ಮಾರಣಾಂತಿಕ ಬ್ಲೂವ್ಹೇಲ್ ಗೇಮ್ ಗೆ ಮೈಸೂರಿನ ವಿದ್ಯಾರ್ಥಿ ಬಲಿ?

Posted By: ಮೈಸೂರು ಪ್ರತಿನಿಧಿ
Subscribe to Oneindia Kannada
   Blue Whale Game : PUC Student in Mysuru ends his life | Oneindia Kannada

   ಮೈಸೂರು, ಸೆಪ್ಟೆಂಬರ್ 12: ಮಾರಣಾಂತಿಕ ಬ್ಲೂವ್ಹೇಲ್ ಗೇಮ್ ಗೆ ಮೈಸೂರಿನ ಮೇಟಗಳ್ಳಿಯ ಪಿಯುಸಿ ವಿದ್ಯಾರ್ಥಿಯೊಬ್ಬ ಬಲಿಯಾದ ಘಟನೆ ನಡೆದಿದೆ.

   ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

   ಇಲ್ಲಿನ ದೀಕ್ಷಾ ಕಾಲೇಜಿನಲ್ಲಿ ಓದುತ್ತಿದ್ದ ತುಷಾರ್ ಎಂಬ ಬಾಲಕನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೇಟಗಳ್ಳಿಯ ಪ್ರಸನ್ನ ಮತ್ತು ಪ್ರತಿಮಾ ದಂಪತಿಗಳ ಏಕೈಕ ಪುತ್ರನಾಗಿದ್ದ ತುಷಾರ್, ಮಾರಣಾಂತಿಕ ಬ್ಲೂವ್ಹೇಲ್ ಆಟಕ್ಕೆ ಬಲಿಯಾಗಿದ್ದಾನೆಂದು ಮೇಲ್ನೋಟಕ್ಕೆ ಗೋಚರವಾಗಿದೆ.

   ದರೆ ಕೆಲವು ಮಾಹಿತಿಯ ಪ್ರಕಾರ ಅವನ ಸಾವಿಗೆ ಬ್ಲೂ ವ್ಹೇಲ್ ಗೇಮ್ ಕಾರಣವಲ್ಲ. ಯಾವುದೇ ಸ್ಪಷ್ಟ ಕಾರಣವನ್ನೂ ನೀಡದೆ ತುಷಾರ್ ಸಾವಿಗೀಡಾಗಿರುವುದು ನಿಗೂಢವೆನ್ನಿಸಿದೆ.ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

   A Mysuru boy committed suicide due to deadliest blue whale game in Mysuru

   ಬ್ಲೂವ್ಹೇಲ್ ಒಂದು ಆನ್ ಲೈನ್ ಆಟವಾಗಿದ್ದು, ಇದು 50 ಟಾಸ್ಕ್ ಗಳನ್ನು ಹೊಂದಿರುತ್ತದೆ. ಎಲ್ಲ ಟಾಸ್ಕ್ ಗಳಲ್ಲೂ ವ್ಯಕ್ತಿ ತನಗೇ ತಾನು ಶಿಕ್ಷೆ ಕೊಟ್ಟುಕೊಳ್ಳಬೇಕು. ಕೊನೆಯ, ಅಂದರೆ 50 ಟಾಸ್ಕ್ ನಲ್ಲಿ ಆತ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಆಟಕ್ಕೂ, ಆತನ ಬದುಕಿಗೂ ಗುಡ್ ಬೈ ಹೇಳಬೇಕಾಗುತ್ತದೆ.

   ಇಂಥ ಅಪಾಯಕಾರಿ, ವಿವಾದಾತ್ಮಕ ಆಟದ ಬಗ್ಗೆ ಇದೀಗ ವಿಶ್ವದಾದ್ಯಂತ ಕೂಗು ಎದ್ದಿದ್ದು, ಭಾರತದಲ್ಲೂ ಎಲ್ಲ ಸಾಮಾಜಿಕ ಜಾಲತಾಣಗಳಿಂದ ಈ ಬ್ಲೂ ವ್ಹೇಲ್ ಲಿಂಕ್ ಗೇಮ್ ಅನ್ನು ತೆಗೆದುಹಾಕಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   A Mysuru boy committed suicide due to deadliest blue whale game in Mysuru. He was studying PUC and a only son for his parents.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ