ಮೈಸೂರು ಯುವ ಸಂಭ್ರಮಕ್ಕೆ ನಿರೂಪಕರು ಬೇಕಾಗಿದ್ದಾರೆ!

Posted By: ಬಿಎಂ ಲವಕುಮಾರ್
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 10: ಮೈಸೂರು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೊಂದಾದ ಯುವ ಸಂಭ್ರಮದಲ್ಲಿ ನಿರೂಪಕ ಮತ್ತು ನಿರೂಪಕಿಯಾಗಿ ಕಾರ್ಯನಿರ್ವಹಿಸಲು ಸಂದರ್ಶನ ಕರೆಯಲಾಗಿದೆ.

ಮಾತಿನ ಚತುರತೆ ಮೂಲಕ ಕಲಾ ಪ್ರೇಮಿಗಳನ್ನು ಸೆಳೆಯಬಲ್ಲ, ಮನರಂಜನೆ ಕೊಡುವ ಪ್ರತಿಭೆ ನಿಮ್ಮಲ್ಲಿದ್ದರೆ ಯುವ ಸಂಭ್ರಮದಲ್ಲಿ ವೇದಿಕೆ ದೊರೆಯಲಿದೆ. ಈಗಾಗಲೇ ನಿರೂಪಣೆ ಮಾಡಿ ಸೈ ಎನಿಸಿಕೊಂಡವರು ನೇರವಾಗಿ ಸಂದರ್ಶನಕ್ಕೆ ತೆರಳಬಹುದಾಗಿದೆ.

Anchors needed for Youth Celebration of Mysuru Dasara

ಸಂದರ್ಶನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸೆ.10ರಂದು (ಭಾನುವಾರ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 10.30 ಕ್ಕೆ ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9108460800ನ್ನು ಸಂಪರ್ಕಿಸಬಹುದಾಗಿದೆ.

ಕಾಲೇಜು ಯುವ ಜನತೆಗಾಗಿಯೇ ರೂಪಿಸಿರುವ ಮನರಂಜನಾ ಕಾರ್ಯಕ್ರಮ ಯುವ ಸಂಭ್ರಮವಾಗಿದ್ದು, ಪ್ರತಿಷ್ಠಿತ ಯುವ ದಸರಾಕ್ಕೆ ಮೊದಲ ಹೆಜ್ಜೆಯಾಗಿ ಯುವ ಸಂಭ್ರಮವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮವು ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ.12 ರಿಂದ ಆರಂಭವಾಗಿ 18 ರವರೆಗೂ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An interview has been invited to anchor in the youth celebration, one of the cultural programs of the Mysore Dasara celebrations.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ