ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ನಡುವೆ ವಿಮಾನ ಹಾರಾಟ ಆರಂಭ

|
Google Oneindia Kannada News

ಮೈಸೂರು, ಸೆಪ್ಟೆಂಬರ್, 03 : ಅಲೆಯನ್ಸ್ ಏರ್ ಬೆಂಗಳೂರು-ಮೈಸೂರು ನಡುವೆ ವಿಮಾನ ಯಾನ ಸೇವೆಯನ್ನು ಗುರುವಾರ ಆರಂಭಿಸಿದೆ. ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಬೆಂಗಳೂರು-ಮೈಸೂರು ನಡುವೆ ವಿಮಾನ ಹಾರಾಟ ನಡೆಸಲಿದೆ.

ಗುರುವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ 6.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಮೈಸೂರಿನಿಂದ 7 ಗಂಟೆಗೆ ಹೊರಟ ವಿಮಾನ ಬೆಂಗಳೂರಿಗೆ 7.40ಕ್ಕೆ ತಲುಪಿತು. [ಟಿಕೆಟ್ ಬುಕ್ ಮಾಡಲು ವಿಳಾಸ]

Mysuru news

ಮೈಸೂರಿಗೆ ಬಂದಳಿದ 72 ಸೀಟಿನ ಮೊದಲ ವಿಮಾನದಲ್ಲಿ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಸೇರಿದಂತೆ 15 ಪ್ರಯಾಣಿಕರು ಆಗಮಿಸಿದರು.

2014ರ ಸೆಪ್ಟೆಂಬರ್ 5ರಂದು ಸ್ಪೈಸ್ ಜೆಟ್ ಮೈಸೂರಿಗೆ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು. ಸುಮಾರು ಒಂದು ವರ್ಷದ ಬಳಿಕ ಏರ್‌ ಇಂಡಿಯಾದ ಏರ್ ಅಲೆಯನ್ಸ್ ವಿಮಾನ ಪುನಃ ಮೈಸೂರು-ಬೆಂಗಳೂರನ್ನು ಬೆಸೆದಿದೆ.

rv deshapande

ವೇಳಾಪಟ್ಟಿ : ಬೆಂಗಳೂರು-ಮೈಸೂರು ನಡುವಿನ ವಿಮಾನವು ಬೆಳಗ್ಗೆ 6ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದು, 6.40ಕ್ಕೆ ಮೈಸೂರಿಗೆ ತಲುಪಲಿದೆ. ಮೈಸೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿರುವ ವಿಮಾನ 7.40ಕ್ಕೆ ಬೆಂಗಳೂರಿಗೆ ತಲುಪಲಿದೆ. ಭಾನುವಾರ ಹೊರತುಪಡಿಸಿ ವಾರದ ಆರು ದಿನ ಈ ವಿಮಾನ ಹಾರಾಟ ನಡೆಸಲಿದೆ.

English summary
Alliance Air begins flight service to Mysuru from Bengaluru on September 3, 2015. The The flight will operate in 6 days except Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X