ಕಟ್ಟಿಂಗ್ ಮಷಿನ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 26 : ಜೀವನದಲ್ಲಿ ಜಿಗುಪ್ಸೆ ಹೊಂದಿದ ವ್ಯಕ್ತಿಯೊಬ್ಬ ಮಾರ್ಬಲ್ ಕಟ್ಟಿಂಗ್ ಮಷೀನ್ ನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ತೊಣಚಿಕೊಪ್ಪಲಿನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿಯಾದ ಜವರೇಗೌಡ(40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಜವರೇಗೌಡ ಮಾರ್ಬಲ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದು, ಜೀವನದ ಜಿಗುಪ್ಸೆಯಿಂದಾಗಿ ಭಾನುವಾರ ರಾತ್ರಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.[ಮುಖ್ಯಮಂತ್ರಿಗಳ ತವರಲ್ಲಿ ಸಾಲಬಾಧೆಯಿಂದ ರೈತ ಆತ್ಮಹತ್ಯೆ]

a man done suicide Cutting machine from the neck in mysuru

ಜೀವನದ ಜಿಗುಪ್ಸೆಯಿಂದಾಗಿ ಜವರೇಗೌಡ ಪ್ರತಿನಿತ್ಯ ತನ್ನ ಪತ್ನಿ ಹಾಗೂ ಮಗಳಿಗೆ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಲು ಯತ್ನಿಸುತ್ತಿದ್ದನಂತೆ. ಈ ನಡುವೆ ಭಾನುವಾರ ರಾತ್ರಿ ಜವರೇಗೌಡ ಮಗಳ ಕತ್ತು ಹಿಸುಕಲು ಮುಂದಾಗಿದ್ದಾನೆ. ಈ ವೇಳೆ ಎದುರಿಗೆ ಬಂದ ಪತ್ನಿ ಜವರೇಗೌಡ ಅವರನ್ನು ತಡೆದಿದ್ದಾರೆ. ಬಳಿಕ ಜವರೇಗೌಡ ತಾನೇ ಮಾರ್ಬಲ್ ಕಟ್ಟಿಂಗ್ ಮಷಿನ್ ನಿಂದ ಕತ್ತು ಕುಯ್ದುಕೊಂಡು ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.[ಕೃಷ್ಣ ಕೊಲೆ ಪ್ರಕರಣ : ಐವರು ಆರೋಪಿಗಳು ಪೊಲೀಸರಿಗೆ ಶರಣು]

ಸ್ಥಳಕ್ಕೆ ಸರಸ್ವತಿ ಪುರಂ ಠಾಣಾ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೃಷ್ಣ ಕೊಲೆ ಪ್ರಕರಣ: ಡಿ.31ರ ವರೆಗೆ ಪೊಲೀಸ್ ಕಸ್ಟಡಿಗೆ ಆರೋಪಿಗಳು

ಮೈಸೂರು: ಮೈಸೂರಿನ ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿ ಮೊಹಲ್ಲಾ 6ನೇ ಮುಖ್ಯರಸ್ತೆಯಲ್ಲಿ ಶುಕ್ರವಾರ ಹಾಡಹಗಲೇ ಪಡುವಾರಹಳ್ಳಿ ಚಿಕನ್ ಸೆಂಟರ್ ಕೃಷ್ಣ ಅಲಿಯಾಸ್ ಬೆಣ್ಣೆ ಕೃಷ್ಣನನ್ನು ಮುಸುಕುಧಾರಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ಬಂಧಿತರನ್ನು ಡಿ.31ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಕೊಲೆ ಕೃತ್ಯದಲ್ಲಿ ಭಾಗಿಯಾದ ರೌಡಿಶೀಟರ್ ವಿನಾಯಕ ನಗರದ ಭರತ್(29), ಹೇಮಂತ್(29), ಸಂದೇಶ್(23), ಮೂರ್ತಿ ಅಲಿಯಾಸ್ ಕಾಟು(26), ಅಶೋಕ(32), ಚಾಮುಂಡಿಬೆಟ್ಟದ ಸಂಜು ಅಲಿಯಾಸ್ ಸ್ಯಾಮ್ ಸನ್(29), ಸಿದ್ದರಾಮನ ಹುಂಡಿಯ ಧರ್ಮ (27) ಇವರನ್ನು ಬಂಧಿಸಲಾಗಿತ್ತು.[ಮೈಸೂರಿನಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ]

a man done suicide Cutting machine from the neck in mysuru

ಬಂಧಿತರನ್ನು ಡಿಸೆಂಬರ್ 31ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನುಳಿದಿರುವ ಆರೋಪಿಗಳನ್ನು ಹುಡುಕಲು ಪೊಲೀಸ್ ತಂಡ ರಚಿಸಲಾಗಿದ್ದು, ತಂಡವು ಮಂಡ್ಯ, ಬೆಂಗಳೂರು, ಮಡಿಕೇರಿಗಳಿಗೆ ತೆರಳಿವೆ.

ಆರೋಪಿಗಳು ಕೊಲೆ ಕೃತ್ಯಕ್ಕೆ ಬಳಸಲಾದ ಕಾರು, ಮಚ್ಚು, ಲಾಂಗ್ ಗಳು ಹಾಗೂ ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಡಿ.31ರ ವರೆಗೆ ಬಂಧಿತರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಪೊಲೀಸರು ವಿಚಾರಣೆ ಮುಂದಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two-crime case one is a man done suicide Cutting machine from the neck in Mysuru, other one is Krishna murder accused to police custody till December 31
Please Wait while comments are loading...