201 ಬಾರಿ ಸಂಚಾರ ಉಲ್ಲಂಘಿಸಿದ ಮೈಸೂರಿನ ಭೂಪ!

Posted By:
Subscribe to Oneindia Kannada

ಮೈಸೂರು, ಜುಲೈ 24 : ಒಂದು ವಾಹನದ ಮೇಲೆ ಹತ್ತಿಪ್ಪತ್ತು ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗುವುದು ಮಾಮೂಲಿ. ಕೆಲವೊಮ್ಮೆ 60 ಪ್ರಕರಣಗಳು ದಾಖಲಾಗಿದ್ದೂ ಉಂಟು. ಆದರೆ ಇಲ್ಲೊಬ್ಬ ಸವಾರ 201 ಬಾರಿ ಸಂಚಾರ ನಿಯಮ ಉಲ್ಲಂಘಿಸಿ 'ದಾಖಲೆ' ನಿರ್ಮಿಸಿದ್ದಾರೆ !

ಸಂಚಾರ ನಿಯಮ ಉಲ್ಲಂಘಿಸಬೇಡಿ ಎಂದು ಪೊಲೀಸರು ಸಾರಿ ಸಾರಿ ಹೇಳುತ್ತಾರೆ. ಆದರೆ, ಪೊಲೀಸರ ಮಾತನ್ನು ಕಿವಿಗೆ ಹಾಕಿ ಕೊಳ್ಳದವರೇ ಹೆಚ್ಚು. ಹೀಗಾಗಿ ವಾಹನ ಸವಾರರ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗುತ್ತವೆ. ಕೆಲವೊಮ್ಮೆ ಪೊಲೀಸರ ಕಣ್ತಪ್ಪಿಸಿ ಬಚಾವಾಗಬಹುದು. ಆದರೆ, ನಗರದ ಕೆ.ಆರ್.ವೃತ್ತ, ರಾಮಸ್ವಾಮಿ ವೃತ್ತ, ಸೀತಾ ವಿಲಾಸ ವೃತ್ತ, ಮೆಟ್ರೋಪೋಲ್ ವೃತ್ತ ಹೀಗೆ ಅನೇಕ ವೃತ್ತಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳಿಂದ ತಪ್ಪಿಸಿಕೊಳ್ಳುವುದು ಮಾತ್ರ ಸವಾರರಿಗೆ ಸಾಧ್ಯವಾಗುವುದಿಲ್ಲ. ಹೆಲ್ಮೆಟ್ ರಹಿತ ಚಾಲನೆ, ಅತಿ ವೇಗ, ಸಿಗ್ನಲ್ ಜಂಪ್ ಹೀಗೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಿಸಿ ಟಿವಿಗಳಿಂದ ದೊರಕುವ ಫೂಟೇಜ್ ಮೂಲಕ ಪ್ರಕರಣಗಳು ದಾಖಲಾಗುತ್ತಾ ಹೋಗುತ್ತವೆ.

A Mysuru man violates traffic rules about 201 times!

ಇದಕ್ಕೆ ಉದಾಹರಣೆ ಎಂಬಂತೆ ಮೈಸೂರಿನ ರಾಜೀವ ನಗರ ನಿವಾಸಿ ರೋಷನ್ ಅಲಿ ಬೇಗ್ ಎಂಬಾತ ತನ್ನ ಬಜಾಜ್ ಪ್ಲಾಟಿನಾ (ಕೆಎ 55 ಇ 4785) ದ್ವಿಚಕ್ರ ವಾಹನದ ಮೂಲಕ ಒಂದಲ್ಲ, ಎರಡಲ್ಲ 201 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ.

ಸಿಕ್ಕಿ ಬಿದ್ದಿದ್ದು ಹೇಗೆ..?
ಸಿದ್ಧಾರ್ಥನಗರ ಸಂಚಾರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಹರೀಶ್‍ಕುಮಾರ್ ಅವರು, ಶನಿವಾರ ರಾತ್ರಿ ನಗರದ ಮಿರ್ಜಾ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಇದೇ ವೇಳೆ ರೋಷನ್ ತನ್ನ ಪ್ಲಾಟಿನಾ ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ. ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದುದನ್ನು ಗಮನಿಸಿದ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಅವರ ವಾಹನವನ್ನು ಪೊಲೀಸರು ಬೆನ್ನತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ವಾಹನದ ಮಾಹಿತಿಗಳನ್ನು ಬ್ಲಾಕ್‍ಬೆರಿಯಲ್ಲಿ ಪರಿಶೀಲಿಸಿದಾಗ ಹೌಹಾರುವ ಸರದಿ ಪೊಲೀಸರದ್ದಾಗಿತ್ತು. ಏಕೆಂದರೆ, ಅವರ ವಾಹನದ ವಿರುದ್ಧ ಒಟ್ಟು 201 ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದವು ಹಾಗೂ ಇವುಗಳಿಗೆ ದಂಡ ಪಾವತಿಸದೇ ಇರುವುದು ಕೂಡ ಪೊಲೀಸರಿಗೆ ತಿಳಿದು ಬಂದಿದೆ. ಕೂಡಲೇ ಪೊಲೀಸರು ವಾಹನವನ್ನು ವಶಕ್ಕೆ ಪಡೆದು, ನಂತರ ದಂಡ ಪಾವತಿಸುವಂತೆ ಸೂಚನೆ ನೀಡಿದ್ದಾರೆ.

Bengaluru Traffic Police Soon Collects 100 Crores Of Fine

ವಾಹನವನ್ನೇ ಬಿಟ್ಟು ತೆರಳಿದ ಆಸಾಮಿ :
201 ಪ್ರಕರಣಗಳ ದಂಡದ ಮೊತ್ತ 20,100 ರೂ. ಆಗಿತ್ತು. ಈ ಮೊತ್ತವನ್ನು ಪಾವತಿಸುವಂತೆ ಪೊಲೀಸರು ಹೇಳುತ್ತಿದ್ದಂತೆ ರೋಷನ್ ಅಲಿ ಬೇಗ್ ಸ್ಥಳದಲ್ಲಿಯೇ ವಾಹನವನ್ನು ಬಿಟ್ಟು ಹೋಗಿದ್ದಾರೆ. ಈ ಸಂಬಂಧ ದಂಡ ಪಾವತಿಸುವಂತೆ ಪೊಲೀಸರು ನೋಟಿಸ್ ನೀಡಿದ್ದರಾದರೂ, ಆತ ದಂಡ ಪಾವತಿಸಿ ವಾಹನವನ್ನು ಮರಳಿ ಪಡೆಯುವುದು ಅನುಮಾನ ಎಂದು ಪೊಲೀಸ್ ಸಿಬ್ಬಂದಿ ಹೇಳುತ್ತಾರೆ. ಒಟ್ಟಾರೆ ಮೈಸೂರಿನಲ್ಲಿ ಈ ರೀತಿ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿರುವುದು ಮಾತ್ರ ಬೇಸರ ತರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
According to some people rules are made to break! a good example for this is here. A Mysuru man violates traffic rules about 201 times!
Please Wait while comments are loading...