ಪತ್ನಿಯನ್ನು ಕೊಲೆಗೈದು ನೇಣು ಹಾಕಿದ ಭೂಪ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು ,ಮಾರ್ಚ್ 14 : ಪತ್ನಿಯ ಶೀಲವನ್ನು ಶಂಕಿಸಿ ಪತಿಯೇ ಪತ್ನಿಯನ್ನು ಕೊಲೆಗೈದು ನೇಣು ಹಾಕಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಅಂಕನಹಳ್ಳಿ ನಿವಾಸಿ ಸರಳ(25) ಎಂದು ಗುರುತಿಸಲಾಗಿದೆ. ಸರಳಾ ಪತಿ ವೀರಭದ್ರಾಚಾರಿ ಪತ್ನಿಯನ್ನು ಸದಾ ಶಂಕಿಸುತ್ತಿದ್ದ ಎನ್ನಲಾಗಿದೆ.

ಹಗ್ಗದಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಅನುಮಾನ ಬಾರದಿರಲಿ ಎಂದು ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುವಾಗ ತಪ್ಪೊಪ್ಪಿಕೊಂಡಿದ್ದಾನೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A man killed his wife and hanged her in mysore

ಇಬ್ಬರು ಸರಗಳ್ಳರ ಬಂಧನ

ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ವಿಜಯನಗರ ಠಾಣಾ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧತರನ್ನು ಹೂಟಗಳ್ಳಿಯ ಮಂಜ ಅಲಿಯಾಸ್ ಕಳ್ ಮಂಜ (26), ಕುಂಬಾರಕೊಪ್ಪಲಿನ ಚಂದನ್ (24) ಎಂದು ಗುರುತಿಸಲಾಗಿದೆ.

ಆರೋಪಿಗಳು ಫೆಬ್ರವರಿ 3ರಂದು ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಂದ ಸರ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.

ಬಂಧಿತರಿಂದ 1,10,000 ರೂ.ಮೌಲ್ಯದ 40ಗ್ರಾಂ ಚಿನ್ನದ ಸರವನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಮಹೇಂದ್ರ ರೋಡಿಯೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಮಂಜ ಈ ಹಿಂದೆ ಮೈಸೂರಿನ ವಿವಿಧೆಡೆಗಳಲ್ಲಿ ಸರಗಳ್ಳತನ ನಡೆಸಿದ್ದು, ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಪತ್ತೆ ಕಾರ್ಯಾಚರಣೆಯಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎ.ಗುರುಪ್ರಸಾದ್, ಎಎಸ್ಐ ಕೃಷ್ಣ, ಧನರಾಜ್, ಸಿಬ್ಬಂದಿಗಳಾದ ದಿವಾಕರ್, ಎಸ್.ಮಹದೇವ್, ವಸಂತಕುಮಾರ್, ಸೋಮಶೆಟ್ಟಿ, ಸುರೇಶ್, ಸಲೀಂಪಾಷಾ, ಸಾಗರ್ ಪಾಲ್ಗೊಂಡಿದ್ದರು.
ಮಹಿಳೆ ಆತ್ಮಹತ್ಯೆ
ನೇಣು ಬಿಗಿದುಕೊಡು ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ. ಇಲ್ಲಿನ ಗ್ರಾಮದ ನಿವಾಸಿ 60 ವರ್ಷದ ತಾಯಮ್ಮ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆಯಾಗಿದ್ದಾರೆ.

ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ತಂಬಾಕು ಬೆಳೆದಿದ್ದ ತಾಯಮ್ಮನಿಗೆ ಬೆಳೆ ಕೈಗೂಡಲಿಲ್ಲ. ಅಲ್ಲದೆ‌ ಬೆಳೆಗಾಗಿ ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಸಾಲ ಮಾಡಿಕೊಂಡಿದ್ದರು.

ಆದರೆ ಸಾಲ ತೀರಿಸಲು ಸಾಧ್ಯವಾಗದೆ ಇರುವ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A man who is unhappy by his wife's charecter killed and hanged her. The incident took place today in Mysuru.
Please Wait while comments are loading...