ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಮ್ಮತ್ತೂರಿನಲ್ಲಿ ಮೊಬೈಲ್ ಟವರ್ ಏರಿ ಡ್ಯಾನ್ಸ್ ಮಾಡಿದ ಭೂಪ

|
Google Oneindia Kannada News

ಮೈಸೂರು, ಡಿಸೆಂಬರ್ 14: ವಿವಾಹಿತ ವ್ಯಕ್ತಿಯೊಬ್ಬ ಮೊಬೈಲ್ ಟವರ್ ತುತ್ತ ತುದಿಯನ್ನೇರಿ ನೃತ್ಯ ಮಾಡುತ್ತಾ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಉಮ್ಮತ್ತೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವರಾಮೇಗೌಡ ಅಲಿಯಾಸ್ ಶಿವರಾಂ ಇಲ್ಲಿನ ರಿಲಯನ್ಸ್ ಮೊಬೈಲ್ ಕಂಪನಿಗೆ ಸೇರಿದ ಮೊಬೈಲ್ ಟವರ್ ಏರಿದನಲ್ಲದೇ ಸುಮಾರು 2 ಗಂಟೆಗೂ ಹೆಚ್ಚು ಕಾಲ ಗಾಳಿಯಲ್ಲಿ ಕೈಕಾಲು ಅಲುಗಾಡಿಸುತ್ತಾ, ನೃತ್ಯ ಮಾಡುತ್ತಾ ಆತಂಕ ಸೃಷ್ಟಿಸಿದನು.

ಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು ಕುಣಿದ ಪೊಲೀಸಪ್ಪ, ತನಿಖೆಗೆ ಇಲಾಖೆ ಆದೇಶಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು ಕುಣಿದ ಪೊಲೀಸಪ್ಪ, ತನಿಖೆಗೆ ಇಲಾಖೆ ಆದೇಶ

ಈ ವೇಳೆ ಟವರ್ ಬಳಿ ಸಾವಿರಾರು ಜನ ಜಮಾಯಿಸಿ ಈತನ ಆಟಾಟೋಪಗಳನ್ನು ವೀಕ್ಷಿಸುತ್ತಾ ನಿಂತಿದ್ದರು. ವಿಷಯ ತಿಳಿದ ಪೊಲೀಸರು ಅಗ್ನಿಶಾಮಕ ತಂಡದೊಂದಿಗೆ ಧಾವಿಸಿ, ಧ್ವನಿವರ್ಧಕದ ಮೂಲಕ ಕೆಳಗಿಳಿದು ಬರುವಂತೆ ಕೋರಿದರೂ ಶಿವರಾಂ ಕೆಳಗಿಳಿಯಲಿಲ್ಲ.

A person danced top of the mobile tower

ಕೂಡಲೇ ಶಿವರಾಂ ಪತ್ನಿ ಮತ್ತು ಮಕ್ಕಳನ್ನು ಸ್ಥಳಕ್ಕೆ ಕರೆಸಿ ಧ್ವನಿವರ್ಧಕದ ಮೂಲಕ ಮಕ್ಕಳು ಅಳುತ್ತಿದ್ದಾರೆ. ಕೆಳಗಿಳಿದು ಬಾ ಎಂದು ಶಿವರಾಂ ಪತ್ನಿ ವಿನುತಾ ಮೂಲಕ ಮನವಿ ಮಾಡಿಸಿದಾಗ ಶಿವರಾಂ ನೃತ್ಯ ಮಾಡುತ್ತಲೇ ಕೆಳಗಿಳಿದು ಬಂದನು. ಆಗ ಸಾರ್ವಜನಿಕರು ಮತ್ತು ಪೊಲೀಸರು ನಿಟ್ಟುಸಿರು ಬಿಟ್ಟರು.

ಕೂಲಿ ಕೆಲಸ ಮಾಡುವ 52 ವರ್ಷದ ಶಿವರಾಂಗೆ ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ. ಮದ್ಯ ವ್ಯಸನಿಯಾದ ಶಿವರಾಂ ಟವರ್ ಏರಿದ ವೇಳೆ ಮದ್ಯಪಾನ ಮಾಡಿರಲಿಲ್ಲ. ಗ್ರಾಮದಲ್ಲಿ ಆಗಾಗ್ಗೆ ನಡೆಸುವ ತನ್ನ ಹುಚ್ಚಾಟಗಳಿಂದ ಕುಖ್ಯಾತಿ ಹೊಂದಿದ್ದಾನೆ.

ಬೇಕಿತ್ತಾ ಇದೆಲ್ಲ! ರೈಲ್ವೇ ಸ್ಟೇಷನ್ ನಲ್ಲಿ ಕಿಕಿ ಡಾನ್ಸ್ ಮಾಡಿದವರ ಪಾಡು ನೋಡಿ!ಬೇಕಿತ್ತಾ ಇದೆಲ್ಲ! ರೈಲ್ವೇ ಸ್ಟೇಷನ್ ನಲ್ಲಿ ಕಿಕಿ ಡಾನ್ಸ್ ಮಾಡಿದವರ ಪಾಡು ನೋಡಿ!

ಬ್ಲೇಡುಗಳನ್ನು ಬಾಯಿಗೆ ಹಾಕಿ ಜಗಿಯುವುದೂ ಸೇರಿದಂತೆ‌ ಮತ್ತಿತರ ದುರ್ವರ್ತನೆಗಳಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ ಎನ್ನಲಾಗಿದೆ. ಶಿವರಾಂ ಟವರ್ ನಿಂದ ಕೆಳಗೆ ಇಳಿದ ನಂತರ ಏಕೆ ಹತ್ತಿದೆ? ಎಂದು ಪೊಲೀಸರು ಕೇಳಿದರೆ, ಕೋತಿಗಳು ಹತ್ತುತ್ತವಲ್ಲ ಅದಕ್ಕೆ ನಾನೂ ಹತ್ತಿದೆ ಎಂದು ಉಡಾಫೆಯಾಗಿ ಉತ್ತರಿಸಿದನು.

ಮೊಬೈಲ್ ಟವರ್ ಗಳಿಗೆ ಸೂಕ್ತ ತಂತಿ ಬೇಲಿ ಅಥವಾ ಗೋಡೆಗಳ ರಕ್ಷಣೆ ಇಲ್ಲದ ಕಾರಣ ಇಂತಹ ಘಟನೆಗಳು ನಡೆಯುತ್ತವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

English summary
A person danced top of the mobile tower incident happened at Ummathoor village in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X