ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಸ್ವಾಮೀಜಿ ವಿರುದ್ಧ ದೂರು ದಾಖಲು

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 9: ಚಾತುರ್ಮಾಸ್ಯ ಪೂಜೆ ವೇಳೆ ಸ್ವಾಮೀಜಿಯೊಬ್ಬರು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈವರೆಗೆ ಬೆಳಕಿಗೆ ಬರುತ್ತಿದ್ದ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಸ್ವಾಮೀಜಿಗಳೇ ತಪ್ಪು ಮಾಡಿ ಸಿಲುಕಿಕೊಳ್ಳುತ್ತಿದ್ದುದೇ ಹೆಚ್ಚು. ಆದರೆ, ಈ ಪ್ರಕರಣದಲ್ಲಿ ಮಾತ್ರ ಪತಿಯೇ, ಸ್ವಾಮೀಜಿಯೊಂದಿಗೆ ಸಹಕರಿಸುವಂತೆ ತನ್ನ ಪತ್ನಿಯನ್ನು ಒತ್ತಾಯಿಸಿರುವುದಾಗಿ ದೂರಲಾಗಿದೆ. ಹಾಗಾಗಿ ಪೊಲೀಸರು ಪತಿಯನ್ನೇ ಪ್ರಥಮ ಆರೋಪಿ'ಯನ್ನಾಗಿಸಿದ್ದಾರೆ!

ಬೆಳ್ತಂಗಡಿ: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಬೆಳ್ತಂಗಡಿ: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ

ಸ್ವಾಮೀಜಿ ಹಾಗೂ ತಮ್ಮ ಪತಿ ವಿರುದ್ಧವೇ ನಗರದ ರಾಮಕೃಷ್ಣ ನಗರದ ಮಹಿಳೆ ದೂರು ನೀಡಿದ್ದು, ಸ್ವಾಮೀಜಿ, ಮಹಿಳೆಯ ಪತಿ ಸೇರಿದಂತೆ ಒಟ್ಟು ಐವರ ವಿರುದ್ಧ ಕುವೆಂಪು ನಗರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಾಗಿದೆ.

A woman lodged a complaint at the Kuvempunagar police station on Swamiji

ಪ್ರಕರಣ ದಾಖಲಾಗಿದ್ದು ತಿಳಿಯುತ್ತಿದ್ದಂತೆ ಸ್ವಾಮೀಜಿ ಹಾಗೂ ಮಹಿಳೆಯ ಪತಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಾಮೀಜಿ ಚಾತುರ್ಮಾಸ್ಯ ಪೂಜೆಗೆ ನೂರಾರು ಮಂದಿ ಹಾಜರಾಗುತ್ತಿದ್ದರು. ಈ ವೇಳೆ, ರಾಮಕೃಷ್ಣ ನಗರದ ನಿವಾಸಿಯೂ ಸ್ವಾಮೀಜಿಗೆ ಪರಿಚಿತರಾದರು.

ಪ್ರವಚನ ಕೇಳಿ ಮನೆಗೆ ಬಂದ ಮಹಿಳೆಯ ಪತಿ 'ಸ್ವಾಮೀಜಿ ಹೇಳಿದಂತೆ ನೀನು ಕೇಳಿದರೆ ನಾವು ಮಾಡಿರುವ ಸಾಲವನ್ನು ತೀರಿಸಿಕೊಳ್ಳಬಹುದು ಎಂದು ಒತ್ತಾಯಿಸುತ್ತಿದ್ದರು. ಆದರೆ, ನಾನು ಅವರ ಮಾತನ್ನು ವಿರೋಧಿಸಿದೆ ಎಂದು ದೂರುದಾರ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ಕೇಸ್, ರಾಘವೇಶ್ವರಶ್ರೀಗಳಿಗೆ ಮತ್ತೆ ಸಂಕಟಲೈಂಗಿಕ ಕಿರುಕುಳ ಕೇಸ್, ರಾಘವೇಶ್ವರಶ್ರೀಗಳಿಗೆ ಮತ್ತೆ ಸಂಕಟ

ಸೆ.4ರ ರಾತ್ರಿ 1 ಗಂಟೆಗೆ ಮನೆಯ ಕಾಲಿಂಗ್ ಬೆಲ್ ಸದ್ದು ಮಾಡಿತು. ಪತಿ ಬಂದಿರಬಹುದು ಎಂದುಕೊಂಡು ಬಾಗಿಲು ತೆರೆದರೆ ನನ್ನ ಪತಿಯೊಂದಿಗೆ ಸ್ವಾಮೀಜಿ ಹಾಗೂ ಅವರ ಐವರು ಶಿಷ್ಯರು ಮನೆಯೊಳಗೆ ಪ್ರವೇಶಿಸಿದರು.

ಇದೇ ವೇಳೆ, ಪತಿ ಹಾಗೂ ಸ್ವಾಮೀಜಿ ನನ್ನ ಮೇಲೆ ಹಲ್ಲೆ ನಡೆಸಿದರು. ಸ್ವಾಮೀಜಿ ನನ್ನ ಮುಂದಲೆ ಕೂದಲನ್ನು ಹಿಡಿದು ಎಳೆದಾಡಿ ನನ್ನ ಸೇವೆಗೆ ಬರುವುದಿಲ್ಲ ಎನ್ನುತ್ತೀಯಾ?' ಎಂದು ಹಲ್ಲೆ ನಡೆಸಿದರು. ನನ್ನನ್ನು ಮಲಗುವ ಕೋಣೆಗೆ ಎಳೆದೊಯ್ದು ಲೈಂಗಿಕ ಕಿರುಕುಳ ನೀಡಿದರು.

ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ಸಿಲುಕಿದ ದೇವಮಾನವಲೈಂಗಿಕ ದೌರ್ಜನ್ಯ ಕೇಸಿನಲ್ಲಿ ಸಿಲುಕಿದ ದೇವಮಾನವ

ನನ್ನ ಮನೋಕಾಮನೆ ಈಡೇರಿಸಿದರೆ ನಿನಗೆ ಒಳ್ಳೆಯದಾಗುತ್ತದೆ' ಎಂದು ಸ್ವಾಮೀಜಿ ಮತ್ತಷ್ಟು ಲೈಂಗಿಕ ಕಿರುಕುಳ ನೀಡಿದರು. ಅಷ್ಟೇ ಅಲ್ಲದೇ ನನ್ನ ಬಟ್ಟೆಗಳಿಗೂ ಬೆಂಕಿ ಹಚ್ಚಿದರು. ತಪ್ಪಿಸಿಕೊಳ್ಳುವ ಉದ್ದೇಶದಿಂದ ನಾನು ಎದುರು ಮನೆಗೆ ಹೋಗಲೆತ್ನಿಸಿದಾಗ ಸ್ವಾಮೀಜಿ ನನ್ನನ್ನು ಹಿಡಿದು ಬಲವಂತವಾಗಿ ಅವರ ಫಾರ್ಚೂನರ್ ಕಾರಿನಲ್ಲಿ ಕೂರಿಸಿಕೊಂಡರು.

ತೊಡೆಯ ಮೇಲೆ ಕೂರಿಸಿಕೊಂಡು ಮತ್ತೆ ಲೈಂಗಿಕ ಕಿರುಕುಳ ನೀಡಿದರು. 3 ದಿನಗಳೊಳಗೆ ನನ್ನ ಸೇವೆಗೆ ನೀನು ಬರಬೇಕು' ಎಂದು ಎಚ್ಚರಿಸಿ ಕಳುಹಿಸಿದರು ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ, ಕೊಲೆ ಯತ್ನ, ದೈಹಿಕ ಹಲ್ಲೆ, ಅಪಹರಣ, ಅಕ್ರಮ ಕೂಟ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಪೊಲೀಸರು, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಮಂಗಳೂರು ಮೂಲದ ಈ ಸ್ವಾಮೀಜಿ ಆರೇಳು ವರ್ಷಗಳ ಹಿಂದೆ ಇಲ್ಲಿಗೆ ಬಂದು 25 ಎಕರೆ ಜಾಗವನ್ನು ಖರೀದಿಸಿ, ಅಲ್ಲಿ ಕುಟೀರಗಳನ್ನು ನಿರ್ಮಿಸಿದ್ದಾರೆ. ಪಟ್ಟಣದಿಂದ 4 ಕಿಮೀ ದೂರ ನಿರ್ಜನ ಪ್ರದೇಶದಲ್ಲಿರುವ ಈ ಆಶ್ರಮ ಬಹಳ ನಿಗೂಢವಾಗಿದೆ. ಆಶ್ರಮಕ್ಕೆ ಬಹಳಷ್ಟು ಅಪರಿಚಿತರು ಬಂದು ಹೋಗುತ್ತಾರೆ.

ಅಲ್ಲೇನು ನಡೆಯುತ್ತದೆ ಎಂಬುದೇ ತಿಳಿಯುವುದಿಲ್ಲ. ಸ್ವಾಮೀಜಿಯ ನಡೆನುಡಿಗಳೂ ಸಹಜವಾಗಿಲ್ಲ. ಸುಮಾರು 35 ವರ್ಷ ಪ್ರಾಯದ, ದೃಢಕಾಯರಾಗಿರುವ ಸ್ವಾಮೀಜಿ ಚಿನ್ನಾಭರಣ, ಮೇಕಪ್ ಪ್ರಿಯರು. ಕಾಲಿಗೆ ಗೆಜ್ಜೆ ಕಟ್ಟಿ ಡ್ಯಾನ್ಸ್ ಮಾಡುತ್ತಾರೆ ಎಂಬ ಮಾತುಗಳೂ ಕೇಳಿಬಂದಿವೆ. ಸ್ಥಳೀಯರಿಗಿರಲಿ, ಮಾಧ್ಯಮದವರಿಗೂ ಪ್ರವೇಶ ಅವಕಾಶವಿಲ್ಲ ಎಂಬುದು ಸ್ಥಳೀಯರ ವಿವರಣೆ.

English summary
A woman lodged a complaint at the Kuvempunagar police station on Swamiji. Kuvempunagar police registered cases against Swamiji on sexual harassment, attempt to murder, physical assault, kidnapping and illegal association charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X