ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ವಿಮಾನದ ವೇಳಾಪಟ್ಟಿ ಬದಲು

|
Google Oneindia Kannada News

ಮೈಸೂರು, ಅಕ್ಟೋಬರ್ 27 : ಬೆಂಗಳೂರು-ಮೈಸೂರು ನಡುವೆ ವಿಮಾನ ಯಾನ ಸೇವೆ ಆರಂಭಿಸಿರುವ ಅಲೆಯನ್ಸ್ ಏರ್ ನೂತನ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2015ರ ಸೆಪ್ಟೆಂಬರ್ 3ರಿಂದ ಅಲೆಯನ್ಸ್ ಏರ್ ಎರಡೂ ನಗರಗಳ ನಡುವೆ ವಿಮಾನ ಹಾರಾಟ ನಡೆಸುತ್ತಿದೆ.

ಸದ್ಯ, ವಿಮಾನವು ಬೆಳಗ್ಗೆ 6ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದು, 6.40ಕ್ಕೆ ಮೈಸೂರಿಗೆ ತಲುಪಲಿದೆ. ಮೈಸೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿರುವ ವಿಮಾನ 7.40ಕ್ಕೆ ಬೆಂಗಳೂರಿಗೆ ತಲುಪಲಿದೆ. ಭಾನುವಾರ ಹೊರತುಪಡಿಸಿ ವಾರದ ಆರು ದಿನ ಈ ಸೇವೆ ಲಭ್ಯವಿದೆ. [ಬೆಂಗಳೂರು-ಮೈಸೂರು ನಡುವೆ ವಿಮಾನ ಹಾರಾಟ ಆರಂಭ]

mysuru

ನೂತನ ವೇಳಾಪಟ್ಟಿ : ನೂತನ ವೇಳಾಪಟ್ಟಿಯ ಅನ್ವಯ ಭಾನುವಾರ ಹೊರತುಪಡಿಸಿ ಉಳಿದ ದಿನ ವಿಮಾನ ಸೇವೆ ಲಭ್ಯವಿರಲಿದೆ. ಎಐ9513 ವಿಮಾನವು ಬೆಂಗಳೂರಿನಿಂದ ಮಧ್ಯಾಹ್ನ 3.35ಕ್ಕೆ ಹೊರಡಲಿದ್ದು 4.15ಕ್ಕೆ ಮೈಸೂರನ್ನು ತಲುಪಲಿದೆ. [ಟಿಕೆಟ್ ಬುಕ್ ಮಾಡಲು ವಿಳಾಸ]

ಎಐ9514 ವಿಮಾನವು ಮೈಸೂರಿನಿಂದ 4.35ಕ್ಕೆ ಹೊರಡಲಿದ್ದು, 5.15ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣವನ್ನು ತಲುಪಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅಲೆಯನ್ಸ್ ಏರ್ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ.

ಅಂದಹಾಗೆ 2014ರ ಸೆಪ್ಟೆಂಬರ್ 5ರಂದು ಸ್ಪೈಸ್ ಜೆಟ್ ಮೈಸೂರಿಗೆ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು. ಸುಮಾರು ಒಂದು ವರ್ಷದ ಬಳಿಕ ಏರ್‌ ಇಂಡಿಯಾದ ಏರ್ ಅಲೆಯನ್ಸ್ ವಿಮಾನ 2015ರ ಸೆಪ್ಟೆಂಬರ್‌ನಿಂದ ಹಾರಾಟ ಆರಂಭಿಸಿ ಪುನಃ ಮೈಸೂರು-ಬೆಂಗಳೂರನ್ನು ಬೆಸೆದಿದೆ.

English summary
Alliance Air on Monday announced new timings for its flights between Bengaluru and Mysuru. Alliance Air started its operations to the Bengaluru-Mysuru route on September 3, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X