ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಕೆ.ಆರ್.ನಗರ ವ್ಯಾಪ್ತಿಯ ಜನರ ನಿದ್ದೆಗೆಡಿಸಿದ 'ಜ್ವರ'

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು,ಫೆಬ್ರವರಿ,29: ಕೆಲವು ದಿನಗಳ ಹಿಂದೆ ಮೈಸಊರು ಮೊರರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿನಿ ಮಿದುಳು ಜ್ಚರದಿಂದ ಸಾವನ್ನಪ್ಪಿದ ಸುದ್ದಿ ಇನ್ನೂ ಮರೆಯಾಗಿಲ್ಲ. ಅಷ್ಟರಲ್ಲೇ ಜ್ವರದಿಂದ ಬಳಲುತ್ತಿದ್ದ ಮಹಿಳಾ ಆರೋಗ್ಯ ಸಹಾಯಕಿಯೊಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೆ.ಆರ್.ನಗರ ತಾಲೂಕು ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಲತಾ (36) ಜ್ವರದಿಂದ ಮೃತಪಟ್ಟ ದುರ್ದೈವಿ. ಇವರು ಮೈಸೂರಿನ ಮುಂಜನಹಳ್ಳಿ ಗ್ರಾಮದಲ್ಲಿರುವ ಉಪಕೇಂದ್ರದ ವಸತಿಗೃಹದಲ್ಲಿ ವಾಸವಾಗಿದ್ದರು.[ಮಿದುಳು ಜ್ವರಕ್ಕೆ ಮೊರಾರ್ಜಿ ದೇಸಾಯಿ ಶಾಲೆ ಬಾಲಕಿ ಬಲಿ]

Mysuru

ಲತಾ ಕೆಲ ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದರು. ಆದರೂ ಅದನ್ನು ಕಡೆಗಣಿಸಿದ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಈಕೆ ಜ್ವರದಿಂದ ಬಳಲುತ್ತಿದ್ದರೂ ವೈದ್ಯರು ರಜೆ ನೀಡಿರಲಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.[ವಿಚಿತ್ರ ಜ್ವರಕ್ಕೆ ಬೆಚ್ಚಿಬಿದ್ದ ಬಳ್ಳಾರಿ ಜಿಲ್ಲೆ]

ಶುಕ್ರವಾರ ಜ್ವರ ಹೆಚ್ಚಾದ ಪರಿಣಾಮ ತೀವ್ರ ಅಸ್ವಸ್ಥಗೊಂಡ ಅವರನ್ನು ಸಿಬ್ಬಂದಿಗಳು ಕೆ.ಆರ್.ನಗರ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.[ಝಿಕಾ ವೈರಸ್ ಗೆ ಮದ್ದು ನಿಮ್ಮ ಮನೆಯ ಕೈದೋಟದಲ್ಲಿದೆ]

ಆಗ ಶಾಲಾ ಬಾಲಕಿಯನ್ನು, ಇದೀಗ ಆರೋಗ್ಯ ಸಹಾಯಕಿಯನ್ನು ಬಲಿತೆಗೆದುಕೊಂಡ ಕೆ. ಆರ್. ನಗರ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಜ್ವರ ಯಾವ ಬಗೆಯ ಜ್ವರ ಎಂದು ತಿಳಿಯಲು ಯಾವುದೇ ತಪಾಸಣೆ ಕೈಗೊಳ್ಳದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇವರು ಮಿದುಳು ನಿಷ್ಕ್ರೀಯತೆಯಿಂದ ಮೃತಪಟ್ಟಿರುವರೆಂದು ಖಾಸಗಿ ವೈದ್ಯರು ತಿಳಿಸಿದ್ದಾರೆ.

English summary
A women Latha died in Fever in KR Nagar, Mysuru on Sunday, February, 28th. She was worker of Health center, KR Nagar, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X