ಕಳ್ಳತನ ಆರೋಪ, ಗೃಹಿಣಿಯ ಜೀವ ತೆಗೆದ ಸಾವಿರ ರೂಪಾಯಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,22: ಒಂದು ಸಾವಿರ ರೂ. ಕಳವು ಮಾಡಿರುವ ಆರೋಪಕ್ಕೆ ಒಳಗಾದ ಗೃಹಿಣಿಯೋರ್ವಳು ಮನನೊಂದು ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ನಗರದ ಮಂಡಿ ಮೊಹಲ್ಲಾದಲ್ಲಿ ನಡೆದಿದೆ.

ಮಂಡಿ ಮೊಹಲ್ಲಾ ನಿವಾಸಿ ತಬಸುಮ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತಿ ಕಲೀಂ, ಅತ್ತೆ ಅಮೀನಾ, ಮಾವ ರೆಹಮಾನ್, ಭಾವ ಸಲೀಂ ಹಾಗೂ ನಾದಿನಿಯರಾದ ಸಲ್ಮಾ, ಅಮ್ರೋಲ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮನೆಯಿಂದ ಪರಾರಿಯಾಗಿದ್ದಾರೆ.[ಮಾಯಾವಿ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ ಗಂಡಸರೆಷ್ಟು?]

A house wife commits suicide by harassment of husband family in Mysuru

ಕಳೆದ ಎರಡು ವರ್ಷದ ಹಿಂದೆ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಕಲೀಂ ಎಂಬುವವರ ಜೊತೆ ತಬಸುಮ್ ಎಂಬುವವರು ವಿವಾಹವಾಗಿದ್ದರು. ಬಳಿಕ ತಬಸುಮ್ ಗೆ ವರದಕ್ಷಿಣೆಗಾಗಿ 2 ವರ್ಷದಿಂದ ನಿರಂತರ ಕಿರುಕುಳ ನೀಡುತ್ತಿದ್ದರು. ಕುಟುಂಬದವರು ನೀಡುವ ಹಿಂಸೆಯನ್ನು ಸಹಿಸಿಕೊಂಡು ಬದುಕುತ್ತಿದ್ದರು.[ಮಹಿಳೆಯರೇ,ನೀವು ವರದಕ್ಷಿಣೆ ಹಿಂಸೆ ಅನುಭವಿಸ್ತಿದ್ರೆ ಹೀಗೆ ಮಾಡಿ]

ಏಕಾಏಕಿ ಮನೆಯಲ್ಲಿ ಇಟ್ಟಿದ್ದ ಒಂದು ಸಾವಿರ ರೂ. ಕಾಣೆಯಾಗಿದೆ. ಆದರೆ ಅದನ್ನು ನೀನೇ ಕಳ್ಳತನ ಮಾಡಿದ್ದೀಯ ಎಂದು ಗಂಡನ ಮನೆಯವರೆಲ್ಲರೂ ಸೇರಿಕೊಂಡು ತಬಸುಮ್ ಗೆ ಇನ್ನಷ್ಟು ಹಿಂಸೆ ನೀಡಿದ್ದಾರೆ. ಇದರಿಂದ ಮನನೊಂದ ಗೃಹಿಣಿ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[ಅರಿಶಿಣದ ಮೈ ಆರುವ ಮುನ್ನ ಮಹಿಳೆ ಜೀವನವೇ ಬಾಡಿತು]

ಈಕೆಯ ನಾದಿನಿಯರಾದ ಸಲ್ಮಾ, ಅಮ್ರೋಲ್ ಕೂಡಾ ಅತ್ತಿಗೆ ತಬಸುಮ್ ಗೆ ಕಾಟ ಕೊಡುತ್ತಿದ್ದರು. ಗಂಡನ ಮನೆಯವರ ಹಿಂಸೆಯಿಂದಲೇ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಮೃತಳ ತಾಯಿ ಮಂಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಂಡಿ ಠಾಣೆಯ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.[ಗಂಡನ ವಿರುದ್ಧ ಸುಳ್ಳು ದೂರು ದಾಖಲಿಸಿದರೆ ಪತ್ನಿಗೆ ಸಂಕಷ್ಟ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A house wife Tabassum committed suicide by harassment of husband family in Mysuru on Monday, March 21st.
Please Wait while comments are loading...