ಹೆಜ್ಜೇನು ದಾಳಿಗೆ ಮೈಸೂರು ರೈತ ಸಾವು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್, 30: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಕೆ.ಆರ್.ನಗರ ತಾಲೂಕಿನ ಚಿಬುಕಹಳ್ಳಿ ಗ್ರಾಮದ ರೈತ ಮಂಗಳವಾರ ಮೃತಪಟ್ಟಿದ್ದಾರೆ.

ಗ್ರಾಮದ ನಿವಾಸಿ ಬಂದಿಗೌಡ (63) ಮೃತಪಟ್ಟ ರೈತ. ಪತ್ನಿ, 5 ಮಂದಿ ಹೆಣ್ಣು ಮಕ್ಕಳು, ಓರ್ವ ಪುತ್ರನನ್ನು ಹೊಂದಿದ್ದ ಕುಟುಂಬ ಸಂಕಷ್ಟಕ್ಕೀಡಾಗಿದ್ದು, ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.[ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ]

Mysuru

ತಮ್ಮ ಜಮೀನಿನಲ್ಲಿ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಜೇನು ಹುಳುಗಳು ಬಂದೀಗೌಡ ಅವರನ್ನು ತೀವ್ರವಾಗಿ ಕಚ್ಚಿ ಗಾಯಗೊಳಿಸಿವೆ. ತಕ್ಷಣವೇ ಅಕ್ಕಪಕ್ಕದ ಜಮೀನಿನ ರೈತರು ಸ್ಥಳಕ್ಕೆ ಬಂದು ಬೆಂಕಿ ಹೊಗೆ ಹಾಕಿ ಜೇನುಹುಳಗಳನ್ನು ಓಡಿಸಿದ್ದಾರೆ. ಬಳಿಕ ಈತನನ್ನು ಚಿಕಿತ್ಸೆಗಾಗಿ ಕೆ.ಆರ್.ನಗರ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.[ವಿಶ್ವದ ಅತೀ ತೂಕದ ವ್ಯಕ್ತಿ ಆಂಡ್ರೆಸ್ ಮೊರೆನೊ ಇನ್ನಿಲ್ಲ]

ಸ್ಥಳಕ್ಕೆ ಕೆ.ಆರ್.ನಗರ ತಹಸೀಲ್ದಾರ್ ಜಿ.ಹೆಚ್.ನಾಗರಾಜು, ಚುಂಚನಕಟ್ಟೆ ನಾಡ ಕಚೇರಿಯ ಉಪ ತಹಶೀಲ್ದಾರ್ ತಿಮ್ಮಯ್ಯ, ರಾಜಸ್ವ ನಿರೀಕ್ಷಕ ಕೋಟೇಗೌಡ, ಗ್ರಾಮ ಲೆಕ್ಕಿಗ ವಿಜಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A farmer Bandigowda (63) died bee attack in Chibukanahalli, K R Nagar, Mysuru on Tuesday, December 29th.
Please Wait while comments are loading...