ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ: ಅಮಿತ್ ಶಾ

By Manjunatha
|
Google Oneindia Kannada News

ಮೈಸೂರು, ಮಾರ್ಚ್‌ 31: ಈಗಾಗಲೇ ಪರೋಕ್ಷವಾಗಿ ಬೆಳಗಾವಿ ರಾಜಕೀಯದಲ್ಲಿ ಸಕ್ರಿಯರಾಗಿರುವ ಅಕ್ರಮ ಗಣಿಗಾರಿಕೆ ಆರೋಪಿ ಜನಾರ್ಧನ ರೆಡ್ಡಿ ಅವರು ಬಿಜೆಪಿಗೆ ಮರಳುತ್ತಾರೆಯೇ ಎಂಬ ಪ್ರಶ್ನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಪಷ್ಟ ಉತ್ತರ ನಿಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಎದುರಾದ ಜನಾರ್ಧನ ರೆಡ್ಡಿ ಅವರ ಬಿಜೆಪಿ ಮರಳುವಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ ಅವರು ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ, ರೆಡ್ಡಿ, ಪಕ್ಷ ಸೇರ್ಪಡೆ ಬಗ್ಗೆ ನಾನು ಗೊಂದಲದ ಹೇಳಿಕೆ ನೀಡಿ ಇರಿಸು-ಮುರಿಸು ಉಂಟು ಮಾಡುವುದಿಲ್ಲ ಎನ್ನುವ ಮೂಲಕ ಜನಾರ್ಧನ ರೆಡ್ಡಿ ಮರಳಿ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬುದನ್ನು ಸಾರಾಸಗಟು ತಳ್ಳಿ ಹಾಕಿದರು.

Amit Shah says no to Janardhan reddy BJP comeback

ಖುದ್ದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೇ ಈ ಹೇಳಿಕೆ ನೀಡಿರುವುದರಿಂದ ಪುನಃ ಮಾತೃ ಪಕ್ಷಕ್ಕೆ ಸೇರ ಬಯಸಿದ್ದ ಜನಾರ್ಧನ ರೆಡ್ಡಿ ಆಸೆಗೆ ತಣ್ಣೀರು ಎರಚಿದಂತಾಗಿದೆ. ಜೊತೆಗೆ ಅವರ ಕಟ್ಟಾ ಬೆಂಬಲಿಗ ಜನಾರ್ಧನ ರೆಡ್ಡಿ ಅವರನ್ನು ಬಿಜೆಪಿಗೆ ಮರಳಿ ಸೇರಿಸಲು ಶತ ಪ್ರಯತ್ನ ಮಾಡುತ್ತಿರುವ ಶ್ರೀರಾಮುಲು ಅವರಿಗೂ ಹಿನ್ನಡೆ ಆಗಿದೆ.

English summary
BJP president Amit Shah clearly says BJP cuts its relation with illegal mining accused Janardhan Reddy. He said I don't make any comments on that but BJP does not have any relationship with Janardhan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X