಧ ಹಾಗೂ ಇಂಜೆಕ್ಷನ್ ಗಳನ್ನು ನಿಯಮಿತವಾಗಿ ನೀಡಲಾಗುತ್ತಿದೆ. ನಮಗೆ ಒಂದು ಸಣ್ಣ ಪಕ್ಷಿಯಿಂದ ಹಿಡಿದು ಆನೆಯವರೆಗೂ ಎಲ್ಲ ಪ್ರಾಣಿಗಳು ಮುಖ್ಯ. ಎಲ್ಲ ಪ್ರಾಣಿಗಳ ಆರೋಗ್ಯ ಕಾಪಾಡಲು ಮೃಗಾಲಯ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಪ್ರಾಣಿಗಳಲ್ಲೂ ಹುಟ್ಟು-ಸಾವು ಸಹಜ ಪ್ರಕ್ರಿಯೆಯಾದರೂ ಮೃಗಾಲಯದಲ್ಲಿ ಪ್ರಾಣಿಗಳ ಸಾವಿನ ಕುರಿತು ಟೀಕೆ ಟಿಪ್ಪಣಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮೃಗಾಲಯ ಆಡಳಿತವು ಎಲ್ಲ ಪ್ರಾಣಿಗಳ ವಯಸ್ಸು ಹಾಗೂ ಆರೋಗ್ಯ ಸ್ಥಿತಿ ಕುರಿತ ಮಾಹಿತಿ ಪ್ರಕಟಿಸಲು ಮುಂದಾಗಿರುವುದು ಸಂತಸದಾಯಕವೇ ಸರಿ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Health Card will be released on the status of animals in mysore zoo
Please Wait while comments are loading...