ಚಾಮುಂಡಿಬೆಟ್ಟದಲ್ಲಿ ಯುವರಾಜ ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,10: ಅಪ್ಪಾ, ನಾನು ನಿನಗೆ ಒಳ್ಳೆಯ ಮಗನಾಗಲಿಲ್ಲ. ಆದರೆ ನೀನು ನನಗೆ ಒಳ್ಳೆ ಅಪ್ಪನಾದೆ. ನನ್ನಿಂದ ನಿನಗೆ ಸಿಕ್ಕಿದ್ದು ತೊಂದರೆ ಮಾತ್ರ. ನಿನ್ನಂತಹ ಅಪ್ಪ ಎಲ್ಲರಿಗೂ ಸಿಗಲಿ. ನನ್ನಂತಹ ಮಗ ಯಾರಿಗೂ ಬೇಡ. ಹೀಗೆ ಬರೆದದ್ದು ಚಾಮುಂಡಿ ಬೆಟ್ಟದಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪದವಿ ವಿದ್ಯಾರ್ಥಿ.

ಹುಣಸೂರು ತಾಲೂಕಿನ ಬಿಳಿಕೆರೆ ಬಳಿಯ ಹೊಸಪುರ ಗ್ರಾಮದ ರಾಜಪ್ಪ ಅವರ ಪುತ್ರ ಸಂದೀಪ್ (21) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದನು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.[ಅಯ್ಯೋ ವಿಧಿಯೆ : ತಂದೆಯನ್ನು ಕೈಲಾಸಕ್ಕೆ ಕಳಿಸಿದ ಮಗನ ಕೈಸಾಲ]

A student commits suicide at Chamundi hills, Mysuru

ಸಂದೀಪ್ ಪ್ರತಿದಿನ ತನ್ನ ಊರಾದ ಹೊಸಪುರದಿಂದ ಮೈಸೂರಿಗೆ ಬಂದು ವಿದ್ಯಾಭ್ಯಾಸ ಮಾಡಲು ಕಷ್ಟವಾಗುತ್ತದೆ ಎಂಬ ಕಾರಣದಿಂದ ಮೈಸೂರಿನ ಚಾಮುಂಡಿಪುರಂನಲ್ಲಿರುವ ಸಂಬಂಧಿಗಳ ಮನೆಯಲ್ಲಿದ್ದನು. ಈತ ಯುವರಾಜ ಕಾಲೇಜಿಗೆ ಹೋಗುತ್ತಿದ್ದನು.

ಸಂದೀಪ್ ಬೇಸರವಾದಾಗಲೆಲ್ಲ ಚಾಮುಂಡಿಬೆಟ್ಟಕ್ಕೆ ಹೋಗುತ್ತಿದ್ದನು. ಮಂಗಳವಾರ ರಾತ್ರಿ ಬೆಟ್ಟಕ್ಕೆ ಹೋಗುವ ವೇಳೆ ಜತೆಗೆ ಪೆಟ್ರೋಲ್ ತೆಗೆದುಕೊಂಡು ಹೋಗಿ ಅದನ್ನು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಚಾಮುಂಡಿಬೆಟ್ಟ ಠಾಣೆ ಪೊಲೀಸರು ರಾತ್ರಿಯೇ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.[ಚಾಮುಂಡಿ ಬೆಟ್ಟದಲ್ಲಿ ಇನ್ಮುಂದೆ ವಸ್ತ್ರಸಂಹಿತೆ ಜಾರಿ?]

A student commits suicide at Chamundi hills, Mysuru

ಸಂದೀಪ್ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?

ನನ್ನ ಸಾವಿಗೆ ನಾನೇ ಕಾರಣ. ಯಾವುದೇ ಕಾರಣಕ್ಕೂ ನನ್ನ ಕೈಯ್ಯಲ್ಲಿರುವ ಚೈನ್ ತೆಗೆಯಬೇಡಿ. ನನ್ನ ದೇಹದಲ್ಲಿರುವ ಅಂಗಾಂಗಳನ್ನು ದಾನ ಮಾಡಿ. ನನ್ನ ಮುಂದಿನ ಜೀವನದಲ್ಲಿ ನಾನು ಇಷ್ಟಪಡೋದು ಸಿಗುತ್ತೆ. ಆ ವಿಶ್ವಾಸದಿಂದಲೇ ಈ ನಿರ್ಧಾರಕ್ಕೆ ಬಂದಿದ್ದೇನೆ.[ಮಗಳಿಗೆ ಕಿಡ್ನಿ ಕೊಟ್ಟು, ಮರುಜೀವ ನೀಡಿದ ತಂದೆ]

ನನ್ನನ್ನು ಕ್ಷಮಿಸಿ. ನಾನು ನಿನಗೆ ಒಳ್ಳೆಯ ಮಗನಾಗಲಿಲ್ಲ. ನೀನು ನನಗೆ ಒಳ್ಳೆ ಅಪ್ಪ. ನನ್ನಿಂದ ನಿನಗೆ ತೊಂದರೆಯೇ. ನಿನ್ನಂತ ಅಪ್ಪ ಎಲ್ಲರಿಗೂ ಸಿಗಲಿ. ನನ್ನಂತ ಮಗ ಮಾತ್ರ ಬೇಡ. ಅಪ್ಪಾ ಸಹೋದರಿ ಸೌಜು ಕಾಲೇಜಿಗೆ ಹೋಗಿದ್ದು ಸಾಕು. ಆಕೆಯನ್ನು ಒಳ್ಳೆ ಹುಡುಗನಿಗೆ ಕೊಟ್ಟು ಮದುವೆ ಮಾಡಿ..ನಾನು ಇಬ್ಬರು ಸ್ನೇಹಿತರಿಂದ 5000 ತೆಗೆದುಕೊಂಡಿದ್ದೇನೆ. ಅವರಿಗೆ ಹಣ ಕೊಡಿ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A student Sandeep committed suicide at Chamundi hills, Mysuru. He is B.Sc student of Yuvaraja college. He was explain his feeling in death note.
Please Wait while comments are loading...