ಮೈಸೂರು ಮೃಗಾಲಯದ 'ಟಿಂಬೋ' ಇನ್ನಿಲ್ಲ

Posted By:
Subscribe to Oneindia Kannada

ಮೈಸೂರು, ಮಾರ್ಚ್ 23 : ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ 'ಟಿಂಬೋ' ಮೃತಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ 54 ವರ್ಷದ ಆಫ್ರಿಕನ್ ಆನೆ ಟಿಂಬೋ ಬುಧವಾರ ಸಾವನ್ನಪ್ಪಿದೆ.

'ಟಿಂಬೋ ಹಲವು ವರ್ಷಗಳಿಂದ ಸಂಧಿವಾತ ರೋಗದಿಂದ ಬಳಲುತ್ತಿತ್ತು. ಕಳೆದ 20 ದಿನಗಳಿಂದ ಅದರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದೆ' ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ್ ಹೇಳಿದರು. [ಮೈಸೂರು ಮೃಗಾಲಯದ 'ಭೀಮ' ಇನ್ನಿಲ್ಲ]

elephant

'ತಜ್ಞ ವೈದ್ಯರಿಂದ 'ಟಿಂಬೋ'ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅದರ ಆರೋಗ್ಯದಲ್ಲಿ ಸುಧಾರಣೆಯಾಗಿರಲಿಲ್ಲ. ಇಂದು ಮಧ್ಯಾಹ್ನ 12.35ರ ಸುಮಾರಿಗೆ ಕುಸಿದು ಬಿದ್ದ ಟಿಂಬೋ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ಬಳಿಕ 'ಟಿಂಬೋ' ಸಾವಿಗೆ ನಿಖರ ಕಾರಣ ತಿಳಿದುಬರಲಿದೆ' ಎಂದು ವೆಂಕಟೇಶ್ ತಿಳಿಸಿದರು.[ಮೈಸೂರು ಮೃಗಾಲಯದ 'ವಾಲಿ' ವಿಧಿವಶ]

54 year old Timbo the African elephant arrived at Mysuru zoo in the year 1979. He has a son , named Rambo born in 1994...

Posted by Executive Director Mysore Zoo onWednesday, March 11, 2015

1979ರಲ್ಲಿ ಜರ್ಮನ್ ಮೃಗಾಲಯದಿಂದ ಟಿಂಬೋನನ್ನು ಅದರ ಪುತ್ರ ರಾಂಬೋ ಜೊತೆಗೆ ಮೈಸೂರಿಗೆ ಕರೆತರಲಾಗಿತ್ತು. ಟಿಂಬೋ ಸಾವಿನಿಂದಾಗಿ 25 ವರ್ಷದ ರಾಂಬೋ ಏಕಾಂಗಿಯಾಗಿದೆ. [ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಅತಿಥಿ]

mysuru

ಭೀಮಾ ಸಾವನ್ನಪ್ಪಿತ್ತು : ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ ಘೇಂಡಾಮೃಗ 'ಭೀಮ' ಮಾರ್ಚ್ 9ರಂದು ಮೃತಪಟ್ಟಿತ್ತು. ಜರ್ಮನಿಯ ಮೃಗಾಲಯದಿಂದ 'ಭೀಮ'ನನ್ನು 1971ರಲ್ಲಿ ಮೈಸೂರಿಗೆ ಕರೆತರಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A male African elephant named 'Timbo' died at the Sri Chamarajendra Zoological Gardens in Mysuru on Wednesday, March 23, 2016. 54 year old Timbo the African elephant arrived at Mysuru zoo in the year 1979.
Please Wait while comments are loading...