ಮೈಸೂರು: ಸರಗಳ್ಳಿ ಬಂಧನ, 233ಗ್ರಾಂ ಚಿನ್ನ ವಶ

Posted By:
Subscribe to Oneindia Kannada

ಮೈಸೂರು, ಜುಲೈ 28 : ಮೈಸೂರು ಬರು ಬರುತ್ತಾ ಕ್ರೈಂ ಸಿಟಿಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಂದು ಅಪಹರಣ, ಸರಗಳ್ಳತನ ಮಾಡುತ್ತಿದ್ದ ಸರಗಳ್ಳಿಯನ್ನು ಕೆ.ಆರ್.ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಗುಲ್ಬರ್ಗ ಜಿಲ್ಲೆಯ ಸೇಡಂ ರಸ್ತೆಯ ಬಾಪೂನಗರ ನಿವಾಸಿ ಸರಿತಾ ಕಾಶಿನಾಥ್ ಎಂದು ಗುರುತಿಸಲಾಗಿದ್ದು, ಆರೋಪಿಯಿಂದ 6,50,000 ರು. ಬೆಲೆಬಾಳುವ 233ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

A women arrested in theft case by Mysuru KR police

ಈಕೆ ಬಸವೇಶ್ವರ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸರಿತಾಳನ್ನು ಎಎಸ್ ಐ ಲಕ್ಷಿನಾರಾಯಣ್ ಮತ್ತು ಸಿಬ್ಬಂದಿ ಆಕೆಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುವ ವೇಳೆ ಆಕೆಯ ಬಳಿ ಕರಿಮಣಿ ಸರ ಸೇರಿದಂತೆ ತಾಳಿ ಸಿಕ್ಕಿವೆ.

ಇನ್ನು ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ನಗರದ ವಿವಿಧೆಡೆ ಕಳ್ಳತನ ನಡೆಸಿರುವುದಾಗಿ ತಿಳಿಸಿದ್ದಾಳೆ. ಅಷ್ಟೇ ಅಲ್ಲದೇ ಕದ್ದ ಮಾಲನ್ನು ಆಸೀಫ್ ಎಂಬವನಿಗೆ ಮಾರಾಟ ಮಾಡಿದ್ದು ಆತನ ಬಳಿಯಿದ್ದ 223 ಗ್ರಾಂ ತೂಕದ 6 ಚಿನ್ನದ ಮಾಂಗಲ್ಯ ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನ: ಅಂಬೇಡ್ಕರ್ ಭಾವಚಿತ್ರವಿದ್ದ ನಾಲಫಲಕಕ್ಕೆ ಕಿಡಿಗೇಡಿಗಳು ಸಗಣಿ ಬಳಿದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

A women arrested in theft case by Mysuru KR police

ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕಕ್ಕೆ ನಿನ್ನೆ ರಾತ್ರಿ ಕಿಡಿಗೇಡಿಗಳು ಸಗಣಿ ಬಳಿದು ನಾಮಫಲಕಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಈ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸುವಂತೆ ಗ್ರಾಮದ ಯುವಕರು ಆಗ್ರಹಿಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

ಇನ್ನು ಸ್ಥಳಕ್ಕೆ ನಂಜನಗೂಡು ತಹಶೀಲ್ದಾರ್ ದಯಾನಂದ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮನವೊಲಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru KR Station police arrested women for kidnapping and robbery and seized worth Rs 650,000, 233 grams gold.
Please Wait while comments are loading...