ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ನೂತನ ಮೇಯರ್ ಪುಷ್ಪಾ ಜಗನ್ನಾಥ್ ಸಂದರ್ಶನ

|
Google Oneindia Kannada News

ಮೈಸೂರು, ನವೆಂಬರ್. 21: ಕಳೆದ ವಾರವಷ್ಟೇ ಬಹು ನಿರೀಕ್ಷಿತ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪುಷ್ಪಾ ಜಗನ್ನಾಥ್ ಅಧಿಕಾರದ ಗದ್ದುಗೆ ಏರಿದ್ದಾರೆ. ಅಧಿಕಾರದಲ್ಲಿದ್ದು, ಉತ್ತಮ ಆಡಳಿತ ನೀಡುವ ಭರವಸೆ ಹೊಂದಿರುವ ಅವರು ಜನಪರ ಕೆಲಸಗಳತ್ತ ಗಮನಹರಿಸುವ ಒಲವು ತೋರಿದ್ದಾರೆ.

"ಮೊದಲಿನಿಂದಲು ಮೇಯರ್ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಇದು ಸಂತಸದ ವಿಷಯ. ಈ ಸ್ಥಾನ ದಕ್ಕಿರುವುದು ಬಹಳ ಖುಷಿ ತರಿಸಿದೆ. ನನಗೆ ವಹಿಸಿರುವ ಕಾಯಕವನ್ನು ಸರಿಯಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸವಿದೆ.

ಮೈಸೂರಿನ ನೂತನ ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಆಯ್ಕೆಮೈಸೂರಿನ ನೂತನ ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಆಯ್ಕೆ

ಈಗಾಗಲೇ ಉಪಮೇಯರ್ ಆಗಿ ಕೆಲಸ ಮಾಡಿದ್ದೇನೆ. ಹಿರಿಯ ಸದಸ್ಯರಿಂದ ಮಾರ್ಗದರ್ಶನ ಪಡೆಯುತ್ತೇನೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎನ್ನದೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರ ಅಭಿಪ್ರಾಯ ಸ್ವೀಕರಿಸಿ, ಸಮನ್ವಯತೆಯಿಂದ ಉತ್ತಮ ಆಡಳಿತ ನೀಡಲು ಬಯಸುತ್ತೇನೆ.

ಈ ಹಿಂದೆ ಅಂದರೆ 2011ರಲ್ಲಿ ಉಪಮೇಯರ್ ಆಗಿದ್ದಾಗ ಪಾಲಿಕೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತವಿತ್ತು. ಆ ಸಮಯದಲ್ಲಿ ಯಾವುದೇ ಸಮಸ್ಯೆಗಳು ಎದುರಾಗಿರಲಿಲ್ಲ. ಈಗಲೂ ಅಡ್ಡಿ ಆತಂಕಗಳು ಎದುರಾಗುವುದಿಲ್ಲ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪುಷ್ಪಾ ಜಗನ್ನಾಥ್.

 ಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯ ಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯ

ಅಷ್ಟೇ ಅಲ್ಲ, ಮೈಸೂರಿನ ಅಭಿವೃದ್ಧಿ, ಮೇಯರ್ ಸ್ಥಾನ ಸಿಗಲು ಕಾರಣ, ಮುಂತಾದವುಗಳ ಬಗ್ಗೆ ಪುಷ್ಪಾ ಜಗನ್ನಾಥ್ ತಮ್ಮ ಅಭಿಪ್ರಾಯವನ್ನು ಒನ್ ಇಂಡಿಯಾ ಜೊತೆ ಹಂಚಿಕೊಂಡಿದ್ದು ಹೀಗೆ...

 ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ

ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ

ಪ್ರ. ನಿಮಗೆ ಮೇಯರ್ ಸ್ಥಾನ ಸಿಗುವಲ್ಲಿ ಹೆಚ್ಚು ಶ್ರಮ ವಹಿಸಿದವರು ಯಾರು ಎಂದು ನಿಮಗನಿಸುತ್ತದೆ?

ಉ: ಪಕ್ಷದ ನಾಯಕರು, ಸ್ಥಳೀಯ ಮುಖಂಡರು, ಸಹ ಸದಸ್ಯರ ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ವಿಶೇಷವಾಗಿ ವರಿಷ್ಠರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಶಾಸಕ ತನ್ವೀರ್ ಸೇಠ್ ಅವರು ಮಾಜಿ ಶಾಸಕರಾದ ವಾಸು, ಎಂ. ಕೆ ಸೋಮಶೇಖರ್ ಅವರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಎಲ್ಲರ ನಿರೀಕ್ಷೆಯಂತೆ ಮೈಸೂರಿನ ಅಭಿವೃದ್ಧಿಗಾಗಿ ಸಮನ್ವಯತೆಯಿಂದ ಶ್ರಮಿಸುತ್ತೇನೆ.

 ವರಿಷ್ಠರ ತೀರ್ಮಾನದಂತೆ ಆಯ್ಕೆ

ವರಿಷ್ಠರ ತೀರ್ಮಾನದಂತೆ ಆಯ್ಕೆ

ಪ್ರ. ಶಾಂತಕುಮಾರಿ ಸಹ ಮೇಯರ್ ಆಕಾಂಕ್ಷಿಯಾಗಿದ್ದರು. ಆ ಪರಿಸ್ಥಿತಿಯಲ್ಲಿ ನಿಮಗೆ ಅವಕಾಶ ಸಿಗುವ ವಿಶ್ವಾಸವಿತ್ತೇ?

ಉ: ನಮ್ಮ ಪಕ್ಷದಲ್ಲಿ ನನ್ನೊಂದಿಗೆ ಶಾಂತಕುಮಾರಿ, ಶೋಭಾ ಸುನೀಲ್ ಹಾಗೂ ಹಾಜಿಮಾ ಆಕಾಂಕ್ಷಿಗಳಾಗಿದ್ದರು. ನನಗೆ ಅವಕಾಶ ಸಿಗಬಹುದೆಂಬ ವಿಶ್ವಾಸವಿತ್ತು. ನಾಲ್ವರು ಆಕಾಂಕ್ಷಿಗಳಲ್ಲಿ ವರಿಷ್ಠರ ತೀರ್ಮಾನದಂತೆ ನನ್ನನ್ನು ಆಯ್ಕೆ ಮಾಡಲಾಗಿದೆ.

ಮೈಸೂರು ಮೇಯರ್ ಚುನಾವಣೆ: ಮತ್ತೆ ಸಿದ್ದರಾಮಯ್ಯ ಮೇಲುಗೈ..!ಮೈಸೂರು ಮೇಯರ್ ಚುನಾವಣೆ: ಮತ್ತೆ ಸಿದ್ದರಾಮಯ್ಯ ಮೇಲುಗೈ..!

 ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ

ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ

ಪ್ರ:ಮೈಸೂರು ನಗರದ ಅಭಿವೃದ್ಧಿಗಾಗಿ ನಿಮಗಿರುವ ಕನಸುಗಳೇನು?

ಉ:ಕಸದ ಸಮಸ್ಯೆ ದಶಕದಿಂದಲೂ ಇದೆ. ಎಲ್ಲೆಂದರಲ್ಲಿ ಕಸ ಬಿಸಾಡುವ ಪರಿಪಾಠ ಮುಂದುವರೆದಿದೆ. ಹೊಸ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ನಗರದ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ. ಜೊತೆಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಪ್ರಯತ್ನಿಸುತ್ತೇನೆ.

ಹಿಂದಿನ ಕಾಂಗ್ರೆಸ್ ಸರ್ಕಾರ ಮೈಸೂರಿಗೆ ಸಾಕಷ್ಟು ಅನುದಾನ ನೀಡಿದೆ. ಪ್ರಸ್ತುತ ಮೈತ್ರಿ ಸರ್ಕಾರವೂ ಮೈಸೂರಿನ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ಹಾಗಾಗಿ ಅನುದಾನವಿದ್ದೂ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಸಿವುದರ ಜೊತೆಗೆ ಅಭಿವೃದ್ಧಿ ಪೂರಕ ಕೆಲಸ ಮುಂದುವರೆಸುತ್ತೇನೆ. ಮಹಿಳೆಯರಿಗಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕಿದೆ.

 ತುರ್ತು ಕಾರ್ಯಗಳು ವಿಳಂಬವಾಗದಂತೆ ನೋಡಿಕೊಳ್ಳುವೆ

ತುರ್ತು ಕಾರ್ಯಗಳು ವಿಳಂಬವಾಗದಂತೆ ನೋಡಿಕೊಳ್ಳುವೆ

ಪ್ರ: ಪೌರ ಕಾರ್ಮಿಕರು, ನೀರಿನ ಸಮಸ್ಯೆ ಬಗ್ಗೆ ಏನು ಹೇಳುತ್ತೀರಾ?

ಉ:ಇನ್ನು ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ನಮಗೆ ತಿಳಿದಿದೆ. ಈ ಬಗ್ಗೆ ಹಿರಿಯ ಸದಸ್ಯರ ಅಭಿಪ್ರಾಯ ಪಡೆದು ಪಾಲಿಕೆ ವ್ಯಾಪ್ತಿಯಲ್ಲಿ ಆಗಬಹುದಾದ ಪರಿಹಾರ ಕ್ರಮಕ್ಕೆ ಮುಂದಾಗುತ್ತೇನೆ.
ನಗರದಲ್ಲಿ ಕುಡಿಯುವ ನೀರಿನ ಕೊರತೆ ಉದ್ಭವವಾಗದಂತೆ ಎಚ್ಚರಿಕೆ ವಹಿಸಲಾಗುವುದು.

ನಿಗದಿತವಾಗಿ ಎಲ್ಲ ಬಡಾವಣೆಗಳಿಗೂ ನೀರು ಸರಬರಾಜು ಮಾಡುವ ಬಗ್ಗೆ ಗಮನಹರಿಸುತ್ತೇನೆ. ನಿರ್ವಹಣೆ ಹಾಗೂ ತುರ್ತು ಕಾರ್ಯಗಳು ವಿಳಂಬವಾಗದಂತೆ ನೋಡಿಕೊಳ್ಳಲಾಗುವುದು.

English summary
An exclusive interview with newly elected and Mayor of Mysore Pushpa Jagannath. During interview with Mayor, she is very confident to handle the Garbage, Water problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X