ಮೈಸೂರಿನ ಕಕಾಸುರ ಮಾದಪ್ಪ ಮೈಸೂರು ಪಾಕ್ ಜನಕ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ನವೆಂಬರ್ 17 : ಜೀವಜಲ ಕಾವೇರಿಯನ್ನು ಪಕ್ಕದ ತಮಿಳುನಾಡಿಗೆ ಬಿಟ್ಟುಕೊಡಲು ತಯಾರಿರದ ನಾವು, ಇನ್ನು ಮೈಸೂರಿನ ಪಾಕ್ ನ ಹಕ್ಕನ್ನು ಬಿಟ್ಟುಕೊಡುವುದುಂಟೆ. ಅರೇ ಇದೇನಿದು ಮೈಸೂರು ಪಾಕ್ ನ್ನು ತಮಿಳುನಾಡಿಗೆ ಬಿಟ್ಟುಕೊಡುವುದೇ ಎಂದು ಆಶ್ಚರ್ಯಪಡಬೇಡಿ. ಹೀಗೊಂದು ವಾಕ್ಸಮರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ರುಚಿ ರುಚಿ ಮೈಸೂರು ಪಾಕ ಹುಟ್ಟಿದ್ದು ಹೀಗೆ...

ಇತ್ತೀಚೆಗಷ್ಟೇ ರಸಗುಲ್ಲ ಭೌಗೋಳಿಕ ಸೂಚ್ಯಂಕದ ಹಕ್ಕಿಗಾಗಿ (Geographical Indication-GI) ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿತ್ತು. ಈಗ ಸರದಿ ರಸಗುಲ್ಲದ ಬಳಿಕ ಈಗ ಮೈಸೂರ್ ಪಾಕ್ ಗೆ ಬಂದು ತಲುಪಿದೆ. ಈ ಸಿಹಿ ತಿನಿಸಿನ ಹಕ್ಕಿಗಾಗಿ ತಮಿಳರು ಹಾಗೂ ಕನ್ನಡಿಗರ ನಡುವೆ ಹೋರಾಟವಾಗಬೇಕೆಂಬ ಚರ್ಚೆ ಆರಂಭವಾಗಿದ್ದು, ಜನರು ವಾದ-ಪ್ರತಿವಾದಗಳಲ್ಲಿ ತೊಡಗಿದ್ದಾರೆ.

After Rosogolla, online war over Mysuru PAK’s Geographical Indication

ಈ ವಾಗ್ವಾದ ಏಕೆ?
ಮೈಸೂರು ಪಾಕ್ ಮೈಸೂರು ಮಹಾರಾಜರ ಅರಮನೆಯ ಪಾಕ ಶಾಲೆಯಲ್ಲಿ ತಯಾರಿಸಲಾಗಿದ್ದ ಪಾಕ ವಿಶೇಷ ಎಂದು ಕನ್ನಡಿಗರ ವಾದವಾದರೆ, ಬ್ರಿಟಿಷ್ ಆಡಳಿತ ಅಧಿಕಾರಿಯಾಗಿದ್ದ ಲಾರ್ಡ್ ಮೆಕಾಲೆ ಟಿಪ್ಪಣಿ ಆಧಾರಿಸಿ ಮೈಸೂರು ಪಾಕ್ ಮದ್ರಾಸ್ ಸಂಸ್ಥಾನದ ಹಕ್ಕು ಎಂಬುದು ತಮಿಳಿಗರ ವಾದ. ಮೈಸೂರು ಪಾಕ್ 74 ವರ್ಷಗಳ ಹಿಂದೆ ಆವಿಷ್ಕಾರಗೊಂಡಿದ್ದು, ಅಂದು ಮದ್ರಾಸ್ ಸರ್ಕಾರವಿದ್ದ ಕಾರಣ ಮೈಸೂರ್ ಪಾಕ್ ತಯಾರಿಸಿದ ಹೆಮ್ಮೆ ನಮ್ಮದು ಎನ್ನುತ್ತಿದ್ದಾರೆ ತಮಿಳಿಗರು. ಪ್ರಸ್ತುತ ಈ ವಿಚಾರದಲ್ಲಿ ಮೈಸೂರ್ ಪಾಕ್ ಭೌಗೋಳಿಕ ಸೂಚ್ಯಂಕದ ಹಕ್ಕಿಗಾಗಿ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.

ಒಡಿಶಾ ಸೋಲಿಸಿ ರಸಗುಲ್ಲಾ ಸವಿದ ಪಶ್ಚಿಮ ಬಂಗಾಳ

ಇಬ್ಬರ ವಾದವೇನು .. ?
ಮೈಸೂರು ಪಾಕ್ ಮೊದಲು ತಯಾರಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರಾದ ಕಕಸುರ ಮಾದಪ್ಪ ಎಂಬವರು ಈ ಸಿಹಿಯನ್ನು ತಯಾರಿಸಿದ್ದರು. ಮೊದಲು ಅವರು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮೂವರನ್ನು ಮಿಶ್ರಣ ಮಾಡಿಕೊಂಡರು. ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಮೂಡಿ ಬಂದಿತ್ತು. ಕೊನೆಗೆ ಅದರ ಹೆಸರು ಕೇಳಿದಾಗ ಇದು 'ಮೈಸೂರು ಪಾಕ್' ಎಂದು ಹೇಳಿದರು. ಪಾಕ್ ಅಥವಾ ಪಾಕ, ಸಂಸ್ಕೃತ ಮತ್ತು ಇತರೆ ಭಾರತೀಯ ದೇಶೀಯ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ. ಇದು ಸಂಪ್ರದಾಯಿಕವಾಗಿ ಮದುವೆ ಮತ್ತು ದಕ್ಷಿಣ ಭಾರತದ ಇತರೆ ಹಬ್ಬಗಳಲ್ಲಿ ವಿಶೇಷವಾಗಿ ಮಾಡುತ್ತಾರೆ ಎಂಬುದು ಕನ್ನಡಿಗರ ವಾದ.

'ಹಿಂದಿ' ಖಿಚಡಿಗೆ ಉಪ್ಪಿಟ್ಟು, ಚಿತ್ರಾನ್ನ ಭಾರೀ ಪೈಪೋಟಿ!

ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ 1853ರಲ್ಲಿ, ಆಹಾರ ಪ್ರಿಯರನ್ನು ಬೇಗನೇ ಸೆಳೆಯುವಂತಹ ಮೈಸೂರು ಪಾಕ್ ಅನ್ನು ಮೊದಲು ಮದ್ರಾಸ್ ತಮಿಳಿಗರು ತಯಾರಿಸುತ್ತಿದ್ದರು. ಆದರೆ ಯಾರೂ ಇದನ್ನು ನಂಬುವುದಿಲ್ಲ. ಅರಮನೆಯವರೊಬ್ಬರು 74 ವರ್ಷಗಳ ಹಿಂದೆಯೇ ಮದ್ರಾಸ್‍ನಿಂದ ಈ ಸಿಹಿಯನ್ನು ತಯಾರಿಸುವ ವಿಧಾನವನ್ನು ಕದ್ದು ತಂದಿದ್ದು, ಜೀವನದ ಕೊನೆಯ ಘಟ್ಟದ್ದಲ್ಲಿ ಮೈಸೂರು ರಾಜರಿಗೆ ತಿಳಿಸಿದ್ದಾರೆ. ನಂತರ ಮೈಸೂರಿನ ಮಹಾರಾಜರು ಮದ್ರಾಸ್‍ನ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರಿಟ್ಟಿದ್ದಾರೆ. ಮೆಕಾಲೆ ಭಾವಚಿತ್ರದೊಂದಿಗೆ ಇರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಈಗ ಮೈಸೂರು ಪಾಕ್ ತಮ್ಮದೆಂದು ತಮಿಳರು ವಾದಿಸುತ್ತಿದ್ದಾರೆ.

ಇನ್ನು ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಮೈಸೂರು ಜಿಲ್ಲಾಧಿಕಾರಿ , ರುಚಿಕರ ಸಿಹಿಯಾದ ಮೈಸೂರು ಪಾಕ್‌ ಹೆಸರೇ ಸೂಚಿಸುವಂತೆ ಮೈಸೂರಿನದ್ದೇ. ಹಾಗಾಗಿ, ಅದರ ಭೌಗೋಳಿಕ ಸೂಚ್ಯಂಕದ (ಜಿಐ)ಶ್ರೇಯಸ್ಸು ನಮ್ಮದೇ. ಒಂದು ವೇಳೆ ಮೈಸೂರು ಪಾಕದ ಜಿಐ ಶ್ರೇಯಸ್ಸು ನಮಗೆ ಸೇರಿಲ್ಲದಿದ್ದರೆ, ಖಂಡಿತ ಜಿಲ್ಲಾಡಳಿತದ ವತಿಯಿಂದಲೇ ಅದರ ಹಕ್ಕನ್ನು ಚಲಾಯಿಸಲಾಗುವುದು ಎನ್ನುತ್ತಾರೆ. ಒಟ್ಟಾರೆ ಈ ವಿವಾದ ಲ್ಲಿ ಬಂದು ತಲುಪಲಿದೆ ಎಂಬುದು ಎಲ್ಲರ ಮುಂದಿರುವ ಯಕ್ಷ ಪ್ರಶ್ನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A new tussle has broken out online between Tamilians and Kannadigas over the GI registration of Mysore pak. Tamilians were seen posting an unverified quote from British officer Lord Macaulay in the Indian Parliament in 1835. Tamilians have been making Mysore pak for years but, 74 years ago, a lawyer belonging to the Wadiyer family from Mysuru stole the recipe. The king then named the dish as 'Mysore pak'.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ