ಮೈಸೂರು: ಮಗಳ್ನ ಚುಡಾಯ್ಸಿದ್ದಕ್ಕೆ ಅಪ್ಪನೇ ಕಪಾಳಕ್ಕೆ ಬಿಗಿದ

Posted By:
Subscribe to Oneindia Kannada

ಮೈಸೂರು, ನವೆಂಬರ್ 23: ಮೈಸೂರಿನ ರಾಮವಿಲಾಸ್ ರಸ್ತೆಯಲ್ಲಿ ಕಾಲೇಜಿಗೆ ಹೋಗಿ ಬರುವ ಹುಡುಗಿಯರನ್ನು ಚುಡಾಯಿಸಿದ ಹುಡುಗನಿಗೆ ಸಾರ್ವಜನಿಕರಿಂದ ಧರ್ಮದೇಟು ಬಿದ್ದ ಘಟನೆ ಜರುಗಿದೆ

ಕೆಲವು ತಿಂಗಳಿನಿಂದ ಕಾಲೇಜು ಹುಡುಗಿರನ್ನು ರೇಗಿಸಿ ಚುಡಾಯಿಸಿ ಧರ್ಮದೇಟು ತಿಂದ ಹುಡುಗ ಮೈಸೂರಿನ ಅನಿಲ್.

ಕಾಲೇಜಿಗೆ ಹೋಗಿ ಬರುವ ಹುಡುಗಿಯರನ್ನು ಕೆಲವು ತಿಂಗಳಿಂದ ಅನಿಲ್ ಚುಡಾಯಿಸುತ್ತಿದ್ದ, ಒಂದು ಹುಡುಗಿಗೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ನನ್ನನ್ನು ಪ್ರೀತಿಸು ಎಂದು ಪೀಡಿಸಿಯೂ ಇದ್ದ.[ಜೂಜಾಟ ದಲ್ಲಿ ತೊಡಗಿದ್ದ 77 ಮಂದಿ ಅರೆಸ್ಟ್ ]

Anil rag the college girl on public place in mysore

ಆಕೆ ಈತನ ನಿವೇದನೆಯನ್ನು ನಿರಾಕರಿಸಿ, ಬೇಸರಗೊಂಡು ಪೋಷಕರಿಗೆ ವಿಷಯ ಮುಟ್ಟಿದ್ದಾಳೆ.

ಕೆಲವು ದಿನಗಳಿಂದ ಕಾಯುತ್ತಿದ್ದ ತಂದೆಗೆ ಬುಧವಾರ ಬೆಳಗ್ಗೆ ರೆಡ್ ಹ್ಯಾಂಡಾಗಿ ಅನಿಲ್ ಕೈಗೆ ಸಿಕ್ಕಿದ್ದಾನೆ. ರೋಡಿನಲ್ಲಿಯೇ "ಐ ಹೋಗೊ ಬರೋ ಹುಡ್ಗಿರನ್ನೆಲ್ಲಾ ಚುಡಾಯಿಸುತೀಯಾ ಎಂದು ಬೆಲ್ಟಿನಲ್ಲಿ ಬಾರಿಸಿದ್ದಾರೆ. ಅಲ್ಲಿಯೇ ಇದ್ದ ಜನರು ಏನಾಗುತ್ತಿದೆ ಎಂದು ವಿಷಯ ತಿಳಿದು ಅವರು ಆತನಿಗೆ ಧರ್ಮದೇಟು ಕೊಟ್ಟಿದ್ದಾರೆ. ಅನಿಲ್ ಮಾದಕವಸ್ತು ವ್ಯಸನಿ ಎನ್ನಲಾಗಿದೆ.[ಬೆಂಗಳೂರು: ಬಿಬಿಎಂ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ]

ಸಾರ್ವಜನಿಕರು ಅನಿಲನನ್ನು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
So many time Anil rag the college girl on public place in Ramvilas road in mysuru, girl's father waiting his boy Wednesday morning he meet to beet the boy on same road, public also beat him.
Please Wait while comments are loading...