ಫೆ.3 ರಿಂದ ಮೈಸೂರು ಮೃಗಾಲಯ ಪ್ರವೇಶ ಮುಕ್ತ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 2 : ಹಕ್ಕಿಜ್ವರ ಸೋಂಕು ಹರಡುವಿಕೆ ಭೀತಿಯಿಂದ ಜನವರಿ 4 ರಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದ ಮೈಸೂರು ಚಾಮರಾಜೇಂದ್ರ ಮೃಗಾಲಯವು ಫೆ.3 ರಿಂದ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪಕ್ಷಿಗಳ ರಕ್ತ, ಹಿಕ್ಕೆ ಮಾದರಿಯನ್ನು ಶೇಖರಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎರಡು ಹಂತದ ಪರೀಕ್ಷೆಯಲ್ಲೂ ಮೃಗಾಲಯದ ಪಕ್ಷಿಗಳಿಗೆ ಸೋಂಕು ತಗುಲದಿರುವುದು ಧೃಡಪಟ್ಟಿದ್ದು, ಪಕ್ಷಿಗಳ ಮಾದರಿ ವರದಿ ನೆಗೆಟೀವ್ ಆಗಿ ಬಂದಿದೆ.[ಮೈಸೂರು ಮೃಗಾಲಯ ಸೋಂಕು ಮುಕ್ತ: ಕೆಲವೇ ದಿನದಲ್ಲಿ ಪ್ರವೇಶ]

A month after the start of the re- entrance of the Zoo in Mysuru.

ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಯಂತೆ ಪಶುಸಂಗೋಪನಾ ಇಲಾಖೆ ಅನುಮತಿಯ ಮೇರೆಗೆ ಮೃಗಾಲಯವನ್ನು ಫೆ.3ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ತಿಳಿಸಿದ್ದಾರೆ.

A month after the start of the re- entrance of the Zoo in Mysuru.

ನಿನ್ನೆ(ಫೆ.1) ಸಂಜೆ ಮೃಗಾಲಯದಲ್ಲಿ 2 ವರ್ಷದ ಗಂಡು ಹುಲಿಯೊಂದು ಮೃತಪಟ್ಟಿರುವ ಘಟನೆ ನಡೆದಿದೆ. ಗಂಟಲಲ್ಲಿ ಆಹಾರ ಸಿಕ್ಕಿಹಾಕಿಕೊಂಡು, ಶ್ವಾಸ ನಾಳವು ಮುಚ್ಚಿದಂತಾಗಿ ಉಸಿರಾಡಲು ಸಾಧ್ಯಯವಾಗದೇ ಸತ್ತಿದೆ ಎಂಬ ಮಾಹಿತಿ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A month after the start of the re- entrance of the Zoo in Mysuru. Because of the infected birds were forbidden entry to the zoo for a month.
Please Wait while comments are loading...