ಮುಕ್ತ ವಿವಿಯಾಯ್ತು ಈಗ ಮೈಸೂರು ವಿವಿಯಲ್ಲಿ ಅಕ್ರಮದ ವಾಸನೆ!

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಅಕ್ಟೋಬರ್ 17: ರಾಜ್ಯ ಮುಕ್ತ ವಿವಿಯಲ್ಲಿ ಪದವಿ, ಸ್ನಾತಕೋತ್ತರ ಪಡೆದವರು ಪಾಡು ಗಾಳಿಪಟದಂತಾಗಿದೆ. ಏತನ್ಮಧ್ಯೆ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಡಿಗ್ರಿ ಪೂರೈಸಿರುವ ವಿದ್ಯಾರ್ಥಿಗಳಿಬ್ಬರನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಸಾವಿರಾರು ವಿದ್ಯಾರ್ಥಿಗಳ ಕನಸು ನುಚ್ಚುನೂರು: ಮುಕ್ತ ವಿವಿಗೆ ಬೀಗ?

ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಸಂಖ್ಯಾತ ಮಂದಿ ಪದವಿ ಪೂರೈಸಿದ್ದಾರೆ. ಪದವಿ ಪೂರೈಸದೇ ಸರ್ಟಿಫಿಕೇಟ್ ಪಡೆದವರೂ ಇದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಕ್ಕ ಕರಾಮುವಿ(KSOU) ಆಡಳಿತದಲ್ಲಿ ಪದವಿ ಪೂರೈಸದೇ ಇರುವ ವಿದ್ಯಾರ್ಥಿಗಳು ಸಾಕಷ್ಟು ಹಣ ಪಡೆದು ಪದವಿ ಪೂರೈಸಿದ ಸರ್ಟಿಫಿಕೇಟ್ ನೀಡಿದ್ದು, ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನ್ಯತೆ ಕಳೆದುಕೊಳ್ಳುವಂತಾಗಿದೆ. 2012ರಲ್ಲಿ ಕರಾಮುವಿಯಲ್ಲಿ ಶಿಕ್ಷಣ ಪೂರೈಸಿದ ವ್ಯಕ್ತಿಗಳಿಗೆ ಸರ್ಕಾರಿ ಉದ್ಯೋಗಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು.

After KSOU controversy, now Mysuru University is in controversy

ಇದೀಗ 2013-14ರಲ್ಲಿ ಕರಾಮುವಿಯಲ್ಲಿ ಮಾಸ್ಟರ್ ಡಿಗ್ರಿ ಪೂರೈಸಿದ ಪ್ರವೀಣ್ ಕುಮಾರ್ ಮೆಲ್ಲಳ್ಳಿ ಹಾಗೂ ಸೋಮಶೇಖರ್ ಸಿ.ಪಾಂಡವಪುರ ಎಂಬವರಿಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆಡಳಿತ ಮತ್ತು ರಾಜ್ಯಶಾಸ್ತ್ರ ವಿಷಯದಲ್ಲಿ 2016ರಲ್ಲಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಂಡಿದ್ದು, ತಿಂಗಳಿಗೆ 50,000ರೂ.ವೇತನ ನೀಡಲಾಗುತ್ತಿದೆ. ಅಂದರೆ ಹಿಂದಿನ ಮಾಜಿ ಕುಲಪತಿಗಳಿಗೆ ಈ ವಿಷಯ ತಿಳಿದಿದ್ದರೂ ಅವರನ್ನು ನೇಮಕ ಮಾಡಿಕೊಂಡಿದ್ದು ಯಾಕೆ? ಈಗಿನ ಕುಲಸಚಿವರು ಮತ್ತು ಪ್ರಭಾರ ಕುಲಪತಿಗಳು ಅವರನ್ನು ಸೇವೆಯಲ್ಲಿಯೇ ಮುಂದುವರಿಯಲು ಅವಕಾಶ ನೀಡಿದ್ದು ಯಾಕೆ ಎಂದು ಕರಾಮುವಿಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ನಾವು ಅವರ ಜೊತೆಯಲ್ಲಿಯೇ ಮಾಸ್ಟರ್ ಡಿಗ್ರಿ ಪೂರೈಸಿದ್ದು ನಮ್ಮನ್ನು ಕೂಡ ಅಲ್ಲಿ ಸೇವೆಯಲ್ಲಿ ಸೇರಿಸಿಕೊಳ್ಳಬಹುದಿತ್ತು. ಆದರೆ ಸೇರಿಸಿಕೊಂಡಿಲ್ಲ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದು ಆರ್ ಟಿ ಐಗೆ ತನಿಖೆಗೆ ಹಾಕಿದ್ದಾರೆ. ಪ್ರಭಾರ ಕುಲಪತಿಗಳು ಹಾಗೂ ವಿವಿ ಕುಲಸಚಿವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಿ, ನಮ್ಮನ್ನು ಅದೇ ರೀತಿ ಕೆಲಸಕ್ಕೆ ಸೇರಿಸಿಕೊಳ್ಳಿ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವು ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ ಎಂದು ನೊಂದ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು:
ಪ್ರೊ.ಮಾನೆ ಇನ್ನು ಮೈಸೂರು ವಿವಿಯಲ್ಲಿ ದೊಡ್ಡ ಹಗರಣ ನಡೆದಿರುವುದನ್ನು ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಒಪ್ಪಿಕೊಂಡಿದ್ದಾರೆ. 2016 ರಲ್ಲಿ ನಡೆದ ಉಪನ್ಯಾಸರ ನೇಮಕಾತಿಯಲ್ಲಿ ಬಾರಿ ಗೋಲ್ ಮಾಲ್ ನಡೆದಿದ್ದು, ಕೆ.ಎಸ್.ಓ.ಯು. ಅಂಕಪಟ್ಟಿ ಪಡೆದವರಿಗೆ ಭ್ರಷ್ಟಾಚಾರದ ಮೂಲಕ ಕೆಲಸ ಮಾಡಿಕೊಡಲಾಗಿದೆ. ಇದೆಲ್ಲಾ ಹಿಂದಿನ ಕುಲಪತಿಗಳು ಮಾಡಿರೋ ಕೆಲಸ ಎಂದು ಪ್ರೊ. ದಯಾನಂದ ಮಾನೆ ಸ್ಪಷ್ಟಪಡಿಸಿದ್ದಾರೆ. ಈ ರೀತಿ ಕೆಲಸ ಪಡೆದವರು ಶೇ 50 ರಷ್ಟಿದ್ದಾರೆ. ಈ ವಿಚಾರವನ್ನು ಸಿಂಡಿಕೇಟ್ ಸಭೆ ಮುಂದಿಟ್ಟು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
University of Mysore has appointed two students who have completed their Masters from KSOU as lecturers. The other students of KSOU have questioned their appointment and are wondering why they are not considered.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ