ಮೇಲುಕೋಟೆ ದೇವಾಲಯದ ಕಲ್ಯಾಣಿಯಲ್ಲಿ ಮುಳುಗಿ ವ್ಯಕ್ತಿ ಸಾವು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಏಪ್ರಿಲ್ 11: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವನಾರಾಯಣಸ್ವಾಮಿ ವೈರಮುಡಿ ಉತ್ಸವದ ತೀರ್ಥೋದ್ಭವದ ವೇಳೆ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೈಸೂರು ಮೂಲದ ರವಿ ಎಂಬಾತನೇ ಸಾವಿಗೀಡಾದ ದುರ್ದೈವಿ. ಚಲುವನಾರಾಯಣಸ್ವಾಮಿ ವೈರಮುಡಿ ಉತ್ಸವಕ್ಕೆ ಕುಟುಂಬ ಸಮೇತ ಬಂದಿದ್ದ ರವಿ, ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಾಡುವ ವೇಳೆ ಮುಳುಗಿದ್ದರು. ಬಳಿಕ ಕಲ್ಯಾಣಿಯಲ್ಲಿ ಅವಿರತ ಶೋಧ ನಡೆಸಲಾಗಿತ್ತಾದರೂ ಅವರ ಸುಳಿವು ಸಿಕ್ಕಿರಲಿಲ್ಲ. ಆದರೆ ದುರದೃಷ್ಟ ಎಂಬಂತೆ ಇದೀಗ ಅವರ ಶವ ನೀರಿನಿಂದ ಮೇಲಕ್ಕೆ ತೇಲಿ ಬಂದಿದೆ.[ಉಪಚುನಾವಣಾ ಅಂಗಳದಲ್ಲಿ ದೊಡ್ಡಜಾತ್ರಾ ಸಂಭ್ರಮ]

A man drowns and dies in Kalyani in Melukote

ದೇವರ ದರ್ಶನ ಪಡೆಯಲೆಂದು ಬಂದಿದ್ದ ಕುಟುಂಬದ ಆಕ್ರಂದನವೀಗ ಮುಗಿಲುಮುಟ್ಟಿದೆ. ಮೃತದೇಹವನ್ನು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man drowned and died in Kalyani (holy pond) in Melukote Cheluvanarayana swamy temple at Pandavapura, Mandya district. The family and also temple authority felt very bad about this unfortunate incident.
Please Wait while comments are loading...