ಮೊದಲ ಪತ್ನಿಗೆ ಕೈ ಕೊಟ್ಟು ಎರಡನೇ ಮದುವೆಗೆ ಮುಂದಾದ ಮಹಾಶಯ

Posted By:
Subscribe to Oneindia Kannada

ಮೈಸೂರು, ಜುಲೈ 13: ಪ್ರೀತಿಸಿ ನಂತರ ಮದುವೆಯಾಗಿ 2 ವರುಷವಾದ ಬಳಿಕ ತನ್ನ ಪೋಷಕರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಮರು ಮದುವೆಯಾಗಲು ಮುಂದಾದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೋಲಾರದಲ್ಲಿ ಯುವತಿಯೋರ್ವಳನ್ನು ಮದುವೆಯಾಗಿ ಮನೆಯವರು ನಿನ್ನನ್ನು ಒಪ್ಪಲ್ಲ ಎಂಬ ಕಾರಣ ನೀಡಿ, ಮರುಮದುವೆಯಾಗಲು ಮುಂದಾಗಿದ್ದಾನೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿಕ್ಕ ಅಂಕಂಡಹಳ್ಳಿಯ ಲೋಕೇಶ್ ಮತ್ತು ಗಾಂಧಿನಗರದ ನಿವಾಸಿ ನೇತ್ರ ಎಂಬುವವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 2016 ರ ಆಗಸ್ಟ 29ರಂದು ದೊಡ್ಡ ಶಿವಾರ ಎಂಬಲ್ಲಿನ ಶಿವ ದೇವಾಲಯದಲ್ಲಿ ಗುಟ್ಟಾಗಿ ಮದುವೆಯಾಗಿದ್ದು ಅನಂತರ ಮನೆಯವರು ಒಪ್ಪುತ್ತಿಲ್ಲವೆಂದು ನೇತ್ರಳಿಗೆ ವಂಚಿಸಿದ್ದಾನೆ .

ಮೈಸೂರು: ಕಾಂಗ್ರೆಸ್‍ ಕಾರ್ಯಕರ್ತರಿಂದ ಹಲ್ಲೆ, ಜೆಡಿಎಸ್ ಮುಖಂಡ ಸಾವು

A Kolar man has detained by Mysuru police in connection with a cheating case

ಇದರಿಂದ ನೇತ್ರ ನ್ಯಾಯಕ್ಕಾಗಿ ಆತನ ಮನೆಯ ಮುಂದೆ ಧರಣಿ ಕುಳಿತಿದ್ದಾಳೆ. ವಿಷಯ ತಿಳಿದ ಆತನ ಮನೆಯವರು ಮನೆಗೆ ಬೀಗ ಜಡಿದು ಪರಾರಿಯಗಿದ್ದು ನಂಜನಗೂಡಿನ ತನ್ನ ಸಂಬಂಧಿ ಮನೆಯಲ್ಲಿ ಲೋಕೇಶ್ ಪತ್ತೆಯಾಗಿದ್ದಾನೆ. ಈತ ಮೈಸೂರು ಮೂಲದ ಯುವತಿಯನ್ನು ಸಹ ಪುಸಲಾಯಿಸಿ ಮರು ಮದುವೆಯಾಗಿದ್ದು ಈಗ ನಂಜನಗೂಡು ಪೊಲೀಸರ ಅಥಿತಿಯಾಗಿದ್ದಾನೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Kolar man has detained by Mysuru police in connection with a cheating case. He was trying for 2nd marriage.
Please Wait while comments are loading...