ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಾಯಣದ ನೂತನ ನಿರ್ದೇಶಕಿ ಭಾಗೀರಥಿ ಕದಂರೊಂದಿಗಿನ ಸಂದರ್ಶನ

By Yashaswini
|
Google Oneindia Kannada News

ಮೈಸೂರು, ಜೂನ್ 15 : ಸುಮಾರು 8 ತಿಂಗಳಿಂದ ಖಾಲಿ ಇದ್ದ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಹುಣಸೂರು ಮೂಲದ ರಂಗ ಕಲಾವಿದೆ ಭಾಗೀರಥಿ ಬಾಯಿ ಕದಂ ಅವರನ್ನು ನೇಮಕ ಮಾಡಲಾಗಿದೆ. ಅವರು ಸದ್ಯ ಅಸ್ಸಾಂ ರಾಜ್ಯದ ಗೌಹಾತಿಯಲ್ಲಿ ವಾಸಿಯಾಗಿದ್ದು, ಅಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಹುಣಸೂರು ತಾಲ್ಲೂಕು ಗಾವಡಗೆರೆ ಗಾಮದ ಭಾಗೀರಥಿ ಅವರು ಪಿಯುಸಿ ನಂತರ ಹೆಗ್ಗೋಡಿನ ನೀಲಕಂಠೇಶ್ವರ ನಾಟಕ ಸಂಘ(ನೀನಾಸಂ) ರಂಗ ಶಾಲೆಗೆ ಸೇರಿದರು. ನೀನಾಸಂ ತಿರುಗಾಟ ಅತ್ಯಂತ ಜನಪ್ರಿಯಗೊಳ್ಳುವಲ್ಲಿ ಭಾಗೀರಥಿ ಅವರ ಶ್ರಮವೂ ದೊಡ್ಡದು. ರಾಷ್ಟ್ರೀಯ ರಂಗಶಾಲೆಯಲ್ಲಿ 3 ವರ್ಷ ತರಬೇತಿ ಪಡೆದ ಭಾಗೀರಥಿ, ರೆಪರ್ಟರಿ ಆಗಿ ಮುಂದುವರಿದರು. ಸಂಘ ಸ್ಥಾಪಿಸಿ, ಅಲ್ಲಿನ ತಾರಾ ಆಟ್ರ್ಸ್ ಸಂಸ್ಥೆ ಜೊತೆ 8 ತಿಂಗಳು ರಂಗಭೂಮಿ ಕೆಲಸ ಮಾಡಿದರು.

ರಂಗಾಯಣದ ನೂತನ ನಿರ್ದೇಶಕಿ ಭಾಗೀರಥಿ ಬಾಯಿ ಕದಂರಂಗಾಯಣದ ನೂತನ ನಿರ್ದೇಶಕಿ ಭಾಗೀರಥಿ ಬಾಯಿ ಕದಂ

An interview with Mysuru Rangayana's new director

ಅಸ್ಸಾಂನ ಖ್ಯಾತ ರಂಗ ಕಲಾವಿದ, ನಟ ಬಹುರೂಲ್ ಇಸ್ಲಾಂ ಅವರನ್ನು ವಿವಾಹವಾದ ಭಾಗೀರಥಿ ಅವರು ನಂತರ ಗೌಹಾತಿಯಲ್ಲಿ ನೆಲೆಸಿದರು. ದಂಪತಿ 1990ರಲ್ಲಿ ಸೀಗಲ್ ಥಿಯೇಟರ್ ಅಕಾಡೆಮಿ ಸ್ಥಾಪಿಸಿ, 30ಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಕಾಡೆಮಿ ವತಿಯಿಂದ ದೇಶದ ನಾನಾ ಭಾಗಗಳಲ್ಲಿ ನಾಟಕ ಪ್ರದರ್ಶನ ನಡೆಸಿದರು. ಅಲ್ಲದೆ, ಕರ್ನಾಟಕದಲ್ಲಿ ಕೂಡ ಬಹಳಷ್ಟು ರಂಗ ಕಲಾವಿದರನ್ನು ಸೃಜಿಸಿ, ದೇಸಿ ಕಲೆಯ ವಿಧಾನಗಳ ಬಗ್ಗೆ ಪರಿಚಯ ಮಾಡಿದರು.

ರಂಗಾಯಣದಿಂದ ರಂಗಶಂಕರದಲ್ಲಿ ಮೂರು ನಾಟಕಗಳುರಂಗಾಯಣದಿಂದ ರಂಗಶಂಕರದಲ್ಲಿ ಮೂರು ನಾಟಕಗಳು

ಅಸ್ಸಾಂನಲ್ಲಿ ಬಾಲಿವುಡ್ ಚಿತ್ರಗಳಿಗಿಂತ ಹೆಚ್ಚು ಜನಪ್ರಿಯತೆಯನ್ನು ರಂಗಭೂಮಿಗೆ ತಂದುಕೊಟ್ಟ ಹೆಗ್ಗಳಿಕೆ ಬಹುರೂಲ್-ಭಾಗೀರಥಿ ದಂಪತಿಯದ್ದಾಗಿದೆ. ಅಸ್ಸಾಂ ಉಲ್ಫಾ ಉಗ್ರಗಾಮಿಗಳಲ್ಲಿ ಕೆಲವರು ಇವರಿಂದ ಪ್ರಭಾವಿತರಾಗಿ ಸಮಾಜದ ಮುಖ್ಯವಾಹಿನಿಗೆ ಮರಳಿದ್ದರು. ತಹವರೊಬ್ಬರು ರಂಗಾಯಣಕ್ಕೆ ಆಯ್ಕೆಯಾಗಿರುವುದು ನಮ್ಮ ಹೆಮ್ಮೆಯೇ ಸರಿ. ಅವರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಸಂದರ್ಶನ ಇಲ್ಲಿದೆ.

ರಂಗಾಯಣಕ್ಕೆ ತಾವು ಆಯ್ಕೆಯಾದಾಗ ಆದ ಮೊದಲ ಅನುಭವ ಹೇಗಿತ್ತು?
ರಂಗಾಯಣದ ಬಗ್ಗೆ ನನಗೆ ಮೊದಲಿನಿಂದಲೂ ಅರಿವಿತ್ತು. ಮೊದಲು ನನಗೆ ಸ್ವಲ್ಪ ಗಲಿಬಿಲಿಯಾಯ್ತು. ಏಕೆಂದರೆ ನನಗಿಂತಲೂ ಹಿರಿಯರು ಈ ಆಯ್ಕೆ ಪಟ್ಟಿಯಲ್ಲಿದ್ದರು. ಆದರೆ ಬಹು ದಿನಗಳ ಕೆಳಗೆ ನನ್ನ ಹೆಸರು ಪ್ರಸ್ತಾಪವಾಗಿದ್ದು ನನಗೆ ಅರಿವಿತ್ತು. ನಿರ್ದೇಶಕಿಯಾಗಬೇಕೆಂಬ ಹಂಬಲವಿರಲಿಲ್ಲ. ಇದು ಲಕ್ ಬೈ ಛಾನ್ಸ್ ಎಂಬಂತಾಯಿತು. ಅವಕಾಶ ಸಿಕ್ಕಿದೆ ನನ್ನನ್ನು ನಂಬಿ ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ಸರಕಾರಕ್ಕೆ ಅಭಿನಂದನೆಗಳು.

ಮೈಸೂರು ರಂಗಾಯಣದಲ್ಲಿ ಶ್ರೀನಿವಾಸ ಕಲ್ಯಾಣ ಚಿತ್ರತಂಡ ಕಲರವಮೈಸೂರು ರಂಗಾಯಣದಲ್ಲಿ ಶ್ರೀನಿವಾಸ ಕಲ್ಯಾಣ ಚಿತ್ರತಂಡ ಕಲರವ

An interview with Mysuru Rangayana's new director

ರಂಗಾಯಣದ ಅಭಿವೃದ್ಧಿಗೆ ನಿಮ್ಮ ಮುಂದಿನ ಯೋಜನೆಗಳೇನು..?
ರಂಗಾಯಣ ಎಂದರೆ ಅದಕ್ಕೊಂದು ತನ್ನದೇ ಆದ ವೈಶಿಷ್ಟ್ಯವಿದೆ. ಹೆಸರಿದೆ. ನಾನು ಕಾರಂತರ ನೆನಪಿನಲ್ಲಿಯೇ ಅವರ ಆಶಯದಲ್ಲೇ ಬೆಳೆದವಳು. ಅವರು ನಮಗೆ ತೋರಿಸಿಕೊಟ್ಟ, ರಂಗಾಯಣ ಹೀಗಿರಬೇಕೆಂದು ಕನಸು ಹೇಳಿಕೊಟ್ಟ ಮಾತುಗಳನ್ನು ಕಾರ್ಯರೂಪಕ್ಕೆ ತರಲು ಸತತ ಪ್ರಯತ್ನ ಪಡುತ್ತೇನೆ. ನಾಟಕ ಕೇವಲ ಜಿಲ್ಲೆಗಳಿಗೆ ಸೀಮಿತವಾಗುತ್ತಿದೆ. ಅದನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಗ್ರಾಮೀಣ ಜನತೆಗೆ ನಾಟಕಗಳ ಕುರಿತು ಅರಿವು ಮೂಡಿಸುವತ್ತ ಪ್ರಯತ್ನ ಪಡುತ್ತೇನೆ. ರಂಗ ಭೂಮಿಯಲ್ಲಿ ಸಂಘಟನೆ ಮಾಡುವ ಅವಶ್ಯಕತೆಯತ್ತ ಗಮನ ಹರಿಸುತ್ತೇನೆ.

ನೀವು ಅಸ್ಸಾಂನಲ್ಲಿ ಕಾರ್ಯನಿರ್ವಾಹಿಸಿದವರು. ಅಲ್ಲಿನ ರಂಗಚಟುವಟಿಕೆಗಳನ್ನೇನಾದರೂ ಇಲ್ಲಿಗೆ ಅಳವಡಿಸುತ್ತೀರಾ ಹೇಗೆ..?
ನನ್ನ ಪತಿಯಿದದ್ದು ಹಾಗೂ ಅವರು ಕಟ್ಟಿದ್ದ ಸೀಗಲ್ ಸಂಸ್ಥೆಯಲ್ಲಿ ರಂಗ ಚಟುವಟಿಕೆಗಳ ಕೆಲಸ ಮಾಡಿದ್ದೇನೆ. ಕನ್ನಡ ಭಾಷೆಯಲ್ಲಿ ನಾಟಕ ಕಲಿತಿದ್ದನ್ನು ಅವರಿಗೆ ಹೇಳಿಕೊಟ್ಟಿದ್ದೇನೆ. ಅಲ್ಲಿನ ರಂಗಚಟುವಟಿಕೆಗಳೇ ವಿಭಿನ್ನವಾದದ್ದು. ಅದರಲ್ಲಿನ ಕೆಲವು ನನಗಿಷ್ಟವಾದ ಅಂಶಗಳನ್ನು ಇಲ್ಲಿ ತರಲು ಪ್ರಯತ್ನಿಸುತ್ತೇನೆ.

ಮೈಸೂರು ರಂಗಾಯಣ ಬೆಳ್ಳಿ ಹಬ್ಬಕ್ಕೆ ಅದ್ದೂರಿ ಚಾಲನೆ
ತವರು ಜಿಲ್ಲೆಯ ರಂಗಾಯಣಕ್ಕೆ ಬಂದಿರುವುದು ಖುಷಿ ತಂದಿದೆಯೇ..?
ನನ್ನ ಹುಟ್ಟೂರು ಹುಣಸೂರಿನ ಗಾವಡಗೆರೆ. ಈ ಹಿನ್ನೆಲೆ ನನಗೆ ಅತೀವ ಖುಷಿ ತಂದಿದೆ. ದೊಡ್ಡವರು ಕಾರ್ಯ ನಿರ್ವಹಿಸಿದ ಜಾಗವಿದು.. ನನಗೆ ಅವಕಾಶ ಸಿಕ್ಕಿರುವುದು ಸಂತೋಷವೇ ಸರಿ.

English summary
Newly appointed director of Mysuru Rangayana, artist Bhageerathi Bhayi Kadam has shared her aim ti improve Rangayana and also this theatre field with Oneindia today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X